ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸಿದೆ. ಕೊರೋನಾ ಸೋಂಕುವಿನ ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ಕೊರೋನಾ ಸೋಂಕಿತರು ಬೆಡ್, ಆಕ್ಸಿಜನ್ ಮತ್ತು ಆಂಬ್ಯುಲೆನ್ಸ್ ಸೇವೆ ಸಿಗದೇ ಪರದಾಡುತ್ತಿದ್ದಾರೆ.

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ಇನ್ನೊಂದು ಕಡೆ ಬಡ ಜನರು ಲಾಕ್ ಡೌನ್ ನಿಂದ ಕೆಲವರು ತಿನ್ನುವ ಅನ್ನಕ್ಕೆ ಪರದಾಡುತ್ತಿದ್ದಾರೆ. ಇಂತವರಿಗೆ ಹಲವು ಸೆಲಬ್ರಿಟಿಗಳು ನೆರವಾಗುತ್ತಿದ್ದಾರೆ. ಇದೇ ರೀತಿ ಕಳೆದ ಒಂದೆರೆಡು ವಾರದಿಂದ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಭುವನಂ ಫೌಂಡೇಶನ್‌ ವತಿಯಿಂದ ಆಹಾರ ಕಿಟ್​​ಗಳು ಹಾಗೂ ಆಕ್ಸಿಜನ್ ಸಿಗದೆ ಪರದಾಡುತ್ತಿರುವವರಿಗೆ ಆಕ್ಸಿಜನ್ ಒದಗಿಸಲು ಸಹಾಯ ಮಾಡುತ್ತಿದ್ದರು.

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ಇದೀಗ ಸ್ಯಾಂಡಲ್‌ವುಡ್ ನಟ, ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಮತ್ತೊಂದು ಮಹತ್ವದ ಹೆಚ್ಚೆ ಇಟ್ಟಿದ್ದಾರೆ. ಶ್ವಾಸ ಮತ್ತು ಬಾಂಧವ ಎಂಬ ಹೆಸರಿನ ಎರಡು ಸೇವೆಗಳನ್ನು ಭುವನ್​ ತಮ್ಮ ಭುವನಂ ಫೌಂಡೇಶನ್​ ವತಿಯಿಂದ ಆರಂಭಿಸಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ಈ ಎರಡು ಸೇವೆಗಳಿಗೆ ಫ್ರೀಡಂ ಪಾರ್ಕ್‌ನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಚಾಲನೆ ನೀಡಿದರು. ಆಕ್ಸಿಜನ್​ ಸಿಗದೆ ಕಷ್ಟಪಡುವವರಿಗಾಗಿ ಎರಡು ಆಕ್ಸಿಜನ್​ ಬಸ್​ಗಳ ವ್ಯವಸ್ಥೆ ಮಾಡಿದ್ದಾರೆ. ಎರಡು ಬಸ್ ಗಳಲ್ಲಿ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ವ್ಯವಸ್ಥೆಯನ್ನು ಮಾಡಿದ್ದಾರೆ.

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

'ಬಾಂಧವ' ಎಂಬ ಹೆಸರಿನ ಆಟೋಗಳ ಮೂಲಕ ಉಚಿತವಾಗಿ ಔಷಧಿ, ದಿನಸಿ, ಊಟ ಹಾಗೂ ಆಕ್ಸಿಜನ್ ಸರಬರಾಜು ಮಾಡಲಾಗುತ್ತದೆ. ಈ ಸೇವೆಗಳನ್ನು ಕೇವಲ ಬೆಂಗಳೂರಿಗೆ ಸೀಮಿತವಾಗಿ ಇಡದೆ, ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವಿದೆ ಎಂದು ಭುವನ್ ಪೊನ್ನಣ್ಣ ಹೇಳಿದ್ದಾರೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಹಮ್ಮಿಕೊಂಡಿರುವ ಈ ಕಾರ್ಯಗಳಿಗೆ ವ್ಯಾಪಕ ಮೆಚ್ಚುಗೆ ಪಾತ್ರವಾಗಿದೆ. ಇದಕ್ಕೂ ಮುಂಚೆ ಭುವನ್ ಪೊನ್ನಣ್ಣ ಹೆಲ್ಫ್‌ಲೈನ್ ಆರಂಭಿಸಿದ್ದರು. ಸಹಾಯ ಬೇಕದವರು ಕರೆ ಮಾಡಲು ಎಂದು ಖಾಸಗಿ ನಂಬರ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೀಡಿದ್ದರು.

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ಈ ನಂಬರ್'ಗೆ ಸಹಾಯ ಕೇಳೆ ದಿನಕ್ಕೆ 3-4 ಸಾವಿರ ಕರೆ ಬರಲು ಪ್ರಾರಂಭವಾಗಿತ್ತು. ನಂತರ ಅದಕ್ಕಾಗಿ ತಂಡವೊಂದನ್ನು ರಚಿಸಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದರು.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ವಾರಗಳ ಹಿಂದೆ ಸುಮಾರು 150 ಕೂಲಿ ಕಾರ್ಮಿಕ ಕುಟುಂಬಗಳಿಗೆ ಫುಡ್‌ ಕಿಟ್‌ಗಳನ್ನು ಹಂಚುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಈ ಫುಡ್‌ ಕಿಟ್‌ ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಮಸಾಲಾ ಪದಾರ್ಥಗಳು, ತರಕಾರಿಗಳನ್ನು ಒಳಗೊಂಡಿದೆ.

ಸೋಂಕಿತರಿಗೆ ನೆರವಾಗಲು ಆಕ್ಸಿಜನ್ ಎಕ್ಸ್‌ಪ್ರೆಸ್, ಉಚಿತ ಆಟೋ ಸೇವೆ ಆರಂಭಿಸಿದ ಸ್ಯಾಂಡಲ್‌ವುಡ್ ನಟ, ನಟಿ

ಇನ್ನು ಕೊಡಗು, ಉತ್ತರ ಕರ್ನಾಟಕದಲ್ಲಿ ವರ್ಷಗಳ ಹಿಂದೆ ಪ್ರವಾಹ ಉಂಟಾದ ಸಂದರ್ಭದಲ್ಲಿ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಹಲವರು ರೀತಿ ನೆರವು ನೀಡಿದ್ದರು, ಈ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರು ಚಿತ್ರರಂಗಕ್ಕೆ ಮಾದರಿ ನಟ ಮತ್ತು ನಟಿಯಾಗಿದ್ದಾರೆ.

Most Read Articles

Kannada
English summary
Bhavanam Foundation Starts Oxygen Epress Service. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X