ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ: ಕೊಂಚ ಯಾಮಾರಿದ್ದರೂ 36 ಜನರ ಪ್ರಾಣ ಏನಾಗುತ್ತಿತ್ತು?

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಭಾರತದಲ್ಲಿ ತನ್ನ ಸೇವೆ ಆರಂಭಿಸಿದಾಗಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಹಲವು ಬಾರಿ ಇದರ ವೇಗ, ವಿನ್ಯಾಸ ಮತ್ತು ಇದರಲ್ಲಿರುವ ಸೌಲಭ್ಯಗಳಿಗೆ ಸುದ್ದಿಯಾದರೆ ಇನ್ನು ಹಲವು ಬಾರಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ತನ್ನ ಇತರ ವ್ಯವಸ್ಥೆಯಿಂದ ಅಪಖ್ಯಾತಿಗೂ ಒಳಗಾಗಿದೆ.

ಇದರಲ್ಲಿ ಪ್ರಮುಖ ಆದವು ಎಂದರೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ (Vande Bharat Express) ಪ್ರಯಾಣ ದರ, ರೈಲಿನ ಗುಣಮಟ್ಟ ಹೀಗೆ ಇನ್ನೂ ಹಲವು ವಿಷಯಗಳಲ್ಲಿ ಅಪಖ್ಯಾತಿಯನ್ನೂ ಹೊಂದಿದೆ. ಇತ್ತೀಚೆಗಷ್ಟೇ ರೈಲಿನಲ್ಲಿ ಮಳೆಯ ನೀರು ಸೋರಿಕೆಯಾಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Bhopal To Delhi Vande Bharat Express

ಆದರೆ ಇದೀಗ ವಂದೇ ಭಾರತ್‌ ರೈಲು ಬೇರೊಂದು ರೀತಿಯಲ್ಲಿ ಅಪಖ್ಯಾತಿಗೆ ಒಳಗಾಗಿದೆ. ಅದೇನೆಂದರೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಭೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭೊಪಾಲ್‌ - ದೆಹಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು ಭೊಪಾಲ್‌ - ದೆಹಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಕೊಂಡ ಕೂಡಲೇ ಅದರಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಬೇರೆ ಬೋಗಿಗೆ ಸ್ಥಳಾಂತರ ಮಾಡಲಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾದ ಕುರಿತು ವರದಿಯಾಗಿಲ್ಲ.

Bhopal To Delhi Vande Bharat Express

ಮಾಹಿತಿಗಳ ಪ್ರಕಾರ ಭೋಪಾಲ್‌ ನಿಂದ ದೆಹಲಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿದ್ದ ಸಂಧರ್ಭದಲ್ಲಿ ನಿಜಾಮುದ್ದೀನ್‌ ಬಳಿಯ ಬಿನಾ ಸ್ಟೇಷನ್‌ನಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಅಲ್ಲಿದ್ದ ಸಾಕ್ಷಿಗಳ ಪ್ರಕಾರ ರೈಲಿನ ಬ್ಯಾಟರಿ ಕಂಪಾರ್ಟ್‌ಮೆಂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ.

ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ. ಅಗ್ನಿ ಅವಘಡಕ್ಕೆ ಒಳಗಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಸಂಖ್ಯೆಯನ್ನು 20171 ಎಂದು ಗುರುತಿಸಲಾಗಿದೆ. ಅಗ್ನಿ ಅವಘಡ ನಡೆಯುವ ವೇಳೆ ಬೋಗಿಯಲ್ಲಿ ಸುಮಾರು 36 ಮಂದಿ ಪ್ರಯಾಣಿಕರಿದ್ದರು.

ಇನ್ನು ಅಪಘಾತ ನಡೆದ ಕೂಡಲೇ ಸ್ಥಳದಲ್ಲಿದ್ದ ಅಗ್ನಿ ಶಾಮಕ ದಳ ಸಹಯಾಕ್ಕೆ ಆಗಮಿಸಿ ಬೋಗಿಯಲ್ಲಿದ್ದ ಯಾವೊಬ್ಬ ಪ್ರಯಾಣಿಕನಿಗೂ ಗಾಯಗಳಾಗದಂತೆ ಸ್ಥಳಾಂತರಗೊಳಿಸಿದ್ದು, ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿದ್ದಾರೆ. ಇನ್ನು ರೈಲಿನಲ್ಲಿ ಕಾಂಗ್ರೇಸ್‌ ನಾಯಕ ಅಜಯ್‌ ಸಿಂಗ್‌ ಸೇರಿದಂತೆ ಇತರ ಹಲವು ನಾಯಕರಿದ್ದರು ಎಂದು ತಿಳಿದು ಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 17, 2023, 18:14 [IST]
English summary
Bhopal to delhi vande bharat express catches fire
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+