ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಡ್ರೈವರ್ ಆದ 66 ಸಾವಿರ ಕೋಟಿಯ ಒಡೆಯ: ಇದು, ರಿಯಲ್ ಪವರ್!
ಭಾರತೀಯ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇತ್ತೀಚೆಗಷ್ಟೇ ಯುಎಇ ದೇಶದ ಗೋಲ್ಡನ್ ವಿಸಾ ವನ್ನು ಪಡೆದುಕೊಂಡಿದ್ದರು. ಸದ್ಯಕ್ಕೆ ರಜನಿಕಾಂತ್ ಅವರು ಪ್ರವಾಸದಲ್ಲಿದ್ದು ಅಬುಧಾಬಿಯಲ್ಲಿರುವ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ಅವರು ಭಾರತೀಯ ಮೂಲದ ಬಿಲಿಯೇನರ್ ಮನೆಗೂ ಭೇಟಿ ನೀಡಿರುವುದು ಭಾರೀ ಸುದ್ದಿಯಾಗುತ್ತಿದೆ.
ನಿಮಗೆಲ್ಲಾ ತಿಳಿದಿರುವಂತೆ ಲುಲು ಗ್ರೂಪ್‌ನ ಮಾಲೀಕರಾಗಿರುವ ಎಂ.ಎ ಯೂಸೂಫ್ ಆಲಿಯವರು ಅರಬ್ ರಾಷ್ಟ್ರದಲ್ಲಿ ತಮ್ಮ ಸಾಮ್ರಾಜ್ಯವನ್ನೇ ಸ್ಥಾಪಿಸಿದ್ದಾರೆ. ಭಾರತದ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ಹೊಂದಿರುವ ಯೂಸೂಫ್ ಆಲಿ ಅವರ ಮನೆಗೆ ರಜನಿಕಾಂತ್ ಇತ್ತೀಚೆಗಷ್ಟೇ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದ್ದರು.

ಈ ಸಂಧರ್ಭದಲ್ಲಿ ಲುಲು ಮಾಲೀಕ ಬಿಲಿಯೇನರ್ ಎಂ ಎ ಯೂಸೂಫ್ ಆಲಿ ಅವರು ರಜನಿಕಾಂತ್ ಅವರನ್ನು ತಮ್ಮ ಐಷಾರಾಮಿ ಕಾರಾದ ರೋಲ್ಸ್ ರಾಯ್ಸ್ ಕಲಿನನ್‌ನಲ್ಲಿ ಒಂದು ರೌಂಡ್ ಕರೆದುಕೊಂಡು ಹೋಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂತೋಷದಿಂದ ಸಮ್ಮತವನ್ನು ಸೂಚಿಸಿದ ರಜನಿಕಾಂತ್ ಅವರು ಯೂಸೂಫ್ ಅವರ ಜೊತೆ ಒಂದು ಡ್ರೈವ್ ಹೋಗಿ ಬಂದಿದ್ದಾರೆ.
ಇದೊಂದು ಅಪೂರ್ವವಾದ ಘಟನೆ ಎಂದೇ ಹೇಳಬಹುದು. ಇದಕ್ಕೆ ಕಾರಣವೇನೆಂದರೆ ಸಾಧಾರಣಾಗಿ ನಾವು ಒಬ್ಬ ಬ್ಯುಸಿನೆಸ್ ಮೆನ್ ಆಗಲಿ ಅಥವಾ ನಟರಾಗಲಿ ಈ ಐಷಾರಾಮಿ ವಾಹನಗಳ ಹಿಂದಿನ ಸೀಟ್‌ನಲ್ಲಿ ಕುಳಿತು ಪ್ರಯಾಣ ಮಾಡುತ್ತಾರೆ. ಆದರೆ ಇಲ್ಲಿ ರಜನಿಕಾಂತ್ ಅವರು ಪ್ಯಾಸೆಂಜರ್ ಸೀಟ್‌ನಲ್ಲಿದ್ದು ಖುದ್ದಾಗಿ ಸುಮಾರು 66 ಸಾವಿರ ಕೋಟಿ ರೂ ಮಾಲೀಕ ಯೂಸೂಫ್ ಆಲಿಯವರು ಡ್ರೈವರ್ ಆಗಿ, ನಗರಸತುಂಬಾ ಸುತ್ತಾಡಿಸಿದ್ದಾರೆ.

