ಭಾರತವೇ ತಿರುಗಿ ನೋಡುವಂತೆ ಮಾಡಿದ ಬಡ ರೈತ!

'ವಿನೋದ್ ಕುಮಾರ್ ಪಟೇಲ್' ಸದ್ಯ ದೇಶದಲ್ಲಿ ಚರ್ಚೆಯಲ್ಲಿರುವ ಹೆಸರು, ಈತ ಬಿಹಾರದ ಬಡ ರೈತ. ಬೇಸಾಯವನ್ನೇ ನಂಬಿಕೊಂಡಿರುವ ಕಷ್ಟಜೀವಿ, ಮೂಲಸೌಕರ್ಯವಿಲ್ಲದೇ ನಾನಾ ಕಷ್ಟಗಳನ್ನು ಎದುರುಸಿದ್ದಾರೆ. ಹಣ ಇಲ್ಲದಿದ್ದರೇನಂತೆ ನನ್ನ ಬುದ್ದಿಶಕ್ತಿಯೇ ನನಗೆ ಆಯುಧವೆಂದು ಎದೆಗುಂದದೇ ಬೇಸಾಯವನ್ನು ಮಾಡಿತೋರಿಸಿದ ಯಶಸ್ವಿ ರೈತ ಇವರು.

50 ವರ್ಷದ ವಿನೋದ್ ಕುಮಾರ್ ಪಟೇಲ್‌ ಬಿಹಾರದ ಸಿವಾನ್ ಜಿಲ್ಲೆಯ ರಘುನಾಥಪುರ ಉಪವಿಭಾಗದಲ್ಲಿರುವ ಫುಲ್ವಾರಿಯಾ ಗ್ರಾಮದವರು. ಅಗತ್ಯ ಕೃಷಿ ಉಪಕರಣಗಳ ಕೊರತೆ ಮತ್ತು ಅದನ್ನು ಖರೀದಿಸಲು ಬೇಕಾದ ಹಣವಿಲ್ಲದೇ ಪರದಾಡಿದ್ದ ವ್ಯಕ್ತಿ. ಈ ಸವಾಲಿನ ನಡುವೆಯೂ ಅವರು ಧೈರ್ಯ ಕಳೆದುಕೊಳ್ಳಲಿಲ್ಲ, ತಮ್ಮ ಪಂಪಿಂಗ್ ಸೆಟ್ ಯಂತ್ರದ ಎಂಜಿನ್ ಸಹಾಯದಿಂದ ಟ್ರ್ಯಾಕ್ಟರ್ ಅನ್ನು ನಿರ್ಮಿಸಿ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.

bihar-farmer-built-tractor-pumpset-engine

ಈ ಟ್ರ್ಯಾಕ್ಟರ್ ಅನ್ನು ಅಭಿವೃದ್ಧಿಪಡಿಸಲು ವಿನೋದ್ ಕುಮಾರ್ ಪಟೇಲ್ ಅವರು ಸುಮಾರು 1 ವರ್ಷ ತೆಗೆದುಕೊಂಡಿದ್ದಾರೆ. ಅಲ್ಲದೇ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಈ ಟ್ರ್ಯಾಕ್ಟರ್ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಅದರಲ್ಲೂ ವಿನೋದ್ ಕುಮಾರ್ ಪಟೇಲ್ ಅವರ ಊರಿನ ಅನೇಕ ಜನರು ಈ ಟ್ರ್ಯಾಕ್ಟರ್ ಅನ್ನು ಬೆರಗಿನಿಂದ ನೋಡುತ್ತಿದ್ದಾರೆ.

ಅಸಮರ್ಪಕ ಸೌಲಭ್ಯಗಳು, ಹಣದ ಕೊರತೆಯ ನಡುವೆಯೂ ವಿನೋದ್ ಕುಮಾರ್ ಪಟೇಲ್ ಹೊಸ ಟ್ರ್ಯಾಕ್ಟರ್ ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಅದ್ಭುತ. ತಮ್ಮ ವಿಶಿಷ್ಟ ಟ್ರಾಕ್ಟರ್‌ನೊಂದಿಗೆ ಫುಲ್ವಾರಿಯಾ ಗ್ರಾಮದಲ್ಲಿ ಸದ್ಯ ಪ್ರಾಬಲ್ಯ ಸಾಧಿಸಿದ್ದಾರೆ. ಈ ಟ್ರಾಕ್ಟರ್ ಸಹಾಯದಿಂದ ಸುಲಭವಾಗಿ ಸಾಮಾನ್ಯ ಟ್ರಾಕ್ಟರ್‌ನಂತೆ ಗದ್ದೆ ಉಳುಮೆ ಮಾಡಬಹುದು ಎಂದು ವಿನೋದ್ ತಿಳಿಸಿದ್ದಾರೆ.

