ಕೋಟಿ ಕೋಟಿ ಇದ್ದರೇನಂತೆ... ಟಾಟಾ ನ್ಯಾನೋದಲ್ಲಿ ಪ್ರಯಾಣಿಸಿ ಸರಳತೆ ಮೆರೆದ ಬಿಲಿಯನೇರ್ ಉದ್ಯಮಿ
ಪ್ರಪಂಚದಾದ್ಯಂತದ ಬಿಲಿಯನೇರ್ ಉದ್ಯಮಿಗಳು ದುಬಾರಿ ಕಾರುಗಳು ಮತ್ತು ಐಷಾರಾಮಿ ಎಸ್‍ಯುವಿಗಳಲ್ಲಿ ಪ್ರಯಾಣಿಸುವುದನ್ನು ನಾವು ನೋಡಿದ್ದೇವೆ. ಅದರಲ್ಲಿ ಕೆಲವು ಉದ್ಯಮಿಗಳು ದುಬಾರಿ ಕಾರುಗಳಲ್ಲಿ ಪ್ರಯಾಣಿಸಲು ಇಷ್ಟಪಟ್ಟರೆ, ಇನ್ನೂ ಕೆಲವರು ಸರಳವಾದ ಕಾರುಗಳಲ್ಲಿ ಪ್ರಯಾಣಿಸುತ್ತಾರೆ. ಇತ್ತೀಚೆಗೆ ಬಿಲಿಯನೇರ್ ಉದ್ಯಮಿ ರಾಜೇಶ್ ಹಿರಾನಂದನಿ ಅವರು ತಮ್ಮ ಸಾಮಾನ್ಯ ಕಾರಿನಲ್ಲಿ ಕಾಣಿಸಿಕೊಂಡ ವೀಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಭಾರತದ ಬಿಲಿಯನೇರ್ ಉದ್ಯಮಿ ರಾಜೇಶ್ ಹಿರಾನಂದನಿ (Rajesh Hiranandani) ಅವರು ಸಾಮಾನ್ಯ ಟಾಟಾ ನ್ಯಾನೋ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಸರಳೆತೆಗೆ ಹಿಡಿದ ಕನ್ನಡಿಯಾಗಿದೆ. ನ್ಯಾನೋ ಕಾರಿನಲ್ಲಿ ಪ್ರಯಾಣಿಸುವ ವಿಡಿಯೋವನ್ನು ರಾಜೇಶ್ ಹಿರಾನಂದಾನಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ವೀಡಿಯೊದಲ್ಲಿ, ಮುಂಬೈನ ಧೀರೂಭಾಯಿ ಅಂಬಾನಿ ಸ್ಕ್ವೇರ್‌ನಲ್ಲಿ ಟಾಟಾ ನ್ಯಾನೋ ಕಾರಿನಲ್ಲಿ ನಿಲ್ಲಿಸಿರುವುದನ್ನು ನಾವು ನೋಡಬಹುದು.

ರಾಜೇಶ್ ಅವರು ಅಲ್ಲಿನ ನೌಕರರ ಜೊತೆ ಮಾತನಾಡುತ್ತಾರೆ. ನಂತರ ಕಾರಿನ ಇಳಿದು ರಶೀದಿಯನ್ನು ತೆಗೆದುಕೊಂಡು ಕಾರಿನಿಂದ ಹೊರನಡೆದರು. ಹಲವು ಭಾರತೀಯ ಉದ್ಯಮಿಗಳು ತಮ್ಮ ನಗರ ಪ್ರಯಾಣಕ್ಕಾಗಿ ಸರಳ ಕಾರುಗಳನ್ನು ಆರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ, ಅವರಲ್ಲಿ ಯಾರಾದರೂ ಟಾಟಾ ನ್ಯಾನೋದಷ್ಟು ಸರಳವಾದ ಕಾರನ್ನು ಬಳಸುವುದನ್ನು ನಾವು ಅಪರೂಪವಾಗಿ ನೋಡಿದ್ದೇವೆ. ರತನ್ ಟಾಟಾ ಅವರು ಟಾಟಾ ನ್ಯಾನೋವನ್ನು (Tata Nano) ಹೊಂದಿದ್ದಾರೆ.
