ಬೈಕ್‌ಟ್ಯಾಕ್ಸಿಗಳನ್ನು ಕಾನೂನುಬದ್ದ ಮಾಡಲಿದೆ ಈ ರಾಜ್ಯ ಸರ್ಕಾರಗಳು: ಆಟೋ ಚಾಲಕರ ಪಾಡೇನು?

ಬೈಕ್‌ ಟ್ಯಾಕ್ಸಿ ಇರಬೇಕೋ ಬೇಡವೋ, ಅಥವಾ ಬೈಕ್ ಟ್ಯಾಕ್ಸಿಗಳನ್ನು (Bike Taxis) ಕಾನೂನುಬದ್ದ ಮಾಡಬೇಕೋ ಬೇಡವೋ ಎಂಬುದು ಬಹಳಷ್ಟು ಸಮಯಗಳಿಂದ ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದ್ದು, ಈ ಕುರಿತಾಗಿ ಹಲವರು ಹಲವಾರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತಾಗಿ ನಮ್ಮಲ್ಲಿ ಉತ್ತರ ಸಿಗದೇ ಇರಬಹುದು, ಆದರೆ ಬೇರೆಡೆ ಇದಕ್ಕೆ ಉತ್ತರ ಸಿಕ್ಕಿದೆ.

ಹೌದು, ನಮ್ಮ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಆಟೋ ಚಾಲಕರು ಮತ್ತು ರಾಪಿಡೋ ರೈಡರ್‌ಗಳ ಮಧ್ಯೆ ಆಗಾಗ ಘಟರ್ಷಣೆಗಳು ಆಗುವುದನ್ನು ನಾವು ನೋಡುತ್ತಿದ್ದೇವೆ. ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಈ ನಿರ್ದಿಷ್ಟ ವಿಷಯದ ಕುರಿತಾಗಿ ಸಾಕಷ್ಟು ಜನ, ಪರ ಮತ್ತು ವಿರೋಧ ಚರ್ಚೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ರಾಪಿಡೋ ರೀತಿಯ ಬೈಕ್‌ ಟ್ಯಾಕ್ಸಿಗಳು ಬಂದರೆ ಆಟೋ ಚಾಲಕರ ಮೇಲೆ ಪೆಟ್ಟು ಬೀಳುತ್ತದೆ ಎಂಬುದು ಇವರ ಅಭಿಪ್ರಾಯ.

Bike Taxis Will Became Legal In Delhi And Maharastra Very Soon

ಈ ಎಲ್ಲಾ ಬಿಸಿ ಬಿಸಿ ಚರ್ಚೆಗಳ ನಡುವೆಯೇ ಎರಡು ರಾಜ್ಯಗಳು ಬೈಕ್ ಟ್ಯಾಕ್ಸಿಯನ್ನು ಕಾನೂನು ಬದ್ದಗೊಳಿಸುವ ಯೋಜನೆಯನ್ನು ರೂಪಿಸುತ್ತಿದ್ದು, ಬೈಕ್‌ ಟ್ಯಾಕ್ಸಿ ಸವಾರರ ಮುಖದಲ್ಲಿ ನಗುವನ್ನು ಮೂಡಿಸುವಲ್ಲಿ ಸಫಲವಾಗಿದೆ. ಈಗಾಗಲೇ ಗೋವಾ, ತೆಲಂಗಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಬೈಕ್‌ ಟ್ಯಾಕ್ಸಿಗಳು ಕಾನೂನು ಬದ್ದವಾಗಿದ್ದು ಈ ಸಾಲಿಗೆ ಇದೀಗ ಈ ಎರಡೂ ರಾಜ್ಯಗಳು ಸೇರಲಿದೆ ಎಂದಬ ಮಾತುಗಳು ಕೇಳಿ ಬರುತ್ತಿದೆ.

