ಕೊನೆಗೂ ಸಿಕ್ಕಿಬಿದ್ದ ದೇಶದ ಅತಿ ದೊಡ್ಡ ಕಾರುಗಳ್ಳರ ಗ್ಯಾಂಗ್
ಕಾರು ಕಳ್ಳತನವು ಭಾರತದ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ದಿನೇ ದಿನೇ ಕಾರುಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಜನರು ತಮ್ಮ ಬೆಲೆ ಬಾಳುವ ಕಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ತಾವು ಕಳೆದುಕೊಂಡ ಕಾರುಗಳನ್ನು ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಲಕ್ನೋ ಪೊಲೀಸರು ಇತ್ತೀಚೆಗೆ ಕಾರುಗಳುವು ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ನಿಂದ ರೂ.11 ಕೋಟಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಜೂನ್ 21ರಂದು ಪೊಲೀಸರು ಐವರನ್ನು ಬಂಧಿಸಿ 50 ವಾಹನಗಳನ್ನು ವಶಪಡಿಸಿಕೊಂಡಿದ್ದರು. ಈಗ ಮತ್ತೆ 62 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ವಶಕ್ಕೆ ಪಡೆದ ವಾಹನಗಳ ಸಂಖ್ಯೆ 112ಕ್ಕೇರಿದೆ.

ಈ ಮೂಲಕ ಅತಿದೊಡ್ಡ ಕಾರುಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಲಕ್ನೋ ಪೊಲೀಸರು ಹೇಳಿದ್ದಾರೆ. ಈ ಗ್ಯಾಂಗ್ ಇದುವರೆಗೂ 2000ಕ್ಕೂ ಹೆಚ್ಚು ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಹೇಳಿದೆ. ಕದ್ದ ವಾಹನದ ಮಾಹಿತಿಯನ್ನು ಮರೆಮಾಡಲು, ಈ ಕಳ್ಳರು ಅಪಘಾತಕ್ಕೀಡಾದ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಬಳಸುತ್ತಿದ್ದರು.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಎಂಜಿನ್ ನಂಬರ್ ಹಾಗೂ ಚಾಸಿಸ್ ನಂಬರ್ ನಂತಹ ಪ್ರಮುಖ ಮಾಹಿತಿಯನ್ನು ಕದ್ದ ನಂತರ, ಕದ್ದ ಕಾರುಗಳ ಮಾಹಿತಿಯನ್ನು ಬದಲಾಯಿಸುತ್ತಿದ್ದರು. ಈ ಗ್ಯಾಂಗ್ ಹಾಳಾಗಿದ್ದ ವಾಹನಗಳನ್ನು ಖರೀದಿಸಿ ಅವುಗಳ ರಿಜಿಸ್ಟ್ರೇಷನ್ ಮಾಹಿತಿಯನ್ನು ಕದ್ದ ಕಾರುಗಳೊಂದಿಗೆ ಬದಲಿಸುತ್ತಿದ್ದರು.

ನಂತರ ಈ ಕಾರುಗಳನ್ನು ಹೊರ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಈ ಗ್ಯಾಂಗ್ ಬಿಎಂಡಬ್ಲ್ಯು,ಟೊಯೊಟಾ ಇನೋವಾ, ಟೊಯೊಟಾ ಫಾರ್ಚೂನರ್ ಹಾಗೂ ಇನೋವಾ ಕ್ರಿಸ್ಟಾದಂತಹ ದುಬಾರಿ ಬೆಲೆಯ ಕಾರುಗಳನ್ನು ಕದಿಯುತ್ತಿತ್ತು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸದ್ಯಕ್ಕೆ ತನಿಖೆ ಮುಂದುವರೆದಿದೆ. ಈ ಗ್ಯಾಂಗ್‌ನ ಇತರ ಸದಸ್ಯರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕದ್ದ ಕಾರುಗಳನ್ನು ಮಾರಾಟ ಮಾಡಿ ಬ್ಯಾಂಕಾಕ್‌ನಂತಹ ಸ್ಥಳಗಳಲ್ಲಿ ಮೋಜು ಮಾಡುತ್ತಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಥೈಲ್ಯಾಂಡ್ ಪ್ರವಾಸದ ಅನೇಕ ಫೋಟೋಗಳು ಕಂಡುಬಂದಿವೆ.

ಈ ಗ್ಯಾಂಗ್ ನ ಇತರ ಸದಸ್ಯರನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ವಾಹನಗಳನ್ನು ಕದ್ದು, ಹಾಳು ಮಾಡಿ ಅವುಗಳ ಗುರುತು ಸಿಗದಂತೆ ಮಾಡುವುದು ಕಳ್ಳರ ಸಾಮಾನ್ಯ ವಿಧಾನವಾಗಿದೆ. ಇದರಿಂದಾಗಿ ಪೊಲೀಸರಿಗೆ ಕದ್ದ ವಾಹನಗಳನ್ನು ಟ್ರ್ಯಾಕ್ಮಾಡುವುದಕ್ಕೆ ಕಷ್ಟವಾಗುತ್ತದೆ. ಕಾರುಗಳ್ಳರ ಬಹುತೇಕ ಗ್ಯಾಂಗ್‌ಗಳು ಕದ್ದ ಕಾರುಗಳ ಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತವೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾರುಗಳು ಕಳ್ಳತನವಾಗದಂತೆ ತಡೆಯಲು ಹಲವಾರು ಹೊಸ ಹೊಸ ಫೀಚರ್ ಗಳಿವೆ. ಹೈ ಎಂಡ್ ಕಾರುಗಳು ಇಮೊಬೈಲೈಸರ್ ಅನ್ನು ಹೊಂದಿವೆ. ಇದರಿಂದ ಡೂಪ್ಲಿಕೇಟ್ ಕೀ ಮೂಲಕ ಕಾರನ್ನು ತೆರೆಯುವುದು ಅಸಾಧ್ಯವಾಗುತ್ತದೆ. ಕಾರಿನಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದರೆ ಕಾರು ಕಳುವಾದ ಸಂದರ್ಭದಲ್ಲಿ ಕಾರಿರುವ ಸ್ಥಳವನ್ನು ಸುಲಭವಾಗಿ ಪತ್ತೆಹಚ್ಚಬಹುದು.


Click it and Unblock the Notifications