ಕೇವಲ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ದುಬಾರಿ ಕಾರಿನ ಮಾಲೀಕ ಬಕೆಟ್ ನೀರಿನಿಂದ ಫೇಮಸ್!
ಜನರು ತಮ್ಮ ವಾಹನಗಳನ್ನು ಸದಾ ಹೊಸದಾಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ನಿತ್ಯ ತಮ್ಮ ಕಾರು, ಬೈಕ್‌ಗಳನ್ನು ತೊಳಿಯಲು ಶಾಂಪೂನಂತಹ ವಿವಿಧ ಉತ್ಪನ್ನಗಳನ್ನು ಬಳಸುವುದು ಸಹಜ. ದುಬಾರಿ ಕಾರುಗಳ ಮಾಲೀಕರಾದರೆ ತಮ್ಮ ವಾಹನಗಳನ್ನು ಪ್ರೀಮಿಯಂ ಕಾರ್ ವಾಷ್ ಸೆಂಟರ್‌ಗಳಿಗೆ ಕಳುಹಿಸಿತ್ತಾರೆ. ಇನ್ನೂ ಕೆಲ ದುಬಾರಿ ಕಾರು ಮಾಲೀಕರು ತಮ್ಮ ವಾಹನಗಳನ್ನು ತಾವೇ ಸ್ವಚ್ಚಗೊಳಿಸುತ್ತಾರೆ. ಮೃದುವಾದ ಮೈಕ್ರೋಫೈಬರ್ ಬಟ್ಟೆ ಬಳಸಿ ಮಾತ್ರ ತೊಳಿಯುತ್ತಾರೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಹಾಳಾದ ಬಟ್ಟೆ ಮತ್ತು ಬಕೆಟ್ ನೀರಿನಿಂದ ಸ್ವಚ್ಛಗೊಳಿಸಲಾಗುತ್ತಿರುವ ವೀಡಿಯೊ ವೈರಲ್ ಆಗಿದೆ.
ಅರಾಂಸಿಯೋ ಬೊರಿಯಾಲಿಸ್ ಬಣ್ಣದ ಲ್ಯಾಂಬೋರ್ಘಿನಿ ಹುರಾಕನ್ ಕಾರನ್ನು ವ್ಯಕ್ತಿಯು ಬಟ್ಟೆ ಮತ್ತು ಒಂದು ಬಕೆಟ್ ನೀರಿನಿಂದ ತೊಳೆಯುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಇದರಲ್ಲೇನಿದೆ ಇದು ಸಾಮಾನ್ಯವಲ್ಲವೇ ಎಂದು ನಿಮಗೆ ಅನಿಸಬಹುದು, ಆದರೆ ಸೂಪರ್ ಕಾರ್ ಪ್ರಿಯರಿಗೆ ಇದು ಹೃದಯ ವಿದ್ರಾವಕ ಘಟನೆ. ಹೌದು, 4 ಕೋಟಿ ರೂ. ಕಾರನ್ನು ಹೀಗೆ ರಸ್ತೆ ಬದಿಯಲ್ಲಿ ತೊಳಿಯುತ್ತಿರುವುದು ವಿಚಿತ್ರ ಘಟನೆಯಾಗಿದೆ.

ಈ ವೀಡಿಯೊನ ಬಗ್ಗೆ ಆನ್‌ಲೈನ್‌ನಲ್ಲಿ ಉತ್ಸಾಹಿ ಚರ್ಚೆಗಳು ನಡೆಯುತ್ತಿವೆ. ಅಂತಹ ದುಬಾರಿ ಕಾರನ್ನು ಈ ರೀತಿ ಸ್ವಚ್ಛಗೊಳಿಸುತ್ತಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ಹುರಾಕನ್ ಕ್ಯಾಶುಯಲ್ ಕ್ಲೀನಿಂಗ್' "ಇದು ಬೆಂಗಳೂರಿನ ಸಾಮಾನ್ಯ ದೃಶ್ಯ" ಎಂಬ ಹಾಸ್ಯಾಸ್ಪದ ಕಾಮೆಂಟ್‌ಗಳು ಜನರ ಗಮನ ಸೆಳೆದಿವೆ. ವಿಡಿಯೋ ಫುಲ್ ವೈರಲ್ ಆಗುತ್ತಿದ್ದು, ಆ ವ್ಯಕ್ತಿಯ ಬಗ್ಗೆ ಹಲವು ಕಮೆಂಟ್‌ಗಳು ಬರುತ್ತಿವೆ.
ಬೆಂಗಳೂರಿನಲ್ಲಿ ರಸ್ತೆ ಬದಿ ನಿಲ್ಲಿಸಿದ ವಾಹನಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸುವ ಪ್ರಕ್ರಿಯೆ ಇದೆ. ನಗರದಲ್ಲಿನ ಧೂಳು ಹಾಗೂ ಟ್ರಾಫಿಕ್ ಜಾಮ್‌ಗಳು ವಾಹನಗಳಿಗೆ ಹಾನಿಯುಂಟು ಮಾಡುತ್ತವೆ. ಸಾಮಾನ್ಯ ವಾಹನಗಳಿಗೆ ಅಷ್ಟಾಗಿ ಹಾನಿಯಾಗದಿದ್ದರೂ, ಹೈ-ಎಂಡ್ ಕಾರುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪೇಂಟ್ ಮೇಲಿನ ಗೀರುಗಳು ಮತ್ತು ಸೂಕ್ಷ್ಮ ಹಾನಿಗಳನ್ನು ಸರಿಪಡಿಸಲು ತುಂಬಾ ಖರ್ಚಾಗುತ್ತದೆ.

ಕಾರಿನ ವಿಶೇಷತೆಗಳು: ಲ್ಯಾಂಬೊರ್ಗಿನಿ ಹುರಾಕನ್ ಭಾರತದಲ್ಲಿ 4 ಕೋಟಿ ರೂ. (ಎಕ್ಸ್‌ಶೋರೂಂ) ಬೆಲೆಯೊಂದಿಗೆ ಮಾರಾಟವಾಗುತ್ತದೆ. ಇದು 5.2-ಲೀಟರ್ V10 ಎಂಜಿನ್ ಹೊಂದಿದ್ದು, 610 ಪಿಎಸ್ ಪವರ್ ಉತ್ಪಾದಿಸುತ್ತದೆ. ಇವೊ, ಎಸ್‌ಟಿಒ, ಟೆಕ್ನಿಕಾ, ಮತ್ತು ಸ್ಟೆರಾಟೊ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುವ ಈ ಕಾರು ವಿಶೇಷ ವೈಶಿಷ್ಟ್ಯಗಳಿಂದ ಪ್ರಸಿದ್ಧವಾಗಿದೆ. ಹಾಗಾಗಿ ಅದರ ಪೇಂಟ್ ಮೇಲೆ ಗೀರುಗಳು ಉಂಟಾದಲ್ಲಿ, ಅವುಗಳನ್ನು ಸರಿಪಡಿಸುವ ವೆಚ್ಚವೂ ಬಹಳ ದೊಡ್ಡದಾಗಿರುತ್ತದೆ.
ಇನ್ನು ಇತ್ತೀಚೆಗೆ, ಮುಂಬೈನಲ್ಲಿ ಇನ್ನೊಂದು ಆರೆಂಜ್ ಲ್ಯಾಂಬೋರ್ಘಿಗಿ ಹುರಾಕನ್ ಬೆಂಕಿಗೆ ಆಹುತಿಯಾಗಿತ್ತು. ಚಾಲನೆ ಮಾಡುವಾಗ ಎಂಜಿನ್ ಬೇಯಿಂದ ಹೊಗೆ ಬರುವುದನ್ನು ಮಾಲೀಕರು ಗಮನಿಸಿದ್ದು, ಬೆಂಕಿ ಶೀಘ್ರದಲ್ಲೇ ಕಾರಿನ ಹೆಚ್ಚಿನ ಭಾಗಗಳಿಗೆ ಹಾನಿ ಮಾಡಿದೆ. ಈ ಘಟನೆಯ ನಂತರ ಲ್ಯಾಂಬೊರ್ಘಿನಿ ಗುಣಮಟ್ಟದ ಬಗ್ಗೆ ಈಗ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ.
ಲ್ಯಾಂಬೋರ್ಘಿನಿ ಹುರಾಕನ್ ನಂತಹ ಸೂಪರ್ ಕಾರುಗಳ ಪಾಲನೆ ಮತ್ತು ರಕ್ಷಣೆಗೆ ತಜ್ಞರು ನೀಡುವ ಮಾರ್ಗಸೂಚಿಗಳನ್ನು ಪಾಲಿಸುವುದು ಅತ್ಯಾವಶ್ಯಕ. ದುಬಾರಿ ವಾಹನಗಳ ಮೇಲಿನ ಅಸಡ್ಡೆ ರೀತಿಯ ಕೆಲಸಗಳು, ಅವುಗಳ ಪೇಂಟ್, ಬಾಡಿ ಮತ್ತು ಆವರ್ತಿತ ಸ್ಥಿತಿಗೆ ಹಾನಿ ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬೆಂಗಳೂರಿನ ವ್ಯಕ್ತಿಯ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications