'ರೇಂಜ್ ರೋವರ್' ಕಾರಿನಲ್ಲಿ ಬಂದಿಳಿದ ಬಿಗ್‌ಬಾಸ್ ವಿನ್ನರ್.. ನೋಡಲು ಮುಗಿಬಿದ್ದ ಅಭಿಮಾನಿಗಳು!
ಮುನಾವರ್ ಫಾರುಕಿ (Munawar Faruqui) ಸ್ಟ್ಯಾಂಡಪ್ ಕಾಮಿಡಿಯನ್, ರಾಪರ್ ಮತ್ತು ಸಿಂಗರ್ ಆಗಿ ಗುರುತಿಸಿಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಗಳವನ್ನು ಹೊಂದಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ಹಿಂದಿ 'ಬಿಗ್‌ಬಾಸ್ ಸೀಸನ್ 17'ರ ವಿಜೇತರಾದ ಬಳಿಕ, ಫಾರುಕಿ ಫ್ಯಾನ್ಸ್ ಫಾಲೋಯಿಂಗ್ ದ್ವಿಗುಣಗೊಂಡಿದ್ದು, ಹೋದಲ್ಲಿ ಬಂದಲ್ಲಿ ಕಿಕ್ಕಿರಿದು ತುಂಬಿರುತ್ತಾರೆ. ಮುನಾವರ್ ಫಾರುಕಿ ಅವರಿಗೆ ವಾಹನಗಳ ಮೇಲೆಯೂ ವಿಶೇಷವಾದ ಪ್ರೀತಿಯಿದ್ದು, ಹಲವು ದುಬಾರಿ ಬೆಲೆಯ ಕಾರು ಹಾಗೂ ಬೈಕ್‌ಗಳನ್ನು ಹೊಂದಿದ್ದಾರೆ.
ಇತ್ತಿಚೆಗೆ, ಕ್ಯಾನ್ಸರ್ ಜಾಗೃತಿ ಜಾಥಾದಲ್ಲಿ ಮುನಾವರ್ ಫಾರುಕಿ ಭಾಗವಹಿಸಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಜಾಥಾ ನಡೆಸುವ ಸ್ಥಳಕ್ಕೆ ತಮ್ಮದೇ 'ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್' ಕಾರಿನ ಫಾರುಕಿ ಆಗಮಿಸಿದ್ದು, ಸುತ್ತಲು ನಿಂತಿದ್ದ ಭದ್ರತಾ ಸಿಬ್ಬಂದಿ ಅವರಿಗೆ ರಕ್ಷಣೆ ನೀಡುತ್ತಿರುವುದನ್ನು ಕಾಣಬಹುದು.

ಈ ಹಿಂದೆ, ಬಿಷ್ಣೋಯಿ ಗ್ಯಾಂಗ್ ಮುನಾವರ್ ಫಾರುಕಿಗೂ ಜೀವ ಬೆದರಿಕೆಯೊಡ್ಡಿದೆ ಎಂಬ ವಿಚಾರ ಕೂಡ ಹೊರಬಂದಿತ್ತು. ದೆಹಲಿಯಲ್ಲಿ ಫಾರುಕಿ ಹತ್ಯೆಗೂ ಪಯತ್ನಿಸಿತ್ತು ಎಂದು ತಿಳಿದುಬಂದಿತ್ತು. ಕಾರ್ಯಕ್ರಮವೊಂದರಲ್ಲಿ ಮುನಾವರ್ ಫಾರುಕಿ ಹಿಂದೂ ದೇವರುಗಳನ್ನು ಅಪಮಾನ ಮಾಡಿದ್ದಾರೆ ಎಂಬ ಆರೋಪವಿದ್ದು, ಇದರಿಂದಲೇ ಬಿಷ್ಣೋಯಿ ಗ್ಯಾಂಗ್ ಟಾರ್ಗೆಟ್ ಮಾಡಿದೆ ಎನ್ನಲಾಗಿತ್ತು.
ಮುನಾವರ್ ಫಾರುಕಿ ಬಳಿಯಿರುವ ಈ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ (Land Rover Range Rover Sport) ಕಾರಿನ ವಿಶೇಷತೆ ಬಗ್ಗೆ ಮಾತನಾಡುವುದಾದರೆ, ಇದೊಂದು ಪ್ರೀಮಿಯಂ ಎಸ್‌ಯುವಿಯಾಗಿದೆ. ರೂ.1.40 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎರಡು ಶಕ್ತಿಯುತ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ.

ಇದರ 3-ಲೀಟರ್ ಡಿ350 ಡೀಸೆಲ್ ಮೈಲ್ಡ್ ಹೈಬ್ರಿಡ್ ಎಂಜಿನ್, 351 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 700 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 3-ಲೀಟರ್ ಪಿ400 ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಎಂಜಿನ್, 398 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 550 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಈ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿ 234 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಎಡಬ್ಲ್ಯೂಡಿ (ಆಲ್-ವೀಲ್ ಡ್ರೈವ್) ಟೆಕ್ನಾಲಜಿಯನ್ನು ಪಡೆದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಪ್ರವಾಸಕ್ಕೆ ಹೋಗುವಾಗ 647 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ನೂತನ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಕಾರು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (13.1-ಇಂಚು), ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (13.7-ಇಂಚು), ಸನ್‌ರೂಫ್, 4-ಜೋನ್ ಕ್ಲೇಮೇಟ್ ಕಂಟ್ರೋಲ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾಗಳನ್ನು ಪಡೆದಿದೆ.
ತೀರಾ ಇತ್ತೀಚೆಗೆ ಮುನಾವರ್ ಫಾರುಕಿ ಜಾವಾ 42 ಬಾಬರ್ (Jawa 42 Bobber) ಬೈಕ್‌ನ್ನು ಖರೀದಿ ಮಾಡಿದ್ದರು. ಇದು ರೂ.2.28 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 334 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 30.56 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications