ದುಬಾರಿ ಬೆಲೆಯ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

ಲಾಕ್‌ಡೌನ್ ಮುಗಿದ ನಂತರ, ಜನರು ಮನೆಗಳಿಂದ ಹೊರಬರಲು ಆರಂಭಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಿದ್ದ ಸುಮಾರು 100 ಬೈಕ್‌ ಸವಾರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಈಗ ಗುರುಗ್ರಾಮ ಪೊಲೀಸರು ಸ್ಟಂಟ್ ಮಾಡಿದ 19 ಬೈಕ್ ಸವಾರರಿಗೆ ದಂಡ ವಿಧಿಸಿ, ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ದುಬಾರಿ ಬೆಲೆಯ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

ಗುರುಗ್ರಾಮದ ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್ ತೆಗೆದುಹಾಕಲಾಗಿದೆ. ಈ ಕಾರಣಕ್ಕೆ ಬೈಕ್ ಸವಾರರು ಬೈಕ್‌ಗಳಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಲಾಕ್‌ಡೌನ್ ತೆರೆವುಗೊಂಡ ನಂತರ ಈ ಬೈಕ್ ಸವಾರರ ಗುಂಪು ಹೊರಬಂದು ಸ್ಟಂಟ್‌ನಲ್ಲಿ ತೊಡಗಿದೆ. ಸಾರ್ವಜನಿಕ ಸ್ಥಳದಲ್ಲಿ ಅನುಚಿತ ಪುಂಡಾಟ ಮೆರೆದ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆ.

ದುಬಾರಿ ಬೆಲೆಯ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

ಗುರುಗ್ರಾಮದ ಡಿಸಿಪಿರವರು ಈ ರಸ್ತೆಯಲ್ಲಿ ಹಾದುಹೋಗುವಾಗ ಬೈಕ್ ಸವಾರರು ಸ್ಟಂಟ್ ಮಾಡುತ್ತಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣವೇ ಡಿಸಿಪಿರವರು ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಡಿಸಿಪಿರವರೇ ಮುಂದಾಳಾತ್ವ ವಹಿಸಿ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ದುಬಾರಿ ಬೆಲೆಯ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

ಬಹುತೇಕ ಬೈಕ್‌ಗಳು ದುಬಾರಿ ಬೆಲೆಯ ಬೈಕ್‌ಗಳಾಗಿವೆ. ಹೆಚ್ಚಿನ ಬೈಕ್‌ಗಳು ಸುಜುಕಿ ಹಯಾಬುಸಾ ಬೈಕ್‌ಗಳಾಗಿವೆ. ಮೋಟಾರು ವಾಹನ ಕಾಯ್ದೆ 2019ರ ಪ್ರಕಾರ ಪೊಲೀಸರು ಸ್ಟಂಟ್ ಮಾಡುತ್ತಿದ್ದ ಪ್ರತಿ ಬೈಕ್ ಸವಾರನಿಂದ ರೂ.17,000 ದಂಡ ವಸೂಲಿ ಮಾಡಿದ್ದಾರೆ. ನ್ಯಾಯಾಲಯದ ವಿಚಾರಣೆ ಪೂರ್ಣಗೊಳ್ಳುವವರೆಗೆ ಎಲ್ಲಾ 19 ಬೈಕ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ವಶಪಡಿಸಿಕೊಂಡ ಬೈಕ್‌ಗಳನ್ನು ಗುರುಗ್ರಾಮದ ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿಡಲಾಗಿದೆ. ಕೆಲ ದಿನಗಳಿಂದ ಸಂಚಾರ ಉಲ್ಲಂಘನೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ರಸ್ತೆಗಳು ಖಾಲಿಯಿದ್ದ ಕಾರಣದಿಂದ ಕೆಲವು ಬೈಕ್‌ ಸವಾರರು ಸ್ಟಂಟ್ ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಜನರು ಭಯಭೀತರಾಗಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ದುಬಾರಿ ಬೆಲೆಯ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

ಈ ಎಲ್ಲಾ ಬೈಕ್‌ಗಳನ್ನು ಗಾಲ್ಫ್ ಕೋರ್ಸ್ ರಸ್ತೆಯಿಂದ ವಶಪಡಿಸಿಕೊಳ್ಳಲಾಗಿದೆ. ಪ್ರತಿಯೊಂದು ಬೈಕ್ ರೂ.6 ಲಕ್ಷದಿಂದ ರೂ.15 ಲಕ್ಷದವರೆಗೆ ಬೆಲೆಯನ್ನು ಹೊಂದಿವೆ. ಬೈಕ್ ಸವಾರರು ಗಾಲ್ಫ್ ಕೋರ್ಸ್ ರಸ್ತೆಯ ಸುತ್ತ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಿದ್ದಾರೆ.

Article Published On: Wednesday, June 10, 2020, 17:46 [IST]
English summary
Bikers fined for performing stunts, 19 bikes seized by Gurugram police. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+