ಬೆಂಗಳೂರಿನ ಹಲವು ರಸ್ತೆಗಳು ಫುಲ್ ಜಾಮ್... ಕಾರಣ ಕೊಟ್ಟ ಎಸ್‌ಪಿ

ಸಿಲಿಕಾನ್ ಸಿಟಿ ಬೆಂಗಳೂರನ್ನು ನೆನಪಿಸಿಕೊಂಡರೆ, ಹತ್ತು ಹಲವು ಸಂಗತಿಗಳು ಕಣ್ಣ ಮುಂದೆ ಬಂದರೂ, ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕರ ಕಣ್ಣಿಗೆ ಬೀಳುವುದು ಟ್ರಾಫಿಕ್ ಜಾಮ್. ವಿಶ್ವದಲ್ಲಿಯೇ ಅತಿದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಇಂದು ಬೆಳಗ್ಗೆ ಕೂಡ ಸುಮಾರು 4 ಕಿಲೋಮೀಟರ್‌ ಹೆಚ್ಚು ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದ್ದಾರೆ.

ಬೆಂಗಳೂರಿನ ವರ್ತುಲ ರಸ್ತೆಯ ಇಬ್ಬಲೂರು ಬಳಿ ಇರುವ ಸರ್ವಿಸ್ ರಸ್ತೆಯ ಮಿಲಿಟರಿ ಗೇಟ್ ಬಳಿ ಟ್ರಕ್ ಮರಕ್ಕೆ ಡಿಕ್ಕಿ ಹೊಡೆದು, ಮರ ರಸ್ತೆಗೆ ಉರುಳಿದೆ. ಇದರ ಇದರ ಪರಿಣಾಮ 4 ಕಿಲೋಮೀಟರ್‌ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಬೆಂಗಳೂರು ಸಂಚಾರ ಪೊಲೀಸ್, ಸಿಲ್ಕ್ ಬೋರ್ಡ್ ನಿಂದ ಇಬ್ಬುಲೂರು ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಬದಲಿ ರಸ್ತೆ ಮಾರ್ಗದಲ್ಲಿ ಪ್ರಯಾಣ ಬೆಳಸುವಂತೆ ಸೂಚನೆ ನೀಡಿದ್ದರು.

bengalurus traffic jam

ಮರ ಬಿದ್ದಿರುವ ಕಾರಣ ಪ್ರಯಾಣಿಕರು ಸಿಲ್ಕ್ ಬೋರ್ಡ್​ನಿಂದ ಇಬ್ಬುಲೂರು ಜಂಕ್ಷನ್ ಕಡೆಗೆ ಪ್ರಯಾಣೆಸಲು ಪರದಾಡಿದ್ದರು. ಇನ್ನು ಹಲವರು ಟ್ವಿಟ್ ಮಾಡಿ, ಈ ಅಪಘಾತ ಆಗುವ ಮುನ್ನವೆ ಯೋಜನೆ ಮಾಡಬೇಕಿತ್ತು. ಇಂತಹ ವಾಹನವನ್ನು ರಸ್ತೆಗೆ ಬಿಡದೇ ತಡೆಯಬೇಕಿತ್ತು ಎಂದು ಮೂಲಕ ಪ್ರಶ್ನಿಸಿದ್ದಾರೆ. ಕಿಲೋಮೀಟರ್‌ ಹೆಚ್ಚು ದೂರ ಟ್ರಾಫಿಕ್ ಜಾಮ್ ನಲ್ಲಿ ಆಂಬುಲೆನ್ಸ್ ಕೂಡ ಸಿಲುಕಿಕೊಂಡಿತು.

ಬೆಂಗಳೂರು ಟ್ರಾಫಿಕ್ ಪೊಲೀಸರು ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿದ್ದಾರೆ. ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಸದಾ ಸೂಚನೆಗಳನ್ನು ನೀಡುತ್ತಲೆ ಇರುತ್ತಾರೆ. ಇದು ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಬೆಳಗ್ಗೆ 9 ಗಂಟಿಯಿಂದಲೂ ಬೆಂಗಳೂರಿನ ಸರ್ಜಾಪುರ/ಬೆಳ್ಳಂದೂರು ಬೊಮ್ಮನಹಳ್ಳಿ, ಕೋರಮಂಗಲ, ಎಚ್‌ಎಸ್‌ಆರ್‌, ಮಡಿವಾಳದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ಸವಾರರು ಹೈರಣಾದರು. ಅಲ್ಲದೆ ವಾಹನ ಸವಾರರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಮಾರತ್ತಹಳ್ಳಿ ನಡುವೆ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವಾಹನ ಸವಾರರು ದೂರಿದರು. ಅನೇಕರು 2 ಕಿ.ಮೀಗಳಷ್ಟು ಸಹ ಕ್ರಮಿಸಲು 1.5 ಗಂಟೆಗಳಷ್ಟು ಸಮಯ ತೆಗೆದುಕೊಂಡಿದ್ದಾರೆ. ಟ್ರಾಫಿಕ್ ಜಾಮ್ ನಿಂದ ಬೆಳ್ಳಂದೂರಿನಲ್ಲಿ ಕೆಲಸ ಮಾಡುವ ಅನೇಕ ಟೆಕ್ಕಿಗಳು ಮನೆಗೆ ಮರಳಿದರು. ನೆಟ್ಟಿಗರು, ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಧವಲ್ ಚೌಧರಿ ಅವರು ಟ್ವಿಟ್ಟರ್ ನಲ್ಲ್ಲಿ "ಬೆಂಗಳೂರಿನಲ್ಲಿ ಇಂದು ಕ್ಯಾಬ್‌ನಿಂದ ಕೆಲಸ ಮಾಡುತ್ತಿರುವುದು ಸರ್ಜಾಪುರ ಜಂಕ್ಷನ್ ನಡುವೆ ಆಕ್ಸಾ ಬಿಲ್ಡಿಂಗ್ ಬಿಟಿಎಂ (7 ಕಿಮೀ) ವರೆಗೆ ದೊಡ್ಡ ಟ್ರಾಫಿಕ್ ಜಾಮ್ ಆಗಿದೆ". ಖಾಲಿದ್ ಶೇಕ್ ಎಂಬ ಮತ್ತೊಬ್ಬರು, ಕಚೇರಿ 9 ಕ್ಕೆ ಪ್ರಾರಂಭವಾಯಿತು ಮತ್ತು ಇನ್ನೂ 1.5 ಗಂಟೆಗಳಿಗೂ ಹೆಚ್ಚು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ ಮತ್ತು ಗೂಗಲ್ ಇನ್ನೊಂದು 1.5 ಗಂಟೆಗಳನ್ನು ತೋರಿಸುತ್ತಿದೆ, ಕೆಟ್ಟ ಟ್ರಾಫಿಕ್ ಜಾಮ್ ಎಂದು ಬರೆದುಕೊಂಡಿದ್ದಾರೆ.

2019 ರಲ್ಲಿ, ರಾಜ್ಯ ಸರ್ಕಾರವು ಸುಮಾರು 14.3 ಕೋಟಿ ವೆಚ್ಚದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಆರ್ ಪುರಂ ನಡುವಿನ 17 ಕಿಮೀ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಮೀಸಲಾದ ಬಸ್ ಲೇನ್ 'ಬಸ್ ಆದ್ಯತಾ ಲೇನ್' ಅನ್ನು ಮಾಡಿದ್ದರು. ಆದರೆ ಮೆಟ್ರೋ ಕಾಮಗಾರಿ ಆರಂಭವಾದ ಬಳಿಕ ಲೇನ್ ಗಳು ಕಿತ್ತು ಹೋಗಿವೆ. ಮೆಟ್ರೋ ಕಾಮಗಾರಿಯು ಎರಡೂ ಬದಿಗಳಲ್ಲಿ 4.5 ಮೀಟರ್‌ಗಳನ್ನು ತೆಗೆದುಕೊಂಡಿತು (ಒಟ್ಟು 9 ಮೀ) ಇದು ರಸ್ತೆಯ ಅಗಲವನ್ನು ಕಡಿಮೆ ಮಾಡಿದೆ.

ORR ಮೆಟ್ರೋ (ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ) ಗಾಗಿ BMRCL ಯೋಜನಾ ವರದಿಯ ಪ್ರಕಾರ, "ORR/ಹಂತ 2A ಬೆಂಗಳೂರಿನ ನಿರ್ಣಾಯಕ IT ಕಾರಿಡಾರ್ ಮೂಲಕ ಹಾದುಹೋಗುತ್ತದೆ, ಅದು $21.38 ಬಿಲಿಯನ್ ಅಥವಾ ಬೆಂಗಳೂರಿನ ಒಟ್ಟು IT ಆದಾಯದ $66.80 ಶತಕೋಟಿಯಾಗಿದ್ದು, ಇದು 32% ನಷ್ಟ ವಿದೆ, ಈ 17 ಕಿಮೀ ಕಾರಿಡಾರ್ S&P 500 ಕಂಪನಿಗಳಿವೆ.

ಇದರಲ್ಲಿ ಇಂಟೆಲ್, ಮೈಕ್ರೋಸಾಫ್ಟ್, ಆಕ್ಸೆಂಚರ್, ಅಡೋಬ್ ಮತ್ತು ಸಲಹಾ/ಹಣಕಾಸು/ನಿರ್ವಹಣಾ ಸಂಸ್ಥೆಗಳಾದ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ಮೋರ್ಗಾನ್ ಸ್ಟಾನ್ಲಿ ಮುಂತಾದ ಹಲವಾರು ಪ್ರಮುಖ ಐಟಿ ದೈತ್ಯರು ಸೇರಿದಂತೆ, ಕ್ಯಾಂಪಸ್‌ಗಳಲ್ಲಿ 5.5 ಲಕ್ಷ ವೃತ್ತಿಪರರನ್ನು ನೇಮಿಸಿಕೊಂಡಿದ್ದಾರೆ. ಇಲ್ಲಿ 8Kmph ನಷ್ಟು ಪೀಕ್ ಅವರ್ ವೇಗ ಹೊಂದಿದೆ, ಇದರ ಪರಿಣಾಮವಾಗಿ ಪ್ರತಿ ಉದ್ಯೋಗಿಗೆ ವರ್ಷಕ್ಕೆ 470 ಗಂಟೆಗಳು ನಷ್ಟ, ORR ಕಂಪನಿಗಳ ಸಂಘದ ಪ್ರಕಾರ ವಾರ್ಷಿಕ $ 4.75 ಶತಕೋಟಿ ನಷ್ಟವನ್ನು ಉಂಟುಮಾಡುತ್ತದೆ.

Article Published On: Tuesday, May 16, 2023, 16:43 [IST]
English summary
Bengaluru traffic jam fallen tree on tech corridor details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+