ಆದರೆ ಅದು ಇಲ್ಲಿ ನೋಡುವುದಕ್ಕಿಂತ ಭಿನ್ನವಾಗಿದೆ. ರತನ್ ಟಾಟಾ ಅವರ ನ್ಯಾನೋ ಅವರಿಗೆ ಉಡುಗೊರೆಯಾಗಿ ನೀಡಲಾದ ಕಸ್ಟಮ್ ನಿರ್ಮಿತ ಎಲೆಕ್ಟ್ರಿಕ್ ಕಾರು ಆಗಿದೆ. ಟಾಟಾ ನ್ಯಾನೋ ಒಂದು ಅದ್ಭುತ ಸಿಟಿ ಕಾರು, ಮತ್ತು ಇದು ನಮ್ಮ ಮಾರುಕಟ್ಟೆಯಲ್ಲಿ ಕೆಲಸ ಮಾಡದಿರುವ ಏಕೈಕ ಕಾರಣವೆಂದರೆ ಕಳಪೆ ಮಾರ್ಕೆಟಿಂಗ್ ತಂತ್ರ. "ಕಾರಲ್ಲಿ ಏನಿದೆ!" ಎಂಬ ಶೀರ್ಷಿಕೆಯೊಂದಿಗೆ ರಾಜೇಶ್ ಹಿರಾನಂದನಿ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಟಾಟಾ ನ್ಯಾನೋ ಕಾರಿನ ಬಗ್ಗೆ ಹೇಳುವುದಾದರೆ, ಇದು 2008ರ ಜನವರಿ 10 ರಂದು ಬಿಡುಗಡೆಯಾದ ದೇಶದ ಅತ್ಯಂತ ಕೈಗೆಟುಕುವ ಕಾರ. ಭಾರತದ ಮಧ್ಯಮ ವರ್ಗದ ಕುಟುಂಬಗಳು ಸ್ಕೂಟರ್ ಮೇಲೆ ಮಕ್ಕಳು, ಪತ್ನಿ ಜೊತೆ ಪ್ರಯಾಣ, ಹಾಳು, ಗುಂಡಿ ಬಿದ್ದ ರಸ್ತಗಳಲ್ಲಿನ ಪ್ರಯಾಣ ತಪ್ಪಿಸಲು ರತನ್ ಟಾಟಾ ನ್ಯಾನೋ ಕಾರನ್ನು ಪರಿಚಯಿಸಿದ್ದರು. 1 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನ್ಯಾನೋ ಕಾರನ್ನು ಪರಿಚಚಯಿಸಲಾಗಿತ್ತು.
ಟಾಟಾ ಮೋಟಾರ್ಸ್ ಬೇಡಿಕೆಯ ಕುಸಿತದಿಂದಾಗಿ 2019 ರಲ್ಲಿ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರೂ ಭಾರತದ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಈ ಕಾರು ವಿಶೇಷವಾಗಿ ಉಳಿದುಕೊಂಡಿದೆ. ಇನ್ನು ರತನ್ ಟಾಟಾ ಬಳಿಯಿಯಿರುವ ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ರತನ್ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಅವರಿಗೆ ನೀಡಿದೆ.

ಇದೇ ಎಲೆಕ್ಟ್ರಾ ಇವಿ ಸ್ಟಾರ್ಟ್ಅಪ್ ಟಾಟಾ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸಿದೆ. ಎಲೆಕ್ಟ್ರಾ ಇವಿ ಹಳೆ ಇಂಧನ ವಾಹನಗಳನ್ನು ಎಲಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲು ಬೇಕಾದ ಟೆಕ್ನಾಲಜಿ ಕಿಟ್ ಅಭಿೃದ್ಧಿಪಡಿಸುತ್ತಿದೆ. ಇದೆ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಿದೆ. ಮಾಡಿಫಿಕೇಶನ್ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 160 ಕಿ.ಮೀವರೆಗೆ ಚಲಿಸಲಿದೆ.
ಈ ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರು 10 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ 0-60 ಕಿಮೀ ವರೆಗೆ ವೇಗವನ್ನು ಪಡೆದುಕೊಳ್ಳುತ್ತದೆ. ಮತ್ತೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಆಗಿ ಬಂದರೆ, ಪರಿಸರಕ್ಕೆ ಹಾನಿಯಾಗದಂತೆ ಇದು ಪರಿಪೂರ್ಣ ಸಿಟಿ ಕಾರ್ ಎಂದು ಸಾಬೀತುಪಡಿಸುತ್ತದೆ ಎಂದು ನಾವು ಊಹಿಸುತ್ತೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications