Vande Bharat sleeper: ಬೆಂಗಳೂರಿನಲ್ಲಿ ಸಿದ್ಧಗೊಳ್ಳುತ್ತಿದೆ ವಂದೇ ಭಾರತ್ ಸ್ಲೀಪರ್.. 6 ತಿಂಗಳಲ್ಲಿ ಹಳಿಗೆ

ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಸಂಚರಿಸುತ್ತಿದೆ. ಆದರೆ, ಈ ರೈಲುಗಳಲ್ಲಿ ಕುಳಿತುಕೊಂಡು ಮಾತ್ರ ತೆರಳಬಹುದು. ಇದರಿಂದಾಗಿ ಸಾರ್ವಜನಿಕರು ರಾತ್ರಿ ವೇಳೆ ಆರಾಮದಾಯಕವಾಗಿ ನಿದ್ರಿಸುತ್ತಾ ಪ್ರಯಾಣಿಸಲು ರೈಲ್ವೆ ಇಲಾಖೆ ವಂದೇ ಭಾರತ್ ಸ್ಲೀಪರ್‌ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್‌ (Vande Bharat sleeper) ರೈಲುಗಳನ್ನು ತಯಾರಿಸುತ್ತಿರುವ ಬೆಂಗಳೂರಿನ ಬಿಇಎಂಎಲ್ (BEML) ಉತ್ಪಾದನಾ ಘಟಕಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭೇಟಿ ನೀಡಿದ್ದರು. ಆ ಬಳಿಕ ಮಾತನಾಡಿದ್ದ ಅವರು, ವಂದೇ ಭಾರತ್ ಸ್ಲೀಪರ್ ರೈಲುಗಳು ಮುಂದಿನ 6 ತಿಂಗಳಲ್ಲಿ ಹಳಿಗೆ ಬರಲಿವೆ ಎಂದು ಹೇಳಿದ್ದಾರೆ.

Bengaluru Vande Bharat Sleeper Train Starts In 6 Months Railway Minister

ಈ ಸ್ಲೀಪರ್‌ ರೈಲುಗಳ ಕೋಚ್‌ಗಳು ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ಗಳಿಗಿಂತ ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರಲಿವೆ. ಜೊತೆಗೆ ಶಬ್ದವು ಬಹುತೇಕ ಶೂನ್ಯವಾಗಿರುತ್ತದೆ. ಇದರಿಂದ ಉತ್ತಮವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಕೋಚ್‌ ವಿನ್ಯಾಸವು ಹೊಸತನದಿಂದ ಕೂಡಿದ್ದು, ಪ್ರಯಾಣಿಕ ಸ್ನೇಹಿಯಾಗಿರುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

ವಂದೇ ಭಾರತ್ ಸ್ಲೀಪರ್‌ (Vande Bharat sleeper) ರೈಲಿನ ಕೋಚ್‌ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುತ್ತಿರುವುದರಿಂದ ಉತ್ಪಾದನಾ ವೆಚ್ಚವು ಸಾಕಷ್ಟು ಕಡಿಮೆಯಾಗುತ್ತದೆ. ವಿದೇಶದಲ್ಲಿ ಇದೇ 1 ಕೋಚ್‌ ಸಿದ್ಧಪಡಿಸಲು ಸುಮಾರು ರೂ.10 ಕೋಟಿ ವ್ಯಯಿಸಬೇಕಾಗಿತ್ತು. ದೇಶಯಲ್ಲಿ ತಯಾರಿಸುತ್ತಿರುವುದರಿಂದ ಸುಮಾರು ರೂ.8 - 9 ಕೋಟಿ ಖರ್ಚಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

Bengaluru Vande Bharat Sleeper Train Starts In 6 Months Railway Minister

ಸದ್ಯ ವಂದೇ ಭಾರತ್ ಸ್ಲೀಪರ್‌ನ 160 ಕೋಚ್‌ಗಳನ್ನು ತಯಾರಿಸಲು ಬಿಇಎಂಎಲ್‌ ಆರ್ಡರ್ ಪಡೆದುಕೊಂಡಿದೆ ಎಂಬ ವಿವರಗಳು ಲಭ್ಯವಾಗಿದೆ. ಈ ಸ್ಲೀಪರ್‌ ರೈಲೊಂದು 16 ಕೋಚ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಅದರಲ್ಲಿ 3 - ಟೈರ್ ಎಸಿ ಮತ್ತು 2 - ಟೈರ್ ಎಸಿ ಕೋಚ್‌ಗಳನ್ನು ಸಹ ಹೊಂದಿರಲಿದ್ದು, 823 ಮಂದಿ ಸುಖಕರವಾಗಿ ನಿದ್ರಿಸುತ್ತಾ ಪ್ರಯಾಣಿಯಸಬಹುದು.

ಈ ವಂದೇ ಭಾರತ್ ಸ್ಲೀಪರ್‌ ರೈಲುಗಳು, ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸುವ ಮೂಲಕ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಾನಕ್ಕೆ ತಲುಪಿಸಲಿವೆ. ದೆಹಲಿಯಿಂದ ವಿವಿಧ ರಾಜ್ಯಗಳನ್ನು ಸಂಪರ್ಕಿಸುವ ರಾಜಧಾನಿ ಎಕ್ಸ್‌ಪ್ರೆಸ್‌ಗೆ ವಂದೇ ಭಾರತ್ ಸ್ಲೀಪರ್‌ ರೈಲಿಗಳು ಪರ್ಯಾಯವಾಗಲಿದೆ ಎಂದು ಹೇಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕ ಕವಾಚ್ (KAVACH) ವ್ಯವಸ್ಥೆಯನ್ನು ಪಡೆದಿರುವ ಸಾಧ್ಯತೆಯೂ ಇದೆ.

ವಂದೇ ಭಾರತ್ ಸ್ಲೀಪರ್‌ ರೈಲುಗಳು ರಾತ್ರಿಯ ವೇಳೆಯಲ್ಲಿ ಸಂಚಾರಿಸುವುರಿಂದ ಪ್ರಯಾಣಿಕರಿಗೆ ವಿಮಾನದಂತಹ ಐಷಾರಾಮಿ ಸೌಕರ್ಯವನ್ನು ಒದಗಿಸಲಾಗುತ್ತದೆ ಎನ್ನಲಾಗಿದೆ. ಈ ರೈಲಿನೊಳಗೆ ವಾಸನೆ ಮುಕ್ತ ಶೌಚಾಲಯ, ಸ್ವಯಂ ಚಾಲಿತ ಬಾಗಿಲು, ಮೊದಲ ದರ್ಜೆಯ ಎಸಿ ಕೋಚ್‌ ಬಿಸಿ ನೀರಿನ ವ್ಯವಸ್ಥೆವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ವಂದೇ ಭಾರತ್ ಸ್ಲೀಪರ್‌ ಕಾರ್ಯಾಚರಣೆಯನ್ನು ಶುರು ಮಾಡಿದ ಮೇಲೆ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗುವುದರಲ್ಲಿ ಎರಡು ಮಾತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 12, 2024, 18:43 [IST]
English summary
Bengaluru vande bharat sleeper train starts in 6 months railway minister
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+