ವೈಜ್ಞಾನಿಕತೆಗೆ ಸವಾಲು, ಹಲವು ನಿಗೂಢತೆಗೆ ಸಾಕ್ಷಿ 'ಬರ್ಮುಡಾ ಟ್ರಯಾಂಗಲ್'!
ಉತ್ತರ ಅಂಟ್ಲಾಟಿಕಾ ಸಾಗರದ ಪಶ್ಚಿಮ ಭಾಗದಲ್ಲಿ ಕಂಡುಬರುವ 'ಬರ್ಮುಡಾ ತ್ರಿಕೋನ' ಆಧುನಿಕ ವೈಜ್ಞಾನಿಕತೆಗೆ ದೊಡ್ಡ ಮಟ್ಟದ ಸವಾಲಾಗಿ ಪರಿಣಮಿಸಿದೆ. ಹಲವಷ್ಟು ನಿಗೂಢತೆಗಳನ್ನು ಕಾಪಾಡಿಕೊಂಡಿರುವ ಬರ್ಮುಡಾ ತ್ರಿಕೋನ 'ಸೈತಾನನ ತ್ರಿಕೋನ' ಎಂದೇ ಪ್ರಸಿದ್ಧಿ ಪಡೆದಿದೆ.
Also Read: ಅಮೆರಿಕದಲ್ಲಿ ವಿಮಾನಗಳಿಗೂ ಸ್ಮಶಾನ..?
ಯಾವುದೇ ನೈಸರ್ಗಿಕ ವಿಕೋಪಗಳಿಲ್ಲದೆ ಬರ್ಮುಡಾ ಟ್ರಯಾಂಗಲ್ ಮೇಲೆ ಹಾದು ಹೋಗುವ ವಿಮಾನಗಳು, ಹಡಗುಗಳು ನಿಗೂಢ ರೀತಿಯಲ್ಲಿ ಕಣ್ಮರೆಯಾಗುತ್ತವೆ. ಸುಸ್ಸಜ್ಜಿತ ಯಂತ್ರಗಳು, ಪರಿಣಿತಿ ಪಡೆದ ಪೈಲಟ್, ನಾವಿಕರಿದ್ದರೂ ವಿಮಾನ ಮತ್ತು ಹಡಗುಗಳು ನಿಗೂಢವಾಗಿ ಕಣ್ಮರೆಯಾಗುತ್ತಿರುವುದು ವಿಜ್ಞಾನ ಲೋಕಕ್ಕೆ ದೊಡ್ಡ ಸವಾಲಾಗಿ ಪರಣಮಿಸಿದೆ.

ಕಳೆದೊಂದು ಶತಮಾನದಿಂದಲೂ ವೈಜ್ಞಾನಿಕತೆಗೆ ಸವಾಲೊಡ್ಡಿರುವ ನಿಗೂಢ ರಹಸ್ಯಗಳನ್ನು ಬೇಧಿಸುವಲ್ಲಿ ಕೊನೆಗೂ ವಿಜ್ಞಾನಿಗಳು ಯಶ ಕಂಡಿದ್ದಾರೆ.

ಬರ್ಮುಡಾ ತ್ರಿಕೋನ ರಹಸ್ಯ ಬಯಲು ಮಾಡಲು ಸತತ ಪ್ರಯತ್ನದಲ್ಲಿರುವ ವಿಜ್ಞಾನಿಗಳು, ಬಾರೆಂಟ್ಸ್ ಸಮುದ್ರದಡಿಯಲ್ಲಿ ದೈತ್ಯಕಾರಾದ ಕುಳಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜ್ಞಾನಿಗಳ ಪ್ರಕಾರ, ಸಮುದ್ರ ಭೂ ಪದರಗಳ ಅಡಿಯಲ್ಲಿರುವ ನೈಸರ್ಗಿಕ ಅನಿಲ ನಿಕ್ಷೇಪದಿಂದ ಸೋರಿಕೆಯಾದ ಮಿಥೇನ್ ಅನಿಲವು ಕೊನೆಗೆ ಸ್ಪೋಟ ಸಂಭವಿಸಿ ದೊಡ್ಡ ಕುಳಿಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ವಿವರಿಸುತ್ತಾರೆ.

ಈ ಜಾಗದಲ್ಲಿ ಹಡಗು ತೇಲುವಷ್ಟು ಸಾಂದ್ರತೆ ನೀರಿಗೆ ಇರುವುದಿಲ್ಲ. ಇದು ಕೂಡಾ ಅಪಾಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವುದೇ ಮುನ್ಸೂಚನೆಯಿಲ್ಲದೆ ಹಡಗು ಮುಳುಗುವ ಸಾಧ್ಯತೆಯಿರುತ್ತದೆ.

ನಾರ್ವೆಯ ಆರ್ಕಟಿಕ್ ಯುನಿವರ್ನಿಸಿಟಿಯ ವಿಜ್ಞಾನಿಗಳ ಪ್ರಕಾರ, ಸಾಗರದಾಳದಲ್ಲಿ ದೊಡ್ಡದಾದ ಕುಳಿಗಳು ಉಂಟದಾಗ ಸಾವಿನ ಕೂಪ ತೆರೆಯುತ್ತದೆ. ಇದರಿಂದಾಗಿ ಇತ್ತ ಸಂಚರಿಸುವ ಹಡಗು, ವಿಮಾನಗಳು ನಿಗೂಢವಾಗಿ ಕಣ್ಮರೆಯಾಗುತ್ತಿದೆ.

ಸಾಗರದಾಳದಲ್ಲಿ ಅಂತರ್ ಪ್ರವಾಹ ನಡೆಯುತ್ತಲೇ ಇರುತ್ತದೆ. ಇಲ್ಲಿ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ನೈಸರ್ಗಿಕವಾಗಿ ಎದುರಾಗುವ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಇದು ಎಷ್ಟರ ಮಟ್ಟಿಗೆ ಪ್ರಬಲವಾಗಿದೆಯೆಂದರೆ ಭಾರಿ ಪ್ರಮಾಣದ ಬಿರುಗಾಳಿ, ಚಂಡ ಮಾರುತಗಳನ್ನೇ ಸೃಷ್ಟಿ ಮಾಡುತ್ತದೆ.

ಇದನ್ನು ನಿಸರ್ಗಾತೀತ ಶಕ್ತಿ ಎಂದು ವ್ಯಾಖ್ಯಾನಿಸಿದರೂ ವಿಜ್ಞಾನ ಲೋಕ ಒಪ್ಪಲು ತಯಾರಿರಲಿಲ್ಲ. ಆರಂಭದಲ್ಲಿ ನೈಸರ್ಗಿಕ ವಿಕೋಪ, ಯುದ್ಧ ಪರಿಸ್ಥಿತಿ ಅಥವಾ ಕಡಲ್ಗಳ್ಳತನಕ್ಕೆ ಸಿಲುಕಿರಬಹುದೆಂದು ನಂಬಿದರೂ ಪದೇ ಪದೇ ಆಗುತ್ತಿರುವ ಕಣ್ಮರೆ ಪ್ರಕರಣ ಬೆಚ್ಚಿ ಬೀಳಿಸುವಂತೆ ಮಾಡಿತ್ತು.

ತ್ರಿಕೋನದ ಆಕೃತಿಯಲ್ಲಿರುವ ಈ ಪ್ರದೇಶದ ವ್ಯಾಪ್ತಿ ಇತಿಹಾಸಗಾರರಿಂದ ಇತಿಹಾಸಗಾರಿಗೆ ಬದಲಾಗುತ್ತಿದೆ. ಪ್ರಸ್ತುತ ಗಡಿ ಪ್ರದೇಶವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ, ಬಹಾಮಾ ಮತ್ತು ಸಂಪೂರ್ಣ ಕೆರೆಬಿಯನ್ ದ್ಪೀಪ ಮತ್ತು ಪೂರ್ವ ಅಟ್ಲಾಂಟಿಕ್ ನಿಂದ ಅಜೋರ್ಸ್ ಮತ್ತು ಗಲ್ಫ್ ಆಫ್ ಮೆಕ್ಸಿಕೊದ ಇತರೆ ಪ್ರದೇಶಗಳು ಒಳಗೊಳ್ಳುತ್ತದೆ. ಆದರೆ ಅತಿ ಹೆಚ್ಚು ಕಡೆ ಉಲ್ಲೇಖಿತವಾಗಿರುವ ಅಟ್ಲಾಂಟಿಕ್ ತೀರದ ಮಿಯಾಮಿ, ಸಾನ್ ಜುವಾನ್, ಪೊರ್ಟೊರಿಕೊ ಮತ್ತು ಮಧ್ಯ ಅಟ್ಲಾಂಟಿಕ್ ದ್ವೀಪವಾಗಿರುವ ಬರ್ಮುಡಾ ಪ್ರದೇಶಗಳಲ್ಲಿ ಇದರ ವ್ಯಾಪ್ತಿ ಕಂಡುಬಂದಿದೆ.

