ಎಲೆಕ್ಟ್ರಿಕ್ ವಾಹನ ಮಾಲೀಕರ ತಲೆಕೆಡಿಸುವ ಪ್ರಮುಖ ಅಂಶಗಳು: ಇವಿ ಖರೀದಿಗೂ ಇದನ್ನು ಮರೆಯಬೇಡಿ
ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದೇ ಸಮನೆ ಆಕಾಶಕ್ಕೆ ಮುಖ ಮಾಡಿರುವುದರಿಂದ ಇವಿ ವಾಹನಗಳು ಪ್ರವರ್ಧಮಾನಕ್ಕೆ ಬರುತ್ತಿದೆ. ಪಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು (Electric vehicle) ಹೆಚ್ಚು ಲಾಭದಾಯಕವೇ. ಆದರೆ ಅದಕ್ಕೆ ಅದರದೇ ಆದ ಕೆಲವು ಅಡೆತಡೆಗಳಿವೆ.
ರೇಂಜ್ ಬಗೆಗಿನ ಆತಂಕ: ಎಲೆಕ್ಟ್ರಿಕ್ ವಾಹನಗಳಲ್ಲಿ ರೇಂಜ್ ಬಗೆಗಿನ ಆತಂಕ ಒಂದು ದೊಡ್ಡ ಸಮಸ್ಯೆಯೇ ಸರಿ. ಎಲೆಕ್ಟ್ರಿಕ್ ವಾಹನಗಳ ರೇಂಜ್ ಅಥವಾ ಅದು ಚಲಿಸುವ ಅಂತರಕ್ಕೆ ಒಂದು ನಿರ್ದಿಷ್ಟವಾದ ಮಿತಿಗಳಿವೆ. ಅದು ಒಂದು ಕಾರಿನಿಂದ ಇನ್ನೊಂದು ಕಾರಿಗೆ ಬದಲಾಗುತ್ತವೆಯಾದರೂ, ಇಂಧನಗಳ ವಾಹನಗಳಂತೆ ನಿರಾತಂಕವಾಗಿ ಇವುಗಳನ್ನು ಓಡಿಸಲು ಸಾಧ್ಯವಿಲ್ಲ.

ಇತರ ವಾಹನಗಳಿಗಿಂತ ದುಬಾರಿ: ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ಮುಂತಾದಂತಹ ವಾಹನಗಳಿಗೆ ಹೋಲಿಸಿದರೆ ಈ ಎಲೆಕ್ಟ್ರಿಕ್ ವಾಹನಗಳು ಅಥವಾ ಇವಿಗಳು ದುಬಾರಿಯೇ ಸರಿ. ಹೌದು, ಇದೇ ಕಾರಣದಿಂದಾಗಿ ಎಲೆಕ್ಟ್ರಿಕ್ ಕಾರಿನ ಮೇಲಿರುವ ಒಲವು ಕಡಿಮೆಯಾಗಲೂಬಹುದು. ಇದೂ ಸಹ ಇವಿ ವಾಹನವನ್ನು ಖರೀದಿಸಲು ಮುಳುವಾಗಬಹುದು.
ಚಾರ್ಜಿಂಗ್ ಸಮಯ: ಎಲೆಕ್ಟ್ರಿಕ್ ವಾಹನಗಳ ಮಾಲೀಕರು ಎದುರಿಸುವ ಬಹುದೊಡ್ಡ ಅಡೆತಡೆಗಳಲ್ಲಿ ಇದೂ ಸಹ ಒಂದು. ಬಹಳಷ್ಟು ಮಂದಿ ಇದೇ ಕಾರಣದಿಂದಲೇ ಎಲೆಕ್ಟ್ರಿಕ್ ವಾಹಗಳನ್ನು ಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಕೆಲವೊಂದು ಕಾರುಗಳು ಬ್ಯಾಟರಿ ಫುಲ್ ಆಗಲು ರಾತ್ರಿಯೆಲ್ಲಾ ಚಾರ್ಜ್ ಮಾಡಬೇಕಾಗುತ್ತದೆ. ಫಾಸ್ಟ್ ಚಾರ್ಜ್ ಆಗುವ ಕಾರಿಗೆ ಇನ್ನೂ ಹೆಚ್ಚಿನ ಮೊತ್ತವನ್ನು ನೀಡಬೇಕಾಗುತ್ತದೆ.