ಈ ಟ್ರ್ಯಾಕ್ಟರ್ ನಲ್ಲಿ 350 ಎಚ್‌ಪಿ ಪಂಪಿಂಗ್ ಸೆಟ್ ಯಂತ್ರದ ಎಂಜಿನ್ ಬಳಸಿದ್ದೇನೆ. ಮೊದಲು ಈ ಇಂಜಿನ್ ಅನ್ನು ಯಾವುದೇ ಪ್ರಯೋಜನವಿಲ್ಲದಂತೆ ಇಡಲಾಗಿತ್ತು. ಇದನ್ನು ಬಳಸಿಕೊಂಡು ಟ್ರಾಕ್ಟರ್ ಅಭಿವೃದ್ಧಿಪಡಿಸುವ ಕೆಲಸಕ್ಕೆ ಕೈಹಾಕಿದ್ದೆ, ಆದ್ರೆ ಆರಂಭದಲ್ಲಿ ಎಡವಿದ್ದೆ, ಕೊನೆಗೂ ಒಂದು ವರ್ಷದ ಸತತ ಪ್ರಯತ್ನದಿಂದ ಟ್ರಾಕ್ಟರ್ ನಿರ್ಮಿಸಿದ್ದೇನೆ. ಸಾಮಾನ್ಯ ಟ್ರ್ಯಾಕ್ಟರ್ ಮಾಡುವ ಎಲ್ಲಾ ಕೆಲಸಗಳನ್ನು ಈ ಟ್ರ್ಯಾಕ್ಟರ್ ಮಾಡಲಿದೆ ಎಂದು ವಿನೋದ್ ಕುಮಾರ್ ಪಟೇಲ್ ತಿಳಿಸಿದ್ದಾರೆ.

ವಿನೋದ್ ಅವರ ಪ್ರಕಾರ, ಚಕ್ರಗಳನ್ನು ಹೊರತುಪಡಿಸಿ ಟ್ರ್ಯಾಕ್ಟರ್‌ನ ಪ್ರತಿಯೊಂದು ಭಾಗವು ಕಬ್ಬಿಣದಿಂದ ಮಾಡಲ್ಪಟ್ಟಿದೆ. ಟ್ರ್ಯಾಕ್ಟರ್‌ನ ಎಕ್ಸ್‌ಟ್ರಾಕ್ಟರ್ ಅನ್ನು ವೆಲ್ಡಿಂಗ್ ಮೂಲಕ ತಯಾರಿಸಿ ನಂತರ ಪಂಪಿಂಗ್ ಸೆಟ್ ಯಂತ್ರದ ಎಂಜಿನ್ ಅನ್ನು ಅಳವಡಿಸಿದ್ದಾರೆ. ಮೊದಲು ಹಣ ಮತ್ತು ಬೆಂಬಲವಿಲ್ಲದೇ ಟ್ರ್ಯಾಕ್ಟರ್ ಅನ್ನು ಅಭಿವೃದ್ಧಿಪಡಿಸಲು ಹೆಣಗಾಡಿದ್ದ ಅವರು, ಈಗ ರಾತ್ರೋ ರಾತ್ರಿ ಫೇಮಸ್ ಆಗಿದ್ದಾರೆ.

ಉತ್ಪನ್ನವು ಈಗ ಎಲ್ಲರನ್ನೂ ಮೆಚ್ಚಿಸಿದ್ದರಿಂದ ವಿನೋದ್ ಕುಮಾರ್ ಪಟೇಲ್ ಅವರು ಇದೇ ರೀತಿಯ ಟ್ರ್ಯಾಕ್ಟರ್ ನಿರ್ಮಿಸಲು ಆರ್ಡರ್ ಪಡೆಯುತ್ತಿರುವುದಾಗಿ ವರದಿಯಾಗಿದೆ. ಹಲವರು ರೈತರು ವಿನೋದ್ ಕುಮಾರ್ ಪಟೇಲ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಅವರು ಇಲ್ಲಿಯವರೆಗೆ 25 ಆರ್ಡರ್‌ಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ವಿನೋದ್‌ ಕುಮಾರ್ ಆರ್ಡರ್‌ಗಳನ್ನು ಪೂರ್ಣಗೊಳಿಸಲು ಮತ್ತು ಗ್ರಾಹಕರಿಗೆ ಸಮಯಕ್ಕೆ ಟ್ರಾಕ್ಟರ್‌ಗಳನ್ನು ತಲುಪಿಸುವ ಗುರಿಯನ್ನು ಹೊಂದಿದ್ದಾರೆ. ಈ ಸಮಸ್ಯೆಯನ್ನು ಎದುರಿಸಲು ವಿನೋದ್ ಷರತ್ತು ವಿಧಿಸಿದ್ದಾರೆ. ಟ್ರ್ಯಾಕ್ಟರ್ ವೆಚ್ಚದಲ್ಲಿ ಶೇ50 ರಷ್ಟು ಹಣ ಮುಂಗಡವಾಗಿ ನೀಡುವಂತೆ ಗ್ರಾಹಕರನ್ನು ಕೇಳಿದ್ದಾರೆ. ವಾಹನಗಳನ್ನು ತಯಾರಿಸಿದ ಬಳಿಕ ಉಳಿದ ಮೊತ್ತವನ್ನು ಅವರಿಗೆ ನೀಡಬಹುದು ಎಂದು ಅವರು ಹೇಳಿದ್ದಾರೆ. ಈ ಶ್ರಮಜೀವಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, August 18, 2023, 13:31 [IST]
English summary
Bihar farmer built tractor pumpset engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+