ಇನ್ನು ಕೆಲವರ ಪ್ರಕಾರ ಆಯಸ್ಕಾಂತೀಯ ಶಕ್ತಿಯ ಕೇಂದ್ರ ಇದಾಗಿದ್ದು, ಸ್ವಾಭಾವಿಕ ಆಯಸ್ಕಾಂತೀಯ ಏರಿಳಿತಗಳನ್ನು ಹೊಂದಿರಬಹುದು ಎಂದಿದ್ದಾರೆ.

ಗಲ್ಫ್ ಸ್ಟ್ರೀಮ್ ಸಾಗರ ಪ್ರವಾಹದ ಶಕ್ತಿಯನ್ನು ತಳ್ಳಿಹಾಕುವಂತಿಲ್ಲ ಎಂಬುದು ಇನ್ನಷ್ಟು ವಿಜ್ಞಾನಿಗಳ ವಾದವಾಗಿದೆ. ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಹುಟ್ಟುವ ಈ ಪ್ರವಾಹವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ ಮೂಲಕ ಉತ್ತರ ಅಟ್ಲಾಂಟಿಕ್ ಗೆ ಹರಿಯುತ್ತದೆ.

ಭೂಮಧ್ಯ ರೇಖೆಯ ನೀರಿನಲ್ಲಿ ಹುಟ್ಟಿಕೊಳ್ಳುವ ನೈಸರ್ಗಿಕ ಸುಂಟರಗಾಳಿ ವಿಕೋಪವನ್ನು ಜನರ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲಿ ಅನೇಕ ಅವಘಡಗಳು ಸಂಭವಿಸಿದೆ. ಇವುಗಳಲ್ಲಿ 1872ರ ಮೇರಿ ಸೆಲೆಸ್ಟ್, 1945ರ ಫ್ಲೈಟ್ 19, 1881ರ ಎಲೆನ್ ಆಸ್ಟಿನ್, 1918ರ ಯುಎಸ್ ಎಸ್ ಸೈಕ್ಲೋಫ್ಸ್, 1812ರ ಥಿಯೊಡೋಸಿಯಾ ಬರ್ ಅಲ್ಸಟನ್, 1909ರ ಸ್ಪ್ರೇ, 1921ರ ಕ್ಯಾರೊಲ್ ಎ.ಡೀರಿಂಗ್, 1948ರಲ್ಲಿ ಡಗ್ಲಾಸ್ ಡಿಸಿ3 ವಿಮಾನ, 1949ರ ಸ್ಟಾರ್ ಟೈಗರ್ ಮತ್ತು ಸ್ಟಾರ್ ಏರಿಯಲ್, 1963ರ ಕೆಸಿ 135 ಸ್ಟ್ರ್ಯಾಟೊ ಟ್ಯಾಂಕರ್ಸ್, 1964ರ ಎಸ್ ಎಸ್ ಮರೈನ್ ಸಲ್ಪರ್ ಕ್ವೀನ್, ರಾಯ್ ಫುಕ್ ಮಾರು, 1955ರ ಕನ್ನೆಮಾರಾ IV ಮತ್ತು 1964ರ ಕ್ಯಾರೊಲಿನ್ ಕ್ಯಾಸ್ಕಿಯೋ ಪ್ರಮುಖವಾಗಿದೆ.

ಒಟ್ಟಿನಲ್ಲಿ ಹಲವಾರು ನಿಗೂಢತೆಗಳಿಗೆ ಸಾಕ್ಷಿಯಾಗಿರುವ ಬರ್ಮುಡಾ ತ್ರಿಕೋನ ಈಗಲೂ ಜನರ ಮನಸ್ಸಿನಲ್ಲಿ ಅಂತೆ-ಕಂತೆಗಳನ್ನು ಸೃಷ್ಟಿಸುತ್ತಲೇ ಇದ್ದು, ವಿಜ್ಞಾನಿಗಳು ರಹಸ್ಯ ಬೇಧಿಸುವ ಶತ ಪ್ರಯತ್ನದಲ್ಲಿದ್ದಾರೆ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ
ಬೆಲ್ಜಿಯಂ ದಟ್ಟಾರಣ್ಯದಲ್ಲಿ 70 ವರ್ಷಕ್ಕೂ ಹಳೆಯ ಕಾರು ಸ್ಮಶಾನ


Click it and Unblock the Notifications








