ಲಾಂಗ್ ರೈಡ್ ಬೈಕ್ ಸವಾರಿಗೆ ಅತ್ಯುತ್ತಮ ಪ್ರವಾಸಿ ತಾಣಗಳಿವು

ಕೆಲವರು ಹೆಚ್ಚು ದೂರ ನಡೆಯಲು ಬಯಸುತ್ತಾರೆ. ಇನ್ನೂ ಕೆಲವರು ಬೈಕ್‌ಗಳಲ್ಲಿ ಲಾಂಗ್ ರೈಡ್ ಹೋಗಲು ಬಯಸುತ್ತಾರೆ. ಕೆಲವರು ತಮ್ಮ ಆಸೆಯನ್ನು ಈಡೇರಿಸಿ ಕೊಳ್ಳುತ್ತಾರೆ. ಇನ್ನೂ ಕೆಲವರ ಕನಸು ನನಸಾಗುವುದೇ ಇಲ್ಲ. ಬೈಕ್‌ಗಳಲ್ಲಿ ಲಾಂಗ್ ರೈಡ್ ಗೆ ಹೋಗಬಹುದಾದ ದಕ್ಷಿಣ ಭಾರತದ 5 ಅತ್ಯುತ್ತಮ ತಾಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಲಾಂಗ್ ರೈಡ್ ಬೈಕ್ ಸವಾರಿಗೆ ಅತ್ಯುತ್ತಮ ಪ್ರವಾಸಿ ತಾಣಗಳಿವು

1. ಬೆಂಗಳೂರಿ - ಕೊಡಗು (ದೂರ- 260 ಕಿ.ಮೀ)

ಬೆಂಗಳೂರಿನ ಜನ ಜೀವನದಿಂದ ಬೇಸರಗೊಂಡಿದ್ದು, ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದರೆ, ಬೈಕಿನಲ್ಲಿ ಸ್ಕಾಟ್ಲೆಂಡ್ ಆಫ್ ಇಂಡಿಯಾ ಎಂದು ಕರೆಯಲಾಗುವ ಕೊಡಗಿನತ್ತ ಧಾವಿಸಬಹುದು. ಈ ಮೂಲಕ ಅಂಕುಡೊಂಕು ರಸ್ತೆಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳ ಕಾಫಿ ತೋಟ ಹಾಗೂ ಒರಟು ಪ್ರದೇಶಗಳಲ್ಲಿ ಅದ್ಭುತ ರಜಾದಿನವನ್ನು ಕಳೆಯಬಹುದು.

ಚಿತ್ರಕೃಪೆ: ಅರ್ಜುನ್ ಚಂದ್ರಶೇಖರ್ / ಫ್ಲಿಕರ್

ಲಾಂಗ್ ರೈಡ್ ಬೈಕ್ ಸವಾರಿಗೆ ಅತ್ಯುತ್ತಮ ಪ್ರವಾಸಿ ತಾಣಗಳಿವು

2. ಬೆಂಗಳೂರು - ಮುನ್ನಾರ್ (ದೂರ - 476 ಕಿ.ಮೀ)

ಮುನ್ನಾರ್‌ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಘಾಟ್ ಸೆಕ್ಷನ್ ನ ಕೆಲವು ಸ್ಥಳಗಳನ್ನು ಹೊರತುಪಡಿಸಿದರೆ ಬ್ರಿಟಿಷರ ಕಾಲದ ಮುನ್ನಾರ್ ನಲ್ಲಿರುವ ಸುಗಮ ರಸ್ತೆಗಳಲ್ಲಿ ಬೈಕ್ ಸವಾರಿಯು ರೋಚಕ ಅನುಭವವನ್ನು ನೀಡುತ್ತದೆ. ಈ ರಸ್ತೆಗಳಲ್ಲಿ ಬೈಕ್ ಸವಾರಿ ಮಾಡುತ್ತಿದ್ದರೆ ಇನ್ನೂ ಸಂಚರಿಸುತ್ತಲೇ ಇರಬೇಕು ಎನಿಸುತ್ತದೆ.

ಚಿತ್ರಕೃಪೆ: ವಿನೋತ್ ಚಂದರ್ / ಫ್ಲಿಕರ್

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಲಾಂಗ್ ರೈಡ್ ಬೈಕ್ ಸವಾರಿಗೆ ಅತ್ಯುತ್ತಮ ಪ್ರವಾಸಿ ತಾಣಗಳಿವು

3. ಚೆನ್ನೈ - ಯಲಗಿರಿ (ದೂರ- 228 ಕಿ.ಮೀ)

ನಗರದ ಜಂಜಾಟದಿಂದ ನೆಮ್ಮದಿಯನ್ನು ಬಯಸುವವರು ಯಲಗಿರಿಗೆ ಹೋದರೆ ಅದ್ಭುತ ಅನುಭವವನ್ನು ಪಡೆಯಬಹುದು. ಹೇರ್‌ಪಿನ್ ರೀತಿಯ ಕರ್ವ್ ಗಳಿರುವ ಈ ಪ್ರದೇಶದ ರಸ್ತೆಗಳು ಬೈಕ್ ಸವಾರರಿಗೆ ರೋಮಾಂಚನವನ್ನುಂಟು ಮಾಡುತ್ತವೆ.