ಮಾಹಿತಿಗಳ ಪ್ರಕಾರ ದೆಹಲಿ ಮತ್ತು ಮಹಾರಾಷ್ಟ್ರಗಳಲ್ಲಿ ಬೈಕ್‌ ಟ್ಯಾಕ್ಸಿ ಕಾನೂನು ಬದ್ದವಾಗಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಅಲ್ಲಿನ ಆಟೋ ಚಾಲಕರಿಗೆ ಶಾಕ್ ನೀಡಿರುವ ಸರ್ಕಾರಗಳು, ಇನ್ನು ಮುಂದೆ ಆಟೋ ಚಾಲಕರ ಪಾಡೇನು ಎಂಬ ಪ್ರಶ್ನೆಗಳು ಸರ್ಕಾರಗಳಿಗೆ ಎದುರಾಗುತ್ತಿದ್ದು, ಈ ಕುರಿತಾಗಿ ಉತ್ತರಿಸಲು ಆ ರಾಜ್ಯ ಸರ್ಕಾರಗಳು ಮನಸು ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ.

Bike Taxis Will Became Legal In Delhi And Maharastra Very Soon

ಯಾಕೆ ಬೈಕ್‌ ಟ್ಯಾಕ್ಸಿ ಹೆಚ್ಚು ಉಪಯುಕ್ತಕರ ಎಂಬ ಪ್ರಶ್ನೆಗೆ ಸರ್ಕಾರಗಳು ನೀಡಿರುವ ಕಾರಣಗಳಲ್ಲಿ ಪ್ರಮುಖವಾದವು ಒಂದು, ಬೈಕ್‌ ಟ್ಯಾಕ್ಸಿಗಳು ಕಾರು ಅಥವಾ ಆಟೋ ಟ್ಯಾಕ್ಸಿಗಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆ ಬೆಲೆಗೆ ಸಿಗುತ್ತದೆ. ಸದ್ಯಕ್ಕೆ ರಾಪಿಡೋ ಮತ್ತು ಊಬರ್‌ ಮೊಟೋ ಬೈಕ್‌ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿದ್ದು, ಈ ಸಾಲಿಗೆ ಮತ್ತಷ್ಟು ಕಂಪನಿಗಳು ಮುಖ ಮಾಡಲಿದೆ ಎಂಬುದು ಹಲವರ ಅಭಿಪ್ರಾಯ.

ಕಳೆದ 10 ವರ್ಷಗಳಲ್ಲಿ ಕ್ಯಾಬ್ ಉದ್ಯಮದಲ್ಲಿ ಭಾರತವು ದೊಡ್ಡ ಕ್ರಾಂತಿಯನ್ನು ಕಂಡಿದೆ. ಇದು ಅನೌಪಚಾರಿಕ ವಲಯವಾಗಿದ್ದಾಗ, ಓಲಾ ಮತ್ತು ಉಬರ್‌ನಂತಹ ಕಾರ್ಪೊರೇಟ್ ಸಂಸ್ಥೆ‌ಗಳು ತಂತ್ರಜ್ಞಾನದೊಂದಿಗೆ ಈ ಕ್ಷೇತ್ರವನ್ನು ಬೆಳೆಯುವಂತೆ ಮಾಡಿದ್ದರು. ಗ್ರಾಹಕರು ಮತ್ತು ಕ್ಯಾಬ್ ಮಾಲೀಕರ ನಡುವೆ ಸೇತುವೆಯನ್ನು ನಿರ್ಮಿಸಿದರು. ಈ ಮೂಲಕ ಜನರು ಸುಲಭವಾಗಿ ಕ್ಯಾಬ್‌ಗಳನ್ನು ಬುಕ್ ಮಾಡಲು ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ.

Bike Taxis Will Became Legal In Delhi And Maharastra Very Soon

ಈ ಹಿಂದೆಯೂ ಮಹಾರಾಷ್ಟ್ರ ರಾಜ್ಯ ಸರ್ಕಾರ Rapido ಗೆ ಪರವಾನಗಿ ನೀಡಲು ನಿರ್ಧರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಮೋಟಾರು ವಾಹನ ಕಾಯ್ದೆಯಲ್ಲಿ ಇಲ್ಲದ ಕೆಲಸವನ್ನು ಮಾಡದಂತೆ ರಾಜ್ಯ ಸರ್ಕಾರಗಳಿಗೆ ತಡೆ ನೀಡಿದೆ. ಇದೀಗ ದೆಹಲಿ ಸರ್ಕಾರವೂ ಬಹುತೇಕ ಅದೇ ಪ್ರಯತ್ನಕ್ಕೆ ಕೈ ಹಾಕಿದೆ. Rapido ಸೇವೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 28, 2024, 13:22 [IST]
English summary
Bike taxis will became legal in delhi and maharastra very soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+