ಮಾರುತಿ ಸ್ವಿಫ್ಟ್ VS ಹ್ಯುಂಡೈ ಗ್ರ್ಯಾಂಡ್ i10 : ಹಿರಿಯ ನಾಗರೀಕರಿಗೆ ಹೇಳಿ ಮಾಡಿಸಿದ ಕಾರು ಎಂದರೆ ನಂಬಲೇಬೇಕು
ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯು ಇತ್ತೀಚಿನ ದಿನಗಳಲ್ಲಿ ಭಾರೀ ಪ್ರವರ್ಧಮಾನಕ್ಕೆ ಬರುತ್ತಿದೆ. ಇದರಿಂದಲೇ ಅಗ್ಗದ ಬೆಲೆಗೆ ಕಾರು ಮತ್ತು ಬೈಕುಗಳು ಗ್ರಾಹಕರ ಕೈ ಸೇರುತ್ತಿವೆ. ಮಾರುಕಟ್ಟೆಯಲ್ಲಿರುವ ಸ್ಪರ್ಧೆಯಿಂದಾಗಿ ಗ್ರಾಹಕರಿಗೆ ಲಾಭವಾಗುತ್ತಿದೆ ಎಂದರೆ ಅದು ತಪ್ಪಾಗಲಾರದು. ಅದರಲ್ಲಿ ಕಾರುಗಳಲ್ಲಿ ಈ ಸ್ಪರ್ಧೆ ಸ್ವಲ್ಪ ಹೆಚ್ಚೇ ಎನ್ನಬಹುದು.
ಇಂತಹ ಕಾರುಗಳಿಗೆ ಉತ್ತಮ ಉದಾಹರಣೆ ಎಂದರೆ ಮಾರುತಿ ಸುಜುಕಿ ಕಂಪನಿಯ ಕಾರುಗಳು. ಅದರಲ್ಲಿ ಸ್ವಿಫ್ಟ್ (Maruti Suzuki Swift) ಜನರಿಗೆ ತುಂಬಾನೆ ಅಚ್ಚುಮೆಚ್ಚು. ಇಂದಿನ ಈ ಲೇಖನದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ i10 ಕಾರುಗಳಲ್ಲಿ ವಯಸ್ಕರಿಗೆ ಯಾವುದು ಒಳ್ಳೆಯ ಆಟೋಮ್ಯಾಟಿಕ್ ಕಾರು ಎಂದು ನೋಡೋಣ.

ಎರಡೂ ಕಾರುಗಳು ಭಾರತೀಯರ ನಡುವೆ ತುಂಬಾನೆ ಪ್ರಸಿದ್ದವಾಗಿದೆ. ಇದಕ್ಕೆ ಕೆಲವೊಂದು ಪ್ರಮುಖ ಕಾರಣಗಳಿವೆ. ಅದರಲ್ಲಿ ಮೊದಲನೆಯದು ಇದರ ಸೈಝ್. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ i10 ಈ ಎರಡೂ ಕಾರುಗಳು ಕಾಂಪಾಕ್ಟ್ ಸೈಜ್ ಹ್ಯಾಚ್ ಬ್ಯಾಕ್ ಕಾರುಗಳಾಗಿದ್ದು ಯುವಕರು ಸೇರಿದಂತೆ ವಯಸ್ಕರಿಗೂ ಇದು ಅಚ್ಚು ಮೆಚ್ಚಾಗಿದೆ.
ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ i10 ಕಾರುಗಳು ಆಟೋಮ್ಯಾಟಿಕ್ ವೇರಿಯಂಟ್‌ಗಳಲ್ಲಿ ಸಿಗುತ್ತಿದ್ದು ಇದು ವಯಸ್ಕರಿಗೆ ನಗರ ಮತ್ತು ಹೈ ವೇ ಸೇರಿದಂತೆ ಆರಾಮದಾಯಕವಾಗಿ ಕಾರು ಚಲಾವಣೆ ಮಾಡಲು ಸಹಕಾರಿಯಾಗುತ್ತದೆ. ಇವೆರಡರಲ್ಲೂ ಪವರ್ ಸ್ಟೀಯರಿಂಗ್ ಮತ್ತು ಪುಶ್ ಬಟನ್ ಸ್ಟಾರ್ಟ್ ಆರಾಮದಾಯಕ ಚಲಾವಣೆಗೆ ಸಹಕಾರಿಯಾಗುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರ್ಯಾಂಡ್ i10 ಈ ಎರಡೂ ಕಾರುಗಳ ಮತ್ತೊಂದು ಹೈಲೈಟ್ ಎಂದರೆ ಅದು ಇದರ ಮೈಲೇಜ್. ಎರಡೂ ವಾಹನಗಳು ಸಹ ಉತ್ತಮ ಮೈಲೇಜ್ ನೀಡುವ ಕಾರುಗಳಾಗಿದ್ದು, ಇದರ ಆಟೋಮ್ಯಾಟಿಕ್ ವೇರಿಯಂಟ್‌ಗಳಲ್ಲು ಸಹ ಇದು ಲಭ್ಯವಾಗುತ್ತದೆ. ಸ್ವಿಫ್ಟ್ ಸುಮಾರು ೨೨.೫೬ ಕಿಮೀನ ಮೈಲೇಜ್ ದೊರಕುತ್ತದೆ.
ಈ ಎರಡೂ ಕಾರುಗಳು ಹಲವಾರು ವೇರಿಯಂಟ್‌ನಲ್ಲಿ ಲಭ್ಯವಿದ್ದು, ವಯಸ್ಕರಿಗೆ ಯಾವ ವೇರಿಯಂಟ್ ಉತ್ತಮ ಎಂಬ ಸಂಶಯ ಎಲ್ಲರಿಗೂ ಇರುತ್ತದೆ. ಇದರಲ್ಲಿ ಹ್ಯುಂಡೈನಲ್ಲಿ ನೋಡುವುದಾದರೆ ಗ್ರ್ಯಾಂಡ್ i10 ನಿಯೋಸ್ ಸ್ಪೋರ್ಟ್ಸ್ ವೇರಿಯಂಟ್ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ವಿಎಕ್ಸ್‌ಐ ಎಜಿಎಸ್ ವೇರಿಯಂಟ್‌ಗಳು ಉತ್ತಮ.
ಈ ಗ್ರ್ಯಾಂಡ್ i10 ನಿಯೋಸ್ ಸ್ಪೋರ್ಟ್ಸ್ ಮತ್ತು ಸುಜುಕಿ ಸ್ವಿಫ್ಟ್ ವಿಎಕ್ಸ್‌ಐ ಎಜಿಎಸ್ ಈ ಎರಡೂ ಕಾರುಗಳ ಬೆಲೆಯನ್ನು ಗಮನಿಸುವುದಾದರೆ i10 ನಿಯೋಸ್ ಸ್ಪೋರ್ಟ್ಸ್779,000 ಮತ್ತು ಸುಜುಕಿ ಸ್ವಿಫ್ಟ್ ವಿಎಕ್ಸ್‌ಐ ಎಜಿಎಸ್ 745,000 ಎಕ್ಸ್ ಶೋ ರೂಮ್ ಬೆಲೆಗೆ ಭಾರತದಲ್ಲಿ ದೊರಕುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications