ಭಾರತ್ NCAP ಜಾರಿಯಾಗಲಿದೆ: ಪ್ರಧಾನಿ ಮೋದಿ ಸರ್ಕಾರದ ದೊಡ್ಡ ಘೋಷಣೆ

ಹೊಸ ಕಾರು ಖರೀದಿಸುವವರಿಗೆ ಸುರಕ್ಷತೆಯು ಹೆಚ್ಚಿನ ಆದ್ಯತೆಯಾಗಿರುತ್ತದೆ. ಈ ನಿಟ್ಟಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅಕ್ಟೋಬರ್ 1ರಿಂದ ಭಾರತ್ ಎನ್‌ಸಿಎಪಿ (Bharat Ncap - ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಅಡಿ, ದೇಶದಲ್ಲಿ ದೊರೆಯುವ ಕಾರುಗಳಿಗೆ ಸೇಫ್ಟಿ ರೇಟಿಂಗ್ ನೀಡಲಿದೆ.

ಭಾರತ್ ಎನ್‌ಸಿಎಪಿ ಜಾರಿಯಿಂದ ನೂತನ ಕಾರು ಕೊಂಡುಕೊಳ್ಳುವವರಿಗೆ ಅವುಗಳ ಸುರಕ್ಷತಾ ವಿಚಾರದಲ್ಲಿ ಹೆಚ್ಚಿನ ತಿಳುವಳಿಕೆ ಮೂಡುತ್ತದೆ. ಸೇಫ್ಟಿ ವಿಚಾರವಾಗಿ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಭಾರತ್ ಎನ್‌ಸಿಎಪಿ ಮಾನದಂಡಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ವಯಸ್ಕ ಹಾಗೂ ಮಕ್ಕಳ ರಕ್ಷಣೆ, ಪಾದಚಾರಿ ಸ್ನೇಹಿ ವಿನ್ಯಾಸ ಹಾಗೂ ಕಾರಿನ ಸುರಕ್ಷತಾ ವೈಶಿಷ್ಟ್ಯಗಳು ಪ್ರಮುಖವಾಗಿವೆ.

ಭಾರತ್ NCAP ಜಾರಿಯಾಗಲಿದೆ: ಪ್ರಧಾನಿ ಮೋದಿ ಸರ್ಕಾರದ ದೊಡ್ಡ ಘೋಷಣೆ

ಭಾರತ್ ಎನ್‌ಸಿಎಪಿ ಟೆಸ್ಟ್ ಪ್ರೋಟೋಕಾಲ್‌ಗಳು, ಗ್ಲೋಬಲ್ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ಗಳಿಗೆ ಹೋಲಿಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಗ್ಲೋಬಲ್ ಎನ್‌ಸಿಎಪಿಯಂತೆಯೇ 1 - 5 ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ತಿಳಿಸಿದೆ. ವಾಹನ ತಯಾರಕ ಕಂಪನಿಗಳಿಗೆ ಅವುಗಳ ಕಾರುಗಳನ್ನು ಸ್ವಯಂಪ್ರೇರಿತವಾಗಿ ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಒಳಪಡಿಸುವಂತೆ ಪ್ರೋತ್ಸಾಹಿಸಲಾಗುತ್ತದೆ.

ಇದಿಷ್ಟೇ ಅಲ್ಲದೆ, ಟೆಸ್ಟಿಂಗ್ ಏಜೆನ್ಸಿಯು ಪರೀಕ್ಷೆಗೆ ಶೋರೂಂಗಳಿಂದ ಕಾರು ಮಾದರಿಯನ್ನು ತರಿಸಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ. ಚಾಲಕನ ಆಸನ ಸೇರಿದಂತೆ 8 ಆಸನಗಳನ್ನು ಒಳಗೊಂಡಿರುವ ಹಾಗೂ 3.5 ಟನ್‌ಗಳಿಗಿಂತ ಕಡಿಮೆ ತೂಕವಿರುವ ದೇಶ ಹಾಗೂ ವಿದೇಶದಲ್ಲಿ ತಯಾರಿಸಿದ ಪೆಟ್ರೋಲ್, ಡೀಸೆಲ್ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಚಾಲಿತ ವಾಹನಗಳು ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಒಳಗಾಗಬೇಕು.

ಭಾರತ್ NCAP ಜಾರಿಯಾಗಲಿದೆ: ಪ್ರಧಾನಿ ಮೋದಿ ಸರ್ಕಾರದ ದೊಡ್ಡ ಘೋಷಣೆ

ಕೇಂದ್ರ ಸರ್ಕಾರ, ವಾಹನಗಳ ಸುರಕ್ಷೆತೆಯ ದೃಷ್ಟಿಯಿಂದ ಅಕ್ಟೋಬರ್ 1ರಿಂದ ದೇಶಾದ್ಯಂತ ಜಾರಿಗೊಳಿಸಲು ಹೊರಟಿರುವ ಭಾರತ್ ಎನ್‌ಸಿಎಪಿಗೆ ಪ್ರಮುಖ ಕಾರು ತಯಾರಕ ಕಂಪನಿಗಳಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೊಯೊಟಾ, ಸ್ಕೋಡಾ, ಕಿಯಾ ಮತ್ತು ಮಹೀಂದ್ರಾ ಕಂಪನಿಗಳು ಸ್ವಾಗತಿಸಿವೆ. ಸದ್ಯ, ದೇಶದಲ್ಲಿ ಖರೀದಿಗೆ ದೊರೆಯುವ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಟೆಸ್ಟ್ ಗೆ ಒಳಗಾಗುತ್ತವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹೀಂದ್ರಾ ಆಟೋಮೋಟಿವ್ ಟೆಕ್ನಾಲಜಿಯ ವೇಲುಸಾಮಿ ಅವರು, ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಭಾರತ್ ಎನ್‌ಸಿಎಪಿಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾದ ಪ್ರಮುಖ ಕಾರುಗಳಾದ XUV300, ಸ್ಕಾರ್ಪಿಯೊ ಎನ್ ಹಾಗೂ XUV700ಗಳು ಸುರಕ್ಷೆತೆಯ ವಿಚಾರದಲ್ಲಿ ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿವೆ.

ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಸುರಕ್ಷತೆಯ ವಿಚಾರದಲ್ಲಿ 1 - 2 ಸ್ಟಾರ್ ರೇಟಿಂಗ್ ಪಡೆಯುವ ಮಾರುತಿ ಸುಜುಕಿ ಕೂಡ ಭಾರತ್ ಎನ್‌ಸಿಎಪಿ ಜಾರಿಯನ್ನು ಒಪ್ಪುತ್ತಿದೆ. ಇನ್ನು, ದೇಶದಲ್ಲಿಯೇ ಸುರಕ್ಷತಾ ಪರೀಕ್ಷೆ ನಡೆಸುವುದರಿಂದ ಗ್ರಾಹಕರಿಗೆ ಯಾವುದೇ ಭೀತಿಯಿಲ್ಲದೇ ತಮ್ಮಿಷ್ಟದ ಕಾರು ಖರೀದಿಸಲು ಸಾಧ್ಯವಾಗುತ್ತದೆ. ಏನೇ ಆಗಲಿ.. ಭಾರತ್ ಎನ್‌ಸಿಎಪಿ ಸ್ಟಾರ್ ರೇಟಿಂಗ್ ಪಡೆದಿರುವ ಕಾರುಗಳನ್ನು ನೋಡಲು ಕೆಲವು ತಿಂಗಳು ಕಾಯಲೇಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 18, 2023, 10:14 [IST]
English summary
Bharat ncap come effect from october 1 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+