ಲಾಕ್‌ಡೌನ್ ಎಫೆಕ್ಟ್: ಮಗುವಿನ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ಗಿಫ್ಟ್ ನೀಡಿದ ಪೊಲೀಸರು..!
2020ನೇ ವರ್ಷವು ಸಾಕಷ್ಟು ಏರಿಳಿತಗಳೊಂದಿಗೆ ಆರಂಭವಾಗಿದೆ. ಈ ವರ್ಷ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದೆ. ಲಾಕ್‌ಡೌನ್ ಕಾರಣಕ್ಕೆ ಮದುವೆ, ನಾಮಕರಣ, ಉಳಿದ ಸಭೆ ಸಮಾರಂಭಗಳನ್ನು ಮುಂದೂಡಲಾಗಿದೆ. ಕೆಲವರು ಸಂಬಂಧಪಟ್ಟವರಿಂದ ಅನುಮತಿ ಪಡೆದು ಮದುವೆಯಾಗುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಅನೇಕ ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ಮನೆಮಂದಿಯೊಂದಿಗೆ ಸರಳವಾಗಿ ಆಚರಿಸುವಂತಾಗಿದೆ. ಲಾಕ್‌ಡೌನ್ ಸಮಯದಲ್ಲಿ ಮಕ್ಕಳ ಹುಟ್ಟುಹಬ್ಬವನ್ನು ಪೊಲೀಸರೇ ಆಚರಿಸುತ್ತಿರುವ ಬಗ್ಗೆ ವರದಿಗಳಾಗಿವೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಪೊಲೀಸರು ಮಗುವಿನ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದರು.

ಇದೇ ರೀತಿಯ ಮತ್ತೊಂದು ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿದೆ. ಮಗುವಿನ ಹುಟ್ಟುಹಬ್ಬದ ಸುದ್ದಿಯನ್ನು ತಿಳಿದ ಛಾಪ್ರಾ ಜಿಲ್ಲಾ ಪೊಲೀಸರು 5 ವರ್ಷದ ಬಾಲಕಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಆಚರಣೆಯ ವೀಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ನ್ಯೂಸ್ ಟೈಮ್ಸ್ 24 ವರದಿಗಳ ಪ್ರಕಾರ, ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆರವರಿಗೆ ಮಗುವಿನ ಅಜ್ಜ ಮೆಸೇಜ್ ಕಳುಹಿಸಿ ಲಾಕ್‌ಡೌನ್ ಕಾರಣಕ್ಕೆ ತಮ್ಮ ಮೊಮ್ಮಗಳ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ. ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಮಗುವಿನ ಹುಟ್ಟುಹಬ್ಬವನ್ನು ಪೊಲೀಸ್ ಇಲಾಖೆಯ ವತಿಯಿಂದ ಆಚರಿಸಲು ನಿರ್ಧರಿಸಿದ ಡಿಜಿಪಿರವರು ಛಾಪ್ರಾ ಪೊಲೀಸರನ್ನು ಸಂಪರ್ಕಿಸಿ ಆ ಮಗುವಿನ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬದ ಗಿಫ್ಟ್ ನೀಡುವಂತೆ ಸೂಚಿಸಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ತಮ್ಮ ಮೇಲಾಧಿಕಾರಿಗಳಿಂದ ಸೂಚನೆ ಪಡೆದ ಛಾಪ್ರಾ ಪೊಲೀಸರು ತಮ್ಮ ಗಸ್ತು ಜೀಪ್ ಹಾಗೂ ಬೈಕುಗಳನ್ನು ಬಲೂನು ಹಾಗೂ ಹೂವುಗಳಿಂದ ಅಲಂಕರಿಸಿಕೊಂಡು ಮಗುವಿನ ಮನೆಗೆ ಹೊರಟಿದ್ದಾರೆ. ಪೊಲೀಸರು ಆ ಮಗುವಿನ ಮನೆಗೆ ಭೇಟಿ ನೀಡಿದಾಗ ಇಡೀ ಕುಟುಂಬಕ್ಕೆ ಆಶ್ಚರ್ಯವಾಗಿದೆ.

ಈ ಲಾಕ್‌ಡೌನ್ ಸಮಯದಲ್ಲಿ ಮಗುವಿನ ಹುಟ್ಟುಹಬ್ಬವನ್ನು ಆಚರಿಸಲು ಪೊಲೀಸರು ಮನೆಗೆ ಬರುತ್ತಾರೆ ಎಂಬುದನ್ನು ಅವರು ನಿರೀಕ್ಷಿಸಿರಲಿಲ್ಲ. ಇದರ ಜೊತೆಗೆ ಡಿಜಿಪಿರವರು ಸಹ ಕರೆ ಮಾಡಿ ಆ ಮಗುವಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಬರ್ತ್‌ಡೇ ಕೇಕ್ ಜೊತೆಗೆ ಪೊಲೀಸರು ಅನೇಕ ಉಡುಗೊರೆಗಳನ್ನು ನೀಡಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಸೋಂಕು ಭಾರತದ ಬಹುತೇಕ ಎಲ್ಲ ರಾಜ್ಯಗಳಿಗೂ ಹರಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿತ್ತು.

ಈಗ ಈ ಅವಧಿಯನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ 49,000ದ ಗಡಿ ದಾಟಿದ್ದರೆ, 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 13,161 ಜನರು ಚೇತರಿಸಿಕೊಂಡಿದ್ದಾರೆ.


Click it and Unblock the Notifications