ಇನ್ನು ಎಂ.ಎ ಯೂಸೂಫ್ ಆಲಿಯವರ ರೋಲ್ಸ್‌ರಾಯ್ಸ್ ಕಲಿನನ್ (Rolls Royce Cullinan SUV) ಬಗ್ಗೆ ನೋಡುವುದಾದರೆ, ಈ ಕಾರಿನಲ್ಲಿ 6.75-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್ ಸಿಗುತ್ತದೆ. ಈ ಎಂಜಿನ್ ಸಹಾಯದಿಂದ ಈ ಕಾರು ಸುಮಾರು 69 bhp ಮತ್ತು 850 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇತರ ರೋಲ್ಸ್ ರಾಯ್ಸ್ ಕಾರು ಮಾದರಿಗಳಂತೆ ಈ ಕಾರು ಸಹ ಪ್ರಯಾಣಿಕರಿಗೆ ಶ್ರೇಷ್ಟ ದರ್ಜೆಯ ಕಂಫರ್ಟ್ ಅನ್ನು ನೀಡುತ್ತದೆ.
ಇಲ್ಲಿ ಕಂಡುಬರುವ ಸಾಮಾನ್ಯ ಕಲಿನನ್ ಬೆಲೆ ಎಕ್ಸ್ ಶೊರೂಂ ಪ್ರಕಾರ 6.95 ಕೋಟಿ ರೂ.ಗಳಿಂದ ಆರಂಭವಾಗುತ್ತದೆ. ಇದರಲ್ಲಿ ಮತ್ತೊಂದು ಮಾದರಿಯಿದ್ದು ಅದನ್ನು ಬ್ಲಾಕ್ ಬ್ಯಾಡ್ಜ್ ಎಂದು ಕರೆಯುತ್ತಾರೆ. ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಹೆಚ್ಚು ದುಬಾರಿಯಾಗಿದೆ. ಬ್ಲ್ಯಾಕ್ ಬ್ಯಾಡ್ಜ್‌ನ ಬೆಲೆ ಸುಮಾರು ಎಕ್ಸ್ ಶೋರೂಂ ಪ್ರಕಾರ 10 ಕೋಟಿ ರೂ. ಸಾಮಾನ್ಯ ಆವೃತ್ತಿಯಂತೆಯೇ ಅದೇ ಎಂಜಿನ್‌ನಿಂದ ಚಾಲಿತವಾಗಿದೆ, ಆದರೆ ಹೆಚ್ಚಿನ ಪವರ್, ಟಾರ್ಕ್ ಉತ್ಪಾದಿಸಲು ಇದನ್ನು ಟ್ಯೂನ್ ಮಾಡಲಾಗಿದೆ.
ಬ್ಲ್ಯಾಕ್ ಬ್ಯಾಡ್ಜ್ ಕಲಿನನ್ ಸಾಮಾನ್ಯ ಕಲ್ಲಿನನ್‌ಗಿಂತ 29 PS ಮತ್ತು 50 Nm ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಭಾರತದ ಶ್ರೀಮಂತ ಕುಟುಂಬ, ಅಂಬಾನಿಗಳು, ಇತರ ರೋಲ್ಸ್-ರಾಯ್ಸ್ ಐಷಾರಾಮಿ ಸೆಡಾನ್‌ಗಳ ಜೊತೆಗೆ ಇತ್ತೀಚೆಗೆ ಖರೀದಿಸಿದ ಬ್ಲ್ಯಾಕ್ ಬ್ಯಾಡ್ಜ್ ಸೇರಿದಂತೆ ಕನಿಷ್ಠ 4 ರೋಲ್ಸ್ ರಾಯ್ಸ್ ಕಲ್ಲಿನಾನ್‌ಗಳನ್ನು ಹೊಂದಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪ್ರಸ್ತುತ ರೋಲ್ಸ್ ರಾಯ್ಸ್ ಕಲಿನನ್ ಕಪ್ಪು ಬ್ಯಾಡ್ಜ್ ಹೊಂದಿರುವ ದೇಶದ ಏಕೈಕ ನಟ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








