4 ಕೋಟಿ ಕಾರು ಧ್ವಂಸವಾದರು ಚಿಂತೆಯಿಲ್ಲ! ಮಾಜಿ ಶಾಸಕನ ಹೆಂಡತಿ, ಮಗನಿಗೆ ಇದೇ ಕೆಲಸ!

ಮುಂಬೈನಲ್ಲಿ ಮಾಜಿ