ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಪ್ರತಿಯೊಬ್ಬರಿಗೂ ಅವರದ್ದೇ ಆದ ಕನಸುಗಳಿರುತ್ತೆ. ಆ ಕನಸುಗಳು ಯಾರೊಬ್ಬರಿಗೂ ಸೀಮಿತ ಅಲ್ಲವೇ ಅಲ್ಲ. ಇದಕ್ಕೆ ಉದಾಹರಣೆ ಬೆಂಗಳೂರಿನಲ್ಲಿ ನೆಲೆಸಿರುವ ಹುಬ್ಬಳ್ಳಿ ಯುವತಿಯು ತಾನು ಕಂಡ ಕನಸನ್ನು ನನಸು ಮಾಡಲು ಹೊರಟಿರುವುದು ಇಂದು ಪ್ರತಿಯೊಬ್ಬರಿಗೂ ಹೆಮ್ಮೆ ಅನ್ನಿಸದೆ ಇರದು.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಹೌದು, ಮೂಲತ: ಹುಬ್ಬಳ್ಳಿ ನಿವಾಸಿಯಾಗಿರುವ 28 ವರ್ಷದ ಕ್ಯಾಂಡಿಡಾ ಲೂಯಿಸ್‌ ಅವರಿಗೆ ತಮ್ಮ ಓದು ಬರಹ ಜೊತೆ ಜೊತೆಗೆ ಬೈಕ್ ರೈಡಿಂಗ್ ಬಗ್ಗೆ ಎಲ್ಲಿಲ್ಲದ ಕ್ರೇಜ್. ಅದು ಎಷ್ಟರ ಮಟ್ಟಿಗೆ ಅಂದ್ರೆ ಬೈಕ್ ಮೂಲಕವೇ ಇಡೀ ವಿಶ್ವವನ್ನೇ ತಿರಗಲು ಸಿದ್ದವಾಗಿರುವ ಈ ಯುವತಿಯ ಕನಸಿನ ದಿನಗಳು ಇದೀಗ ಹತ್ತಿರವಾಗುತ್ತಿದ್ದು, ಬೆಂಗಳೂರು ಟು ಸಿಡ್ನಿ ತನಕ ಸೋಲೋ ಬೈಕ್ ರೈಡಿಂಗ್‌ ಪ್ರವಾಸ ಕೈಗೊಂಡಿದ್ದಾರೆ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಬೈಕ್‌ನಲ್ಲಿ ಏಕಾಂಗಿಯಾಗಿ ಬೆಂಗಳೂರಿನಿಂದ ಸಿಡ್ನಿವರೆಗಿನ ಸೋಲೋ ಪ್ರವಾಸ ಕೈಗೊಂಡಿರುವ ಕ್ಯಾಂಡಿಡಾ ಲೂಯಿಸ್ ಸದ್ಯ ತಮ್ಮ ಕನಸಿನ ಮೊದಲ ಹೆಜ್ಜೆಯಿರಿಸಿದ್ದು, ತಮ್ಮ ಗುರಿಸಾಧನೆ ಮಾಡಬೇಕಿರುವ ಹರಸಾಹಸ ಬಲು ರೋಚಕವಾಗಿದೆ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

28 ಸಾವಿರ ಕಿ.ಮೀ ದೂರ- 120 ದಿನ..!

ಅಂದಹಾಗೆ, ಲೂಯಿಸ್ ಅವರು ಹೊರಟಿರುವ ಸೋಲೋ ರೈಡ್ ಬಿಂದಾಸ್‌ ಆಗಿ ತಿರುಗಾಡುವ ಪ್ರವಾಸ ಅಲ್ಲವೇ ಅಲ್ಲ. ಏಕಾಂಗಿಯಾಗಿ ಬೈಕಿನಲ್ಲಿ ಸುಮಾರು 120 ದಿನಗಳ ಕಾಲ 28 ಸಾವಿರ ಕಿ. ಮೀ ಗಳನ್ನು ಕ್ರಮಿಸಿ 10 ರಾಷ್ಟ್ರಗಳನ್ನು ಸುತ್ತುವ ಕನಸಿನ ಪ್ರಯಾಣವಿದು.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಇದಕ್ಕಾಗಿ ಇವರು ಮಣಿಪುರ್‌, ಮ್ಯಾನ್ಮಾರ್‌, ಥೈಲ್ಯಾಂಡ್‌, ವಿಯೆಟ್ನಾಂ, ಕಾಂಬೋಡಿಯಾ, ಮಲೇಷಿಯಾ, ಸಿಂಗಾಪುರ್‌ ಹಾಗೂ ಇಂಡೋನೇಷಿಯಾ ಮುಖಾಂತರ ದ್ವೀಪಗಳನ್ನು ದಾಟಿ ಕೊನೆಗೆ ಸಿಡ್ನಿ ತಲುಪಬೇಕಿದ್ದು, 120 ದಿನಗಳ ಕಾಲ ಸಾಗಬೇಕಿರುವ ಇವರ ಜರ್ನಿ ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಓದಿನ ದಿನಗಳಿಂದಲೇ ಬೈಕ್ ರೈಡಿಂಗ್‌ನಲ್ಲಿ ತಮ್ಮ ಸಾಧನೆ ತೋರುತ್ತಿರುವ ಕ್ಯಾಂಡಿಡಾ ಲೂಯಿಸ್‌ ಈಗಾಗಲೇ ದೇಶಾದ್ಯಂತ 20 ಸಾವಿರ ಕಿ.ಮೀ ದೂರ ಕ್ರಮಿಸುವ ಮೂಲಕ ದೇಶದ ನಾನಾ ಭಾಗಗಳಿಗೆ ಭೇಟಿ ನೀಡಿರುವುದಲ್ಲದೇ ಮಹಿಳೆ ಯಾವುದರಲ್ಲೂ ಕಮ್ಮಿಅಲ್ಲ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಹೊರ ರಾಷ್ಟ್ರಗಳಲ್ಲೂ ಮಿಂಚಿರುವ ಕ್ಯಾಂಡಿಡ್

ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಿಗಳಲ್ಲೂ ಲಾಂಗ್ ರೈಡ್ ಬೈಕ್ ಚಾಲನೆ ಮಾಡಿರುವ ಕ್ಯಾಂಡಿಡಾ ಅವರು ಬೆಂಗಳೂರಿನಿಂದ ಲಂಡನ್‌ ತನಕ ಬೈಕ್ ಸವಾರಿ ಮಾಡುವ ಮತ್ತೊಂದು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಹತ್ತಾರು ಸಾಹಸಿ ಬೈಕ್ ರೈಡ್‌ಗಳನ್ನು ಕರಗತ ಮಾಡಿಕೊಳ್ಳುತ್ತಿರುವ ಕ್ಯಾಂಡಿಡಾ ಇದೀಗ ಸಿಡ್ನಿಯತ್ತ ತಮ್ಮ ಪ್ರಯಾಣ ಆರಂಭಿಸಿದ್ದಾರೆ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಇನ್ನು ವಿದೇಶಿ ಪ್ರಯಾಣ ಅಂದ್ರೆ ಬೈಕ್ ರೈಡಿಂಗ್ ವೇಳೆ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಜೊತೆಗೆ ದೈಹಿಕ ಕ್ಷಮತೆ ಇದ್ದಾಗ ಮಾತ್ರವೇ ದೀರ್ಘಾವಧಿಯ ಪ್ರಯಾಣ ಬೆಳೆಸಲು ಶಕ್ತರಾಗಿರುತ್ತೇವೆ. ಇದಕ್ಕಾಗಿ ಕ್ಯಾಂಡಿಡಾ ಲೂಯಿಸ್ ಮಾಡಿದ ವರ್ಕೌಟ್ ಅಷ್ಟಿಷ್ಟಲ್ಲ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್‌ ಇರಲು ವಾರದಲ್ಲಿ ನಾಲ್ಕೈದು ಬಾರಿ ಬೈಕ್‌ ರೈಡಿಂಗ್‌ ಮಾಡುತ್ತಲೇ ಇರುವ ಇವರು ತಮ್ಮ ಫಿಟ್ನೆಸ್‌ ಕಾಯ್ದಕೊಂಡಿದ್ದಾರೆ. ಆದ್ರೆ ಇವರು ಎಂದಿಗೂ ಜಿಮ್‌ಗೆ ಹೋಗಿಲ್ಲವಾದರೂ ದೈಹಿಕವಾಗಿ ಕಸರತ್ತು ವೃದ್ಧಿಸಲು ಬೈಕ್ ರೈಡಿಂಗ್ ಸಾಕು ಎನ್ನುತ್ತಾರೆ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ನನ್ನ ಕನಸು ನನಸಾಗುತ್ತಿದೆ.!

ಬೈಕ್ ಮೂಲಕ ಪ್ರಯಾಣ ಬೆಳೆಸಿರುವುದು ನನ್ನ ಮನಸ್ಸಿಗೆ ಖುಷಿಯಾಗುವುದು ಮಾತ್ರವಲ್ಲ, ವಿವಿಧ ರಾಷ್ಟ್ರಗಳ ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿಯೇ ಜೀವನದಲ್ಲಿ ರಿಸ್ಕ್ ತೆಗಿದುಕೊಳ್ಳುವ ಮೂಲಕ ನನ್ನ ಕನಸಿನ ಗುರಿತಲುಪಲು ಹೊರಟಿರುವುದಾಗಿ ಖುಷಿ ವ್ಯಕ್ತಪಡಿಸಿದ್ದಾರೆ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿ.!

ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಆದ್ರೆ ಅವರಿಗೆ ಪ್ರೋತ್ಸಾಹಿಸುವ ಅಗತ್ಯತೆ ಇದೆ. ನಾನು ಕೂಡಾ ಮೊದಮೊದಲು ಈ ಕ್ಷೇತ್ರಕ್ಕೆ ಬಂದಾಗ ಸ್ವತಃ ಅಮ್ಮನೇ ವಿರೋಧಿಸಿದ್ದರು. ಆದ್ರೆ ನನ್ನ ಸಾಧನೆ ಹಾದಿ ಕಂಡು ಅವರೇ ಇಂದು ಬೆನ್ನುತಟ್ಟುತ್ತಿದ್ದು, ನನ್ನ ಸಾಧನೆಗೆ ಅದು ಮತ್ತಷ್ಟು ಸ್ಪೂರ್ತಿ ಎನ್ನುತ್ತಾರೆ ಲೂಯಿಸ್.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಪ್ರಯಾಣದ ಖರ್ಚು ಲಕ್ಷ-ಲಕ್ಷ!

ಹುಬ್ಬಳ್ಳಿಯಲ್ಲೇ ಬಿಕಾಂ ಪದವಿ ಮುಗಿಸಿರುವ ಕ್ಯಾಂಡಿಡ್ ಲೂಯಿಸ್ ಅವರು ಸದ್ಯ ಇನ್ಫೊಸಿಸ್ ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಂದ ವೇತನದಲ್ಲಿ ಅರ್ಧಕ್ಕೂ ಹೆಚ್ಚು ಬೈಕ್ ರೈಡಿಂಗ್‌ಗಾಗಿ ಖರ್ಚು ಮಾಡುತ್ತಿರುವ ಈ ಹೆಣ್ಣುಮಗಳಿಗೆ ಅದರಲ್ಲೇ ಹೊಸ ಜಗತ್ತು ಕಾಣುವ ಹೆಬ್ಬಯಿಕೆಯಿದೆ.

ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಅದಕ್ಕಾಗಿ ತಾನು ಕಂಡ ಕನಸಿನಂತೆ ಬೆಂಗಳೂರಿನಿಂದ ಸಿಡ್ನಿಗೆ ಬೈಕ್ ಪ್ರಯಾಣ ಆರಂಭಿಸಿರುವ ಲೂಯಿಸ್ ಕ್ಯಾಂಡಿಡಾ ಅವರು ವಿದೇಶಿಗಳಲ್ಲೂ ಭಾರತೀಯ ಹೆಣ್ಣುಮಕ್ಕಳ ಧೈರ್ಯವಂತಿಕೆಯನ್ನು ಪ್ರದರ್ಶಿಸುವ ತವಕದಲ್ಲಿದ್ದು, ಕ್ಯಾಂಡಿಡಾ ಲೂಯಿಸ್ ಅವರ ಪ್ರಯಾಣ ಸುಖಕರವಾಗಿರಲೆಂದು ಹಾರೈಸೋಣ.

ಅಡ್ವೆಂಚರ್ ವಿಭಾಗದಲ್ಲಿ ಮಿಂಚುತ್ತಿರುವ ಡೋಮಿನಾರ್ 400 ಬೈಕ್‌ಗಳಿಗೆ ಸಖತ್ ಟಕ್ಕರ್ ನೀಡುತ್ತಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್‌ಗಳು ಹೀಗಿವೆ ನೋಡಿ.

Most Read Articles

Kannada
Read more on off beat
English summary
Benglure biker rides to spread dreams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X