ನ್ಯಾನೋ ಕಾರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಭಾವನಾ

ಕನ್ನಡ ಚಲನಚಿತ್ರದಲ್ಲಿ ಮುಟ್ಟಿದೆಲ್ಲ ಚಿನ್ನ ಮಾಡಿಕೊಂಡಿರುವ ಮಲಯಾಳದ ಆಮದು ನಟಿ ಭಾವನಾ ಮೆನನ್, ಇತ್ತೀಚೆಗಷ್ಟೇ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನಿಂದ ಅತ್ಯಂತ ಜನಪ್ರಿಯ ಟಾಟಾ ನ್ಯಾನೋ ಟೆಸ್ಟ್ ಡ್ರೈವ್‌ಗಾಗಿ ಪಡೆದುಕೊಂಡಿದ್ದರು.

ಸುದೀಪ್, ಪುನಿತ್ ರಾಜ್‌ಕುಮಾರ್ ಅವರಂತಹ ಸೂಪರ್ ಸ್ಟಾರ್ ನಟರೊಂದಿಗೆ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಬೇಡಿಕೆ ಕಾಯ್ದುಕೊಂಡಿರುವ ಭಾವನಾ, ಹಲವಾರು ಕಾರಣಗಳಿಗಾಗಿ ಚೊಕ್ಕದಾದ ನ್ಯಾನೋ ಕಾರನ್ನು ಇಷ್ಟಪಟ್ಟಿದ್ದಾರೆ.

ಟೆಸ್ಟ್ ಡ್ರೈವಿಂಗ್

ಟೆಸ್ಟ್ ಡ್ರೈವಿಂಗ್

ಟಾಟಾ ಮೋಟಾರ್ಸ್ ಹಾಗೂ ತ್ರಿಶೂರು ಮೂಲದ ಆಟೋ ಮ್ಯಾಗಜಿನ್ ಜಂಟಿಯಾಗಿ ಮಲ್ಲು ಬೆಡಗಿ ಭಾವನಾಗೆ ಟಾಟಾ ನ್ಯಾನೋ ವಿಶೇಷ ಆವೃತ್ತಿಯನ್ನು ಒದಗಿಸಿತ್ತು.

ದೀರ್ಘ ಸಮಯ

ದೀರ್ಘ ಸಮಯ

ಸಾಮಾನ್ಯವಾಗಿ ಟೆಸ್ಟ್ ಡ್ರೈವಿಂಗ್ ಕಾರುಗಳನ್ನು ಬೇಗನೇ ಹಿಂತಿರುಗಿಸಬೇಕಾಗುತ್ತದೆ. ಆದರೆ ಭಾವನಾಗೆ ಮಾತ್ರ ನ್ಯಾನೋ ಕಾರನ್ನು ನಾಲ್ಕು ದಿನಗಳ ವರೆಗೆ ತಮ್ಮ ಬಳಿಯೇ ಇರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.

ಮುದ್ದಾದ ಕಾರು

ಮುದ್ದಾದ ಕಾರು

ನ್ಯಾನೋ ನೋಡಿದ ತಕ್ಷಣ ಆಕರ್ಷಿತಳಾದ ಭಾವನಾ ತುಂಬಾ ಮುದ್ದಾದ ಕಾರು ಎಂದು ಹೇಳುತ್ತಾ ಮುದ್ದಿಸಿದ್ದಾರೆ.

ಎಂಜಿನ್ ಎಲ್ಲಿ?

ಎಂಜಿನ್ ಎಲ್ಲಿ?

ಬಳಿಕ ಕಾರಿನ ಹಿಂದುಗಡೆ ತೆರಳಿ ಢಿಕ್ಕಿ ತೆರೆಯುವ ಪ್ರಯತ್ನ ಮಾಡಿದ್ದಾರೆ. ಆವಾಗಷ್ಟೇ ನ್ಯಾನೋಗೆ ಬೂಟ್ ಸ್ಪೇಸ್ ಇಲ್ಲ. ಬದಲಾಗಿ ಹಿಂದುಗಡೆ ಎಂಜಿನ್ ಲಗತ್ತಿಸಲಾಗಿದೆ ಎಂಬುದನ್ನು ಭಾವನಾ ಮನಗಂಡಿದ್ದಾರೆ.

ಡ್ರೈವಿಂಗ್ ಗೊತ್ತಿಲ್ಲವಂತೆ

ಡ್ರೈವಿಂಗ್ ಗೊತ್ತಿಲ್ಲವಂತೆ

ಇಲ್ಲಿ ವಿಶೇಷವಾದ ಸಂಗತಿಯೆಂದರೆ ನಟಿ ಭಾವನಾ ಡ್ರೈವಿಂಗ್ ಕರಗತ ಮಾಡಿಕೊಂಡಿಲ್ಲ. ಹಾಗಿದ್ದರೂ ಡ್ರೈವಿಂಗ್ ಸೀಟಿನಲ್ಲಿ ಚಾಲಕರೊಬ್ಬರನ್ನು ನೇಮಕ ಮಾಡಿಕೊಂಡು ಸಿಟಿ ಸುತ್ತಾಡಿ ಬಂದಿದ್ದಾರೆ. ಅಲ್ಲದೆ ಸದ್ಯದಲ್ಲೇ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದಾರೆ.

ಟೊಯೊಟಾ ಕರೊಲ್ಲಾ ಆಲ್ಟೀಸ್

ಟೊಯೊಟಾ ಕರೊಲ್ಲಾ ಆಲ್ಟೀಸ್

ಅಂದ ಹಾಗೆ ದಕ್ಷಿಣ ಭಾರತದ ಜನಪ್ರಿಯ ನಟಿ ಭಾವನಾ ಬಳಿ ಟೊಯೊಟಾ ಕರೊಲ್ಲಾ ಆಲ್ಟೀಸ್ ಕಾರು ಸಹ ಇದೆ.

ಸಿಟಿ ಪಯಣಕ್ಕೆ ಸೂಕ್ತ

ಸಿಟಿ ಪಯಣಕ್ಕೆ ಸೂಕ್ತ

ಒಟ್ಟಿನಲ್ಲಿ ನಗರ ಸಂಚಾರಕ್ಕೆ ನ್ಯಾನೋ ಹೆಚ್ಚು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಭಾವನಾ ಎಸಿ, ಮೈಲೇಜ್ ಹಾಗೂ ಆರಾಮದಾಯಕ ಪಯಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Wednesday, August 28, 2013, 8:01 [IST]
English summary
Tata Motors and Trissur based automotive magazine jointly gave actress Bhavana a special edition of the Nano for long-time drive. Bhavana was excited and had a lot to say. “Nano is the best for travelling in the town. The air-conditioning is good, the mileage and the travel comfort".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+