ಪೊಲೀಸರಿಂದ ತಪ್ಪಿಸಲು ಡಿವೈಡರ್‌ ಮೇಲೆ ಬೈಕ್‌ ಹಾರಿಸಿದ ಬೈಕರ್‌: ಪೊಲೀಸ್‌ ಮಾಡಿದ್ದಲ್ಲಿ ತಪ್ಪಿಲ್ಲ ಬಿಡಿ

ಕೆಲವೇ ಕೆಲವು ಬೈಕರ್‌ಗಳು ಮಾಡುವ ತಪ್ಪಿನಿಂದ ಎಲ್ಲಾ ಬೈಕರ್‌ಗಳನ್ನು ಸಹ ತಪ್ಪಿತಸ್ಥರಂತೆ ಕಾಣುವ ಸನ್ನಿವೇಶಗಳು ಆಗಾಗ ನಮ್ಮ ಕಣ್ಣ ಮುಂದೆ ನಡೆಯುತ್ತಿರುತ್ತವೆ. ಇತ್ತೀಚಿನ ಕೆಲವು ಯುವಕರಂತೂ ಎಗ್ಗಿಲ್ಲದೇ ಬೈಕ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಓಡಿಸಿ ತಮ್ಮ ಪ್ರಾಣದ ಜೊತೆ ಸಾರ್ವಜನಿಕರ ಪ್ರಾಣವನ್ನೂ ಅಪಾಯಕ್ಕೆ ದೂಡುತ್ತಾರೆ.

ಇಂತಹ ಯುವಕರನ್ನು ಆಗಾಗ ಪೊಲೀಸರು ಬಂಧಿಸಿ ಅವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಂಡಿರುವ ಹಲವಾರು ನಿದರ್ಶನಗಳನ್ನು ನಾವು ಈಗಾಗಲೇ ಕಂಡಿದ್ದೇವೆ. ಇಲ್ಲೊಂದು ಕಡೆ ಮಿತಿ ಮೀರಿದ ವೇಗದಲ್ಲಿ ಬರುತ್ತಿದ್ದ ಬೈಕ್‌ ಸವಾರನನ್ನು (Biker) ಅಡ್ಡ ಹಾಕಿ ಪರೀಕ್ಷಿಸಲು ಯತ್ನಿಸಿದ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಬೈಕ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

Biker Tries To escape

ಹೌದು, ಘಟನೆಯು ಕೇರಳದ ಕೊಚ್ಚಿಯ ಕಲೂರ್ ಸ್ಟೇಡಿಯಂ ಬಳಿ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಘಟನೆಗೆ ಸಂಭಧಿಸಿದಂತೆ ಯುವಕನನ್ನು ಬಂಧಿಸಿ ಬೈಕ್‌ ಅನ್ನು ಸೀಝ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕೋಟ್ಟಾಯಂ ನಿವಾಸಿಯಾಗಿರುವ ಬೈಕ್ ಸವಾರ ಅಜ್ಮಲ್‌ ಎಂಬಾತ ಈ ಕೃತ್ಯವನ್ನು ಎಸಗಿದ್ದಾನೆ.

ಕೊಚ್ಚಿ ಕಲೂರ್ ಸ್ಟೇಡಿಯಂ ಬಳಿ ಪೊಲೀಸರು ಸಾರ್ವಜನಿಕ ವಾಹನ ತಪಾಸಣೆಗೆ ತೊಡಗಿದ್ದರು. ಈ ವೇಳೆ ಪಾಲಾರಿವಟ್ಟಂ ಕಡೆಯಿಂದ ಜೋರಾಗಿ ಬಂದ ಬೈಕನ್ನು ಅಡ್ಡ ಹಾಕಲು ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ ಈ ಸಂಧರ್ಭದಲ್ಲಿ ಬೈಕ್‌ ಸವಾರ ಬೈಕನ್ನು ರಸ್ತೆ ಬದಿ ನಿಲ್ಲಿಸುವ ಬದಲು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

Biker Tries To escape

ಆದರೆ ಅದು ಸಾಧ್ಯವಾಗದೇ ಇದ್ದಾಗ ಯುವಕ ರಾಂಗ್ ಸೈಡ್‌ಗೆ ಹೋಗಲು ಡಿವೈಡರ್‌ನಲ್ಲಿ ಬೈಕ್‌ ಹಾರಿಸಿ ಆಚೆ ಬದಿಯ ರಸ್ತೆಗೆ ಇಳಿದಿದ್ದಾನೆ. ರಾಂಗ್‌ ಸೈಡ್‌ ನಲ್ಲಿ ಗಾಡಿ ಓಡಿಸುವುದು ಅಪಾಯಕಾರಿ ಎಂದು ತಿಳಿದಿದ್ದರೂ ಅದನ್ನು ಲೆಕ್ಕಿಸದೆ, ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ವೇಗವಾಗಿ ರಾಂಗ್‌ ಸೈಡ್‌ನ ರಸ್ತೆಯಲ್ಲಿ ತನ್ನ ಬೈಕನ್ನು ಮುನ್ನುಗ್ಗಿಸಿದ್ದಾನೆ.

ಪೊಲೀಸರ ಕೈಯಿಂದ ತಪ್ಪಿಸಿಕೊಂಡೆ ಎಂದು ಪರಾರಿಯಾದ ಯುವಕ ಮುಂದಿನ ಜಂಕ್ಷನ್‌ನಲ್ಲಿ ಪೊಲೀಸರ ಕೈಯಲ್ಲಿ ಬಂಧಿಯಾಗಿದ್ದಾನೆ, ಬಂಧಿಯಾದ ಆರೋಪಿ ಅಜ್ಮಲ್‌ ಅನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಪೊಲೀಸರ ಮೇಲಿರುವ ಭಯದಿಂದ ತಾನು ಆ ರೀತಿಯಾಗಿ ವರ್ತಿಸಿದ್ದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿದ ಕೇರಳ ಪೊಲೀಸ್‌, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಯುವಕನನ್ನು ಬಂಧಿಸಿದ್ದೇವೆ. ಆತನ ಹೇಳಿಕೆಯನ್ನು ನಾವು ಪರಿಗಣಿಸುತ್ತಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್‌ ಓಡಿಸಿರುವುದರಿಂದ ಆತನ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ರದ್ದು ಮಾಡಲು ಮನವಿ ಮಾಡುವುದಾಗಿ ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 27, 2023, 10:57 [IST]
English summary
Biker tries to escape from the police in public
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+