ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಸದಾ ಹೊಸ ಹೊಸ ವಿಧಾನಗಳನ್ನು ಹುಡುಕುತ್ತಾರೆ. ಕುಡಿದು ಏಕೆ ವಾಹನ ಚಾಲನೆ ಮಾಡಬಾರದು ಎಂಬುದನ್ನು ವಿವರಿಸಲು ಪೊಲೀಸರು ಈಗ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಈ ವೀಡಿಯೊವನ್ನು ಸೈಬರಾಬಾದ್ ಟ್ರಾಫಿಕ್ ಪೊಲೀಸರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊದಲ್ಲಿ ದ್ವಿಚಕ್ರ ವಾಹನ ಸವಾರನು ಕುಡಿದು ವಾಹನ ಚಾಲನೆ ಮಾಡುತ್ತಿರುವುದನ್ನು ಕಾಣಬಹುದು.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಇದು ಬೈಕ್ ಸವಾರನ ಮೊದಲ ತಪ್ಪು. ಜೊತೆಗೆ ಆತ ಹೆಲ್ಮೆಟ್ ಧರಿಸಿರಲಿಲ್ಲ. ಆತ ಹೆಲ್ಮೆಟ್ ಅನ್ನು ರೇರ್ ವೀವ್ ಮಿರರ್ ಮೇಲೆ ಇಟ್ಟಿದ್ದ. ಬೈಕ್ ಚಾಲನೆ ವೇಳೆ ಆತ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾನೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಅದೇ ಮಾರ್ಗದಲ್ಲಿ ಸಾಗುತ್ತಿದ್ದ ದಂಪತಿ ತಮ್ಮ ಬೈಕ್ ಅನ್ನು ಪಾರ್ಕ್ ಮಾಡಿ, ಆತನಿಗೆ ನೆರವಾಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಮೇಲಕ್ಕೆಳುವ ವ್ಯಕ್ತಿ ಮತ್ತೆ ಬೈಕ್ ಚಾಲನೆ ಮಾಡಿ ಮುಂದಕ್ಕೆ ಸಾಗುತ್ತಾನೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಆದರೆ ಈ ಬಾರಿಯೂ ಆತ ಹೆಲ್ಮೆಟ್ ಧರಿಸಿರಲಿಲ್ಲ. ಹೆಲ್ಮೆಟ್ ಮೊದಲಿನಂತೆ ರೇರ್ ವೀವ್ ಮಿರರ್'ನಲ್ಲಿತ್ತು. ಬೈಕ್ ಸವಾರ ಕುಡಿದ ಮತ್ತಿನಲ್ಲಿ ಬೈಕ್ ಚಾಲನೆ ಮಾಡಿದ ಕಾರಣ ಆತನ ಹಿಂದೆ ಬರುತ್ತಿದ್ದ ವಾಹನ ಸವಾರರ ಸಂಚಾರಕ್ಕೆ ತೊಂದರೆ ಉಂಟಾಯಿತು.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಬೈಕ್ ಸವಾರ ಬೇಕಾ ಬಿಟ್ಟಿ ಬೈಕ್ ಚಾಲನೆ ಮಾಡುತ್ತ ಪಥಗಳನ್ನು ಬದಲಾಯಿಸಿದ್ದರಿಂದ ಇತರ ವಾಹನ ಚಾಲಕರು ಆತನನ್ನು ಹಿಂದಿಕ್ಕಲು ಪರದಾಡುವಂತಾಯಿತು. ಆತ ಮುಂದೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಈ ವೀಡಿಯೊವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಕುಡಿದ ನಂತರ ವಾಹನ ಚಾಲನೆ ಮಾಡದೇ ಇರುವಂತೆ ತಿಳಿಸಲು ಪೊಲೀಸರು ಈ ವೀಡಿಯೊವನ್ನು ಅಪ್ ಲೋಡ್ ಮಾಡಿದ್ದಾರೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಈ ವೀಡಿಯೊ ನೋಡಲು ತಮಾಷೆಯಾಗಿ ಕಂಡರೂ ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡುವುದರಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡುವುದು ಸುಳ್ಳಲ್ಲ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಭಾರತದಲ್ಲಿ ಪ್ರತಿ ವರ್ಷ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ರಸ್ತೆ ಅಪಘಾತಗಳಿಗೆ ಕುಡಿದು ವಾಹನ ಚಾಲನೆ ಮಾಡುವುದು ಸಹ ಒಂದು ಕಾರಣವಾಗಿದೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ವಾಹನ ಸವಾರರು ಕುಡಿದು ವಾಹನ ಚಾಲನೆ ಮಾಡುವುದರಿಂದ ಯಾವುದೇ ತಪ್ಪನ್ನು ಮಾಡದ ಇತರ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ವಾಹನ ಸವಾರರು ಯಾವುದೇ ಕಾರಣಕ್ಕೂ ಕುಡಿದು ವಾಹನ ಚಾಲನೆ ಮಾಡದಿರಿ. ಬೈಕ್ ಸವಾರ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಗಮನಿಸಬಹುದು.

ಈ ಬೈಕ್ ಸವಾರನಂತೆ ಹಲವು ದ್ವಿಚಕ್ರ ವಾಹನ ಸವಾರರು ತಮ್ಮ ಹೆಲ್ಮೆಟ್‌ಗಳನ್ನು ಪೆಟ್ರೋಲ್ ಟ್ಯಾಂಕ್‌ ಮೇಲೆ ಅಥವಾ ರೇರ್ ವೀವ್ ಮಿರರ್ ಮೇಲೆ ಇಟ್ಟು ಪ್ರಯಾಣಿಸುತ್ತಾರೆ. ಹೆಲ್ಮೆಟ್ ಧರಿಸದಿದ್ದರೆ ರಸ್ತೆ ಅಪಘಾತವಾದಾಗ ತಲೆಗೆ ಗಂಭೀರವಾದ ಪ್ರಮಾಣದ ಗಾಯಗಳಾಗುತ್ತವೆ.

ಕುಡಿದು ವಾಹನ ಚಾಲನೆ ಮಾಡಿ ಅವಾಂತರ ಸೃಷ್ಟಿಸಿದ ಬೈಕ್ ಸವಾರ

ಕೆಲವೊಮ್ಮೆ ಪ್ರಾಣಕ್ಕೂ ಸಂಚಕಾರ ಬರುತ್ತದೆ. ಈ ಕಾರಣಕ್ಕೆ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ವಾಹನ ಚಾಲನೆ ವೇಳೆ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಒಳ್ಳೆಯದು.

Most Read Articles

Kannada
English summary
Bike rider's drink and drive video goes viral. Read in Kannada.
Story first published: Monday, July 19, 2021, 14:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X