ಬೆಂಗಳೂರಿನಲ್ಲಿ ಮಾತ್ರ: ಚಲಿಸುತ್ತಿರುವ ಬೈಕ್‌ನಲ್ಲಿ ಮಹಿಳೆಯ ಕೆಲಸ.. ಏನ್ ಕಾಲ ಬಂತು, ಸೇಫ್ಟಿ ಬಗ್ಗೆ ಕಳವಳ!

ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರುವಾಸಿಯಾಗಿರುವ ಬೆಂಗಳೂರು (Bengaluru), ಟ್ರಾಫಿಕ್‌ನಿಂದ ಕೂಡ ಕುಖ್ಯಾತಿ ಗಳಿಸಿದೆ. ಚಲಿಸುತ್ತಿರುವ ಬೈಕ್‌ನ ಹಿಂಬದಿ ಆಸನದಲ್ಲಿ ಕುಳಿತುಕೊಂಡು ಮಹಿಳೆಯೊಬ್ಬರು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ರೆಡ್ಡಿಟ್ (Reddit) ತಾಣದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 'ಬೆಂಗಳೂರಿನಲ್ಲಿ ಮಾತ್ರ' ಎಂಬ ಶೀರ್ಷೆಕೆ ಬರೆಯಲಾಗಿದೆ. ದೃಶ್ಯವನ್ನು ಗಮನಿಸಿದಾಗ, ವ್ಯಕ್ತಿಯೊಬ್ಬ ಬೈಕ್ ಓಡಿಸುತ್ತಿದ್ದಾನೆ. ಹಿಂಬದಿಯಲ್ಲಿ ಕುಳಿತುಕೊಂಡಿರುವ ಮಹಿಳೆ, ಲ್ಯಾಪ್‌ಟಾಪ್‌ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ. ಆಕೆ, ಹೆಲ್ಮೆಟ್ ಸಹ ಧರಿಸಿಲ್ಲ. ಜೊತೆಗೆ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಏನನ್ನು ಹಿಡಿದುಕೊಳ್ಳದಿರುವುದನ್ನು ನೋಡಬಹುದು.

ಬೆಂಗಳೂರಿನಲ್ಲಿ ಮಾತ್ರ: ಚಲಿಸುತ್ತಿರುವ ಬೈಕ್‌ನಲ್ಲಿ ಮಹಿಳೆಯ ಕೆಲಸ.. ಏನ್ ಕಾಲ ಬಂತು, ಸೇಫ್ಟಿ ಬಗ್ಗೆ ಕಳವಳ!

ಕೇವಲ ಮೂರು ದಿನಗಳ ಹಿಂದೆ, ಪೋಸ್ಟ್ ಮಾಡಲಾದ ಈ ವಿಡಿಯೋ, ಇಂಟರ್‌ನೆಟ್‌ ತುಂಬೆಲ್ಲ ಹರಿದಾಡಿದ್ದು, ಸಖತ್ ಶೇರ್ ಆಗಿದೆ. ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡಿದ್ದು, ಕೆಲವರು, 'ಪೀಕ್ ಬೆಂಗಳೂರು ಮೊಮೆಂಟ್' ಎಂದಿದ್ದಾರೆ. ಮತ್ತೆ ಬಹುತೇಕರು, ಆ ಮಹಿಳೆಯ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರೊಬ್ಬರು, 'ಅವರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಯೇ? ಏಕೆಂದರೆ, ಈ ರೀತಿಯಾಗಿ ಮಾಡಿದರೆ ಸಾವು ಬರಬಹುದು' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, ನಾನು ಶಾಲಾ ದಿನಗಳಲ್ಲಿ ನನ್ನ ಹೋಂವರ್ಕ್ ಅನ್ನು ಹೀಗೆ ಮಾಡುತ್ತಿದ್ದೆ. ಆದರೆ, ಈಗ ನಾನು ಒಳ್ಳೆಯ ಕೆಲಸವನ್ನು ಹೇಗೆ ಮಾಡಬೇಕೆಂದು ಕಲಿಯುತ್ತಿದ್ದೇನೆ' ಎಂದು ಹೇಳಿದ್ದಾರೆ.

ಇನ್ನೊಬ್ಬರು, 'ಒಂದೇ ಪ್ರೇಮ್ ನಲ್ಲಿ ಡೆಡ್ ಲೈನ್ & ಡೆತ್' ಎಂದು ಕಾಮೆಂಟ್ ಮಾಡಿದ್ದಾರೆ. 'ನರಕದಲ್ಲಿ ನಿಮಗೆ ಹೆಲ್ಮೆಟ್ ಅಗತ್ಯವಿಲ್ಲ. ಅಲ್ಲಿಗೆ ಹೋಗುತ್ತಿದ್ದಾರೆ' ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ 'ಸುಮ್ಮನೆ ಬೈಕಿನಲ್ಲಿ ಕುಳಿತು ಮಾಡಬೇಕಾದ ಕೆಲಸವಾದರೂ ಏನು?' ಎಂದಿದ್ದಾರೆ. ಹಾಗೆಯೇ, ಮತ್ತೊಬ್ಬ ನೆಟ್ಟಿಗ, 'ತುಂಬಾ ಕೆಲಸದ ಹೊರೆ' ಅಂತ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಚಲಿಸುತ್ತಿರುವ ಬೈಕ್‌ನಲ್ಲಿ ಮಹಿಳೆಯೊಬ್ಬರು, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿರುವುದು ಇದೇ ಮೊದಲೇನೂ ಅಲ್ಲ. ಕೆಲವು ತಿಂಗಳ ಹಿಂದೆ, ಮಹಿಳೆಯೊಬ್ಬರು ರಾಪಿಡೋ ಬೈಕ್‌ನ ಹಿಂಬದಿ ಆಸನದಲ್ಲಿ ಕುಳಿತುಕೊಂಡು ಕೆಲಸ ಮಾಡಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಕೂಡ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ 2022ರಲ್ಲಿ ಪ್ರಪಂಚದ ಅತ್ಯಂತ ಜನದಟ್ಟಣೆ ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿ ಲಂಡನ್‌ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೇ ಸ್ಥಾನದಲ್ಲಿತ್ತು. ಈ ವರದಿ ಪ್ರಕಾರ, ಬೆಂಗಳೂರಿನ ಹೃದಯ ಭಾಗದಲ್ಲಿ ಪ್ರತಿ 10 ಕಿಮೀ ಪ್ರಯಾಣಕ್ಕೆ 29 ನಿಮಿಷ 10 ಸೆಕೆಂಡ್‌ಗಳು ಬೇಕಾಗುತ್ತದೆ.

ಇದೇ ಪಟ್ಟಿಯಲ್ಲಿ ಐರ್ಲೆಂಡ್‌ನ ಡುಬ್ಲಿನ್‌ ನಗರ ಮೂರನೇ ಸ್ಥಾನದಲ್ಲಿತ್ತು. ನಂತರದ ಸ್ಥಾನದಲ್ಲಿ ಜಪಾನ್‌ನ ಸ್ಯಾಪ್ಪರೋ ಮತ್ತು ಇಟಲಿಯ ಮಿಲಾನ್‌ ನಗರಗಳಿದ್ದವು. ಭಾರತದ ಪುಣೆ ನಗರ 6ನೇ ಸ್ಥಾನದಲ್ಲಿತ್ತು. ರಾಷ್ಟ್ರ ರಾಜಧಾನಿ ದೆಹಲಿ 34 ಹಾಗೂ ಮುಂಬೈ 47ನೇ ಸ್ಥಾನದಲ್ಲಿತ್ತು. ಸದ್ಯ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಸರ್ಕಾರ ಕೂಡ ಶ್ರಮವಹಿಸುತ್ತಿದ್ದು, ಮೆಟ್ರೋ ಕಾಮಗಾರಿಯನ್ನು ವೇಗವಾಗಿ ನಡೆಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 20, 2023, 14:23 [IST]
English summary
Bengaluru woman working on laptop in moving bike video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+