ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಬೇರೊಂದು ವಾಹನ, ಬೇರೊಬ್ಬ ವ್ಯಕ್ತಿ ಅಥವಾ ಯಾವುದಾದರೂ ಪ್ರಾಣಿಗಳು ಹಠಾತ್ತನೇ ಅಡ್ಡ ಬಂದಾಗ ಅಪಘಾತಗಳು ಸಂಭವಿಸುತ್ತವೆ ಎಂಬುದು ಈ ಹಿಂದೆ ನಡೆದಿರುವ ಅಪಘಾತಗಳಿಂದ ಸಾಬೀತಾಗಿವೆ.

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಕೆಲವೊಮ್ಮೆ ಚಾಲಕನು ಕುಡಿದು ವಾಹನ ಚಾಲನೆ ಮಾಡುವಾಗ ರಸ್ತೆಯ ಮೇಲೆ ಮಾತ್ರ ಗಮನಹರಿಸಿದ್ದರೆ ಅಪಘಾತಗಳು ಸಂಭವಿಸುವುದಿಲ್ಲ. ಆದರೆ ಯಾರಾದರೂಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ಯಾವುದೇ ವಾಹನ ಚಾಲಕನಾಗಿರಲಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ.

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಒಮ್ಮೊಮ್ಮೆ ದ್ವಿಚಕ್ರ ಹಾಗೂ ಸಣ್ಣ ವಾಹನಗಳನ್ನು ಕಂಟ್ರೋಲ್ ಮಾಡಬಹುದು. ಆದರೆ ವೇಗವಾಗಿ ಸಾಗುತ್ತಿರುವ ಲಾರಿ, ಬಸ್ ಹಾಗೂ ಟ್ರಕ್'ನಂತಹ ವಾಹನಗಳನ್ನು ಒಮ್ಮೆಲೆ ಕಂಟ್ರೋಲ್ ಮಾಡುವುದಕ್ಕೆ ಅವುಗಳನ್ನು ಚಾಲನೆ ಮಾಡುವವರಿಗೆ ಕಷ್ಟವಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಕಳೆದ ಸೋಮವಾರ ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಈ ಅಪಘಾತಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಎರಡು ಕೋನಗಳಿಂದ ಅಪಘಾತವನ್ನು ತೋರಿಸುತ್ತದೆ.

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಈ ವೀಡಿಯೊವನ್ನು ನೋಡಿದಾಗ ಅಪಘಾತಕ್ಕೆ ಬೈಕ್ ಸವಾರ ಹಾಗೂ ಲಾರಿ ಡ್ರೈವರ್ ಇಬ್ಬರ ತಪ್ಪು ಕಂಡು ಬರುತ್ತದೆ. ಜನರು ಹೆಚ್ಚಾಗಿ ಸಂಚರಿಸುವ ಪ್ರದೇಶದಲ್ಲಿ ವೇಗವಾಗಿ ಬಂದಿದ್ದು ಲಾರಿ ಚಾಲಕನ ತಪ್ಪು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಆತ ಸರಿಯಾದ ಮಾರ್ಗದಲ್ಲಿಯೇ ಬಂದಿದ್ದಾನೆ. ಆದರೆ ಬೈಕ್ ಸವಾರನಿಗೆ ಗುದಿಯುವುದನ್ನು ತಪ್ಪಿಸಲು ಲಾರಿಯನ್ನು ಬಲಕ್ಕೆ ತಿರುಗಿಸಿದ್ದಾನೆ. ಹೀಗಾಗಿ ಈ ಅಪಘಾತಕ್ಕೆ ಬೈಕ್ ಸವಾರನೇ ಸಂಪೂರ್ಣ ಕಾರಣನೆಂದು ಹೇಳಬಹುದು.

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ರಸ್ತೆಯನ್ನು ದಾಟಲು ಪ್ರಯತ್ನಿಸಿದ ಬೈಕ್ ಸವಾರ ತನ್ನ ಬಲಭಾಗದಲ್ಲಿ ಲಾರಿ ಬರುವುದನ್ನು ಗಮನಿಸಿಲ್ಲ. ಬೈಕ್ ಸವಾರ ರಸ್ತೆಯ ಮೇಲೆ ಗಮನ ಹರಿಸದಿರುವುದೇ ಈ ಅಪಘಾತಕ್ಕೆ ಕಾರಣ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಟ್ರಕ್ ಅನ್ನು ಎದುರು ರಸ್ತೆಗೆ ತಿರುಗಿದ ಲಾರಿಗೆ ಎದುರುಗಡೆಯಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಎದುರುಗಡೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಲಾರಿ, ಪಲ್ಟಿ ಹೊಡೆಯುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಬೈಕ್ ಸವಾರ ವೇಗವಾಗಿ ಸಾಗಿದ್ದರೆ ಅಥವಾ ಹಿಂದೆ ಸರಿದಿದ್ದರೆ ಈ ಭೀಕರ ಅಪಘಾತ ಸಂಭವಿಸುತ್ತಿರಲಿಲ್ಲ. ಮುಂಜಾನೆ ವೇಳೆ ಈ ಅಪಘಾತ ಸಂಭವಿಸಿದ ಕಾರಣಕ್ಕೆ ಎರಡು ಲಾರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಎರಡೂ ಲಾರಿಗಳ ಚಾಲಕರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಭೀಕರ ಅಪಘಾತಕ್ಕೆ ಕಾರಣನಾದ ಬೈಕ್ ಸವಾರನನ್ನು ಬಂಧಿಸಿ, ಆತನ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಭೀಕರ ರಸ್ತೆ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ

ಸ್ಥಳದಲ್ಲಿ ಸಿಸಿಟಿವಿ ಇಲ್ಲದಿದ್ದರೆ ಈ ಅಪಘಾತದ ಹೊಣೆ ಟ್ರಕ್ ಚಾಲಕನ ಮೇಲೆ ಬೀಳುತ್ತಿತ್ತು. ಬೈಕ್ ಸವಾರ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಸಿಸಿಟಿವಿಯಿಂದಾಗಿ ಬೈಕ್ ಸವಾರನ ಅಚಾತುರ್ಯ ಬೆಳಕಿಗೆ ಬಂದಿದೆ.

Most Read Articles

Kannada
English summary
Bike rider responsible for massive accident in Hyderabad. Read in Kannada.
Story first published: Wednesday, March 31, 2021, 20:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X