ಚಿತ್ರಕೃಪೆ: ಸಿಂಪ್ಲಿ ಸಿವಿಆರ್ / ಫ್ಲಿಕರ್

ಲಾಂಗ್ ರೈಡ್ ಬೈಕ್ ಸವಾರಿಗೆ ಅತ್ಯುತ್ತಮ ಪ್ರವಾಸಿ ತಾಣಗಳಿವು

4. ಚೆನ್ನೈ - ಪಾಂಡಿಚೇರಿ (ದೂರ- 160 ಕಿ.ಮೀ)

ಫ್ರೆಂಚ್ ವಾಸ್ತುಶಿಲ್ಪವನ್ನು ಹೊಂದಿರುವ ಪಾಂಡಿಚೆರಿ ವೀಕೆಂಡ್ ಮೋಜು ಮಸ್ತಿಗೆ ಹೇಳಿ ಮಾಡಿಸಿದ ತಾಣ. ಚೆನ್ನೈನಿಂದ ಪಾಂಡಿಚೇರಿಗೆ ಹೋಗುವ ಮಾರ್ಗವು ಬೈಕ್ ಸವಾರರಿಗೆ ರೋಮಾಂಚಕ ಅನುಭವವನ್ನು ನೀಡುತ್ತದೆ. ಈ ಮಾರ್ಗದಲ್ಲಿ ಚಲಿಸಿದರೆ ಚೆನ್ನೈನಿಂದ 50 - 60 ಕಿ.ಮೀ ದೂರದಲ್ಲಿರುವ ಮರಕಾನಂನ ಬೃಹತ್ ಉಪ್ಪು ತಯಾರಕ ಘಟಕವನ್ನು ಕಾಣಬಹುದು.

ಚಿತ್ರಕೃಪೆ: ಫಾಗ್ /ಫ್ಲಿಕರ್

MOST READ: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಲಾಂಗ್ ರೈಡ್ ಬೈಕ್ ಸವಾರಿಗೆ ಅತ್ಯುತ್ತಮ ಪ್ರವಾಸಿ ತಾಣಗಳಿವು

5. ಹೈದರಾಬಾದ್‌ - ಕಣ್ಣೂರು (ದೂರ- 897 ಕಿ.ಮೀ)

ಬೈಕ್ ಮೂಲಕ ಲಾಂಗ್ ರೈಡ್ ಇಷ್ಟಪಡುವವರು, ದೀರ್ಘಕಾಲದವರೆಗೆ ಬೈಕ್ ಚಾಲನೆ ಮಾಡಬಯಸುವವರು ಹೈದರಾಬಾದ್ ನಿಂದ ಕಣ್ಣೂರಿಗೆ ತೆರಳಿ, ಕಣ್ಣೂರಿನ ಕಡಲತೀರಗಳಲ್ಲಿ ವಿಶ್ರಾಂತಿ ಪಡೆಯಬಹುದು. ಹೈದರಾಬಾದ್ - ಬೆಂಗಳೂರು ನಡುವಿನ ಅಂತರವನ್ನು 8 ಗಂಟೆಗಳಲ್ಲಿ ಕ್ರಮಿಸಬಹುದು.

ಚಿತ್ರಕೃಪೆ: ಜೋಗೇಶ್ ಎಸ್ /ಫ್ಲಿಕರ್

ಲಾಂಗ್ ರೈಡ್ ಬೈಕ್ ಸವಾರಿಗೆ ಅತ್ಯುತ್ತಮ ಪ್ರವಾಸಿ ತಾಣಗಳಿವು

ಅತ್ಯುತ್ತಮ ಬೈಕುಗಳು

ಲಾಂಗ್ ರೈಡ್ ಗಳಿಗಾಗಿ ಉತ್ತಮವಾದ ಬೈಕ್ ಹೊಂದಿರುವುದು ಬಹಳ ಮುಖ್ಯ. ಲಾಂಗ್ ರೈಡ್ ಗೆ ತೆರಳ ಬಯಸುವವರು ರಾಯಲ್ ಎನ್‌ಫೀಲ್ಡ್ ಥಂಡರ್ ಬರ್ಡ್ 350, ಕೆಟಿಎಂ 390 ಡ್ಯೂಕ್, ಬಜಾಜ್ ಎವೆಂಜರ್ ಕ್ರೂಸ್ 220, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಹಾಗೂ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕುಗಳಲ್ಲಿ ತೆರಳಬಹುದು.

Most Read Articles

Kannada
English summary
Best long ride bike touring destination in South India. Read in Kannada.
Story first published: Saturday, August 29, 2020, 19:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X