ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಕಾರುಗಳಿಗೆ ಹೋಲಿಸಿದರೆ ದ್ವಿ ಚಕ್ರ ವಾಹನಗಳೇ ಹೆಚ್ಚು ಪ್ರಮಾಣದಲ್ಲಿ ಅಪಘಾತಕ್ಕೀಡಾಗುತ್ತವೆ. ರಸ್ತೆ ಅಪಘಾತಗಳಲ್ಲಿ ದ್ವಿ ಚಕ್ರ ವಾಹನ ಸವಾರರೇ ಹೆಚ್ಚು ಸಾವನ್ನಪ್ಪುತ್ತಾರೆ. ಹೆಲ್ಮೆಟ್ ಧರಿಸಿ ದ್ವಿ ಚಕ್ರ ವಾಹನದಲ್ಲಿ ಚಲಿಸಿದರೆ ಸಾವನ್ನಪ್ಪುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಹೆಲ್ಮೆಟ್ ಧರಿಸಿದ್ದರೆ ಅಪಘಾತ ಸಂಭವಿಸಿದಾಗ ತಲೆಗೆ ಪೆಟ್ಟಾಗುವ ಸಾಧ್ಯತೆಗಳು ಕಡಿಮೆ. ಇದರಿಂದಾಗಿ ಆಸ್ಪತೆಗೆ ದಾಖಲಾಗುವುದು ತಪ್ಪುತ್ತದೆ. ಹೆಲ್ಮೆಟ್‍‍ಗಳು ತಲೆಗೆ ಪೂರ್ಣ ಪ್ರಮಾಣದ ರಕ್ಷಣೆಯನ್ನು ನೀಡುತ್ತವೆ. ಈ ಕಾರಣಕ್ಕಾಗಿ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿಯ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಭಾರತದಲ್ಲಿ ಅಡುಗೆ ಮಾಡಲು ಈರುಳ್ಳಿ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿದೆ. ಆದರೆ ಈಗ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಈ ಕಾರಣಕ್ಕೆ ಈರುಳ್ಳಿಯ ಬೆಲೆ ಗಗನಕ್ಕೇರಿದೆ. ಈ ಬೆಲೆ ಏರಿಕೆಯ ಪರಿಣಾಮಕ್ಕೆ ಗೃಹಿಣಿಯರು ತತ್ತರಿಸಿ ಹೋಗಿದ್ದಾರೆ. ಈರುಳ್ಳಿಯ ಬೆಲೆ ಏರಿಕೆಯಿಂದಾಗಿ ಹೋಟೆಲ್‍‍ಗಳಲ್ಲಿನ ತಿಂಡಿಗಳ ಬೆಲೆ ಏರಿಕೆಯಾಗಿದೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಈರುಳ್ಳಿಯ ಬೆಲೆಯನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈರುಳ್ಳಿಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಹಲವೆಡೆ ವ್ಯಾಪಾರಿಗಳು ಈರುಳ್ಳಿಯನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಕಂಡು ಬಂದಿದೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಇದರ ಜೊತೆಗೆ ಬೇರೆ ದೇಶಗಳಿಂದಲೂ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಭಾರತದ ಹಲವು ನಗರಗಳಲ್ಲಿ ಈರುಳ್ಳಿಯ ಬೆಲೆಯು ಪ್ರತಿ ಕೆ.ಜಿಗೆ ರೂ.75ಗಳಿಂದ ರೂ.120ಗಳಾಗಿದೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಈರುಳ್ಳಿಯ ಬೆಲೆಯೇರಿಕೆಯ ಬಗ್ಗೆ ಹಲವಾರು ಜೋಕ್‍‍ಗಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬೆಲೆ ಏರಿಕೆಯ ನಡುವೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ದೇಶದ ಉಳಿದೆಡೆ ಈರುಳ್ಳಿಯ ಬೆಲೆ ನೂರು ರೂಪಾಯಿಯ ಗಡಿಯನ್ನು ದಾಟಿದ್ದರೂ ಪಾಟ್ನಾದಲ್ಲಿ ಪ್ರತಿ ಕೆ.ಜಿಗೆ ರೂ.35 ರಂತೆ ಮಾರಾಟ ಮಾಡಲಾಗಿದೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಪಾಟ್ನಾದಲ್ಲಿರುವ ಸರ್ಕಾರಿ ಕೋ ಆಪರೇಟಿವ್ ಸ್ಟೋರ್‍‍ನಲ್ಲಿ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಆದರೆ ಈ ರೀತಿ ಕಡಿಮೆ ಬೆಲೆಗೆ ಮಾರಾಟ ಮಾಡುವಾಗ ಹೆಲ್ಮೆಟ್ ಧರಿಸಿ ಮಾರಾಟ ಮಾಡಲಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ನಾವು ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಈ ಕಾರಣಕ್ಕೆ ನಮ್ಮ ಮೇಲೆ ದಾಳಿಯಾಗುವ ಸಾಧ್ಯತೆಗಳಿವೆ. ಈ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಕಾರಣಕ್ಕೆ ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿರುವ ಕೋ ಆಪರೇಟಿವ್ ಸಿಬ್ಬಂದಿ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಕಡಿಮೆ ಬೆಲೆಗೆ ಈರುಳ್ಳಿ ಮಾಡುತ್ತಿರುವ ಕಾರಣಕ್ಕೆ ಜನರು ಕ್ಯೂನಲ್ಲಿ ನಿಂತು ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ. ಕೆಲವರಂತೂ ಬೆಳಿಗ್ಗೆ 4 ಗಂಟೆಗೆ ಬಂದು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಕ್ಯೂನಲ್ಲಿ ನಿಲ್ಲಲು ಆಗದವರು ಕಲ್ಲುಗಳನ್ನು ಎಸೆಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೋ ಆಪರೇಟಿವ್ ಸಿಬ್ಬಂದಿ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ವರದಿಗಳ ಪ್ರಕಾರ, ಜಿಲ್ಲಾಡಳಿತವು ಈ ಕೋ ಆಪರೇಟಿವ್ ಸಿಬ್ಬಂದಿಗೆ ಯಾವುದೇ ರಕ್ಷಣೆಯನ್ನು ಒದಗಿಸಿಲ್ಲ. ಈ ಕಾರಣಕ್ಕಾಗಿ ಸಿಬ್ಬಂದಿ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಈರುಳ್ಳಿ ಮಾರಾಟ ಮಾಡುತ್ತಿರುವವರೇ ತಮ್ಮ ತಲೆಯ ರಕ್ಷಣೆಗಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಇನ್ನು ಇದರ ಬಗ್ಗೆ ದ್ವಿ ಚಕ್ರ ವಾಹನ ಸವಾರರು, ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದರ ಬಗ್ಗೆ ಯೋಚನೆ ಮಾಡಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್‍‍ಗಳು ತಲೆಗೆ ಮಾತ್ರ ರಕ್ಷಣೆ ನೀಡದೇ, ಕಣ್ಣುಗಳಿಗೂ ಸಹ ರಕ್ಷಣೆಯನ್ನು ನೀಡುತ್ತವೆ. ರಸ್ತೆಯಲ್ಲಿ ಚಲಿಸುವಾಗ ಯಾವುದೇ ತರಹದ ಧೂಳು, ಕಸ ಕಣ್ಣಿಗೆ ಬೀಳದಂತೆ ಹೆಲ್ಮೆಟ್‍‍ಗಳು ರಕ್ಷಣೆ ನೀಡುತ್ತವೆ.

ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡಿದ ಕೋ ಆಪರೇಟಿವ್ ಸಿಬ್ಬಂದಿ

ಹೆಲ್ಮೆಟ್ ಧರಿಸಬೇಕೆಂಬ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್‍‍ಗಳನ್ನು ಧರಿಸುವುದು ಸರಿಯಲ್ಲ. ಕಳಪೆ ಗುಣಮಟ್ಟದ ಹೆಲ್ಮೆಟ್‍‍ಗಳನ್ನು ಧರಿಸಿದರೇ ಅಪಘಾತದಲ್ಲಿ ಪೆಟ್ಟು ಬೀಳುವುದು ಖಚಿತ. ಆದ ಕಾರಣ ಗುಣಮಟ್ಟದ ಹೆಲ್ಮೆಟ್‍‍ಗಳನ್ನು ಧರಿಸುವುದು ಒಳ್ಳೆಯದು.

Most Read Articles

Kannada
English summary
Bihar cooperative employees sell onion wearing helmets - Read in Kannada
Story first published: Tuesday, December 3, 2019, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X