ಚಾರ್ಜಿಂಗ್ ಸೌಲಭ್ಯ: ಚಾರ್ಜಿಂಗ್ ಸಮಯದಂತೆ ಎಲೆಕ್ಟ್ರಿಕ್ ವಾಹನಗಳ ಮಾಲೀಕರು ಎದುರಿಸುವ ಮತ್ತೊಂದು ಬಹುದೊಡ್ಡ ಸಮಸ್ಯೆಯೆಂದರೆ ಅದು ಚಾರ್ಜಿಂಗ್ ಸೌಲಭ್ಯ. ಈಗ ಸುಲಭವಾಗಿ ದೊರಕುವ ಪೆಟ್ರೋಲ್ ಮತ್ತು ಡೀಸೆಲ್‌ನಂತೆ ಎಲೆಕ್ಟ್ರಿಕ್ ಚಾರ್ಜಿಂಗ್ ಸೌಲಭ್ಯ ದೊರಕುವುದಿಲ್ಲ. ಚಾರ್ಜಿಂಗ್ ಸೌಲಭ್ಯಗಳು ಅಭಿವೃದ್ದಿಯಾದರೆ ಮಾತ್ರ ಇವಿ ವಾಹನಗಳು ಮುನ್ನೆಲೆಗೆ ಬರಲು ಸಾಧ್ಯ.
ಬ್ಯಾಟರಿ ಟೆಕ್ನಾಲಜಿ ಮತ್ತು ದರ: ಬ್ಯಾಟರಿ ಟೆಕ್ನಾಲಜಿ ಮತ್ತು ದರವೂ ಸಹ ಇವಿ ವಾಹನಗಳನ್ನು ಬಯಸುವವರು ಒಮ್ಮೆ ಯೋಚಿಸುವಂತೆ ಮಾಡುತ್ತದೆ. ಎಲೆಕ್ಟ್ರಿಕ್ ವಾಹನದ ಬ್ಯಾಟರಿಯ ದರ, ಮತ್ತು ನಿರ್ದಿಷ್ಟ ಕಾಲಾವಧಿ ಮುಗಿದಾಗ ಅದನ್ನು ಬದಲಾವಣೆ ಮಾಡಬೇಕಾಗುವ ಪರಿಸ್ಥಿತಿಯೂ ಸಹ ಇವಿ ಕೊಳ್ಳಲು ಹಿಂದೇಟು ಹಾಕುವಂತೆ ಮಾಡುತ್ತದೆ.
ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವುದರಿಂದ ಪೃಕೃತಿಯನ್ನು ಶುದ್ದವಾಗಿ ಕಾಪಾಡಿಕೊಳ್ಳಬಹುದು, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮುಂತಾದವನ್ನು ತಡೆಗಟ್ಟಬಹುದಾದರೂ ಈ ಮೇಲೆ ತಿಳಿಸಿದ ಕೆಲವೊಂದು ವಿಷಯಗಳು ಬಗೆಹರಿಯಲೇ ಬೇಕಾಗುತ್ತದೆ. ಹಾಗೇನಾದರೂ ಪರಿಹಾರ ಆಗದೇ ಇದ್ದಲ್ಲಿ ಇವಿಯನ್ನು ಒಂದು ಪ್ರಮುಖ ಕಾರಾಗಿ ಬಳಸುವುದು ಕಷ್ಟಸಾಧ್ಯವೇ ಸರಿ ಎನ್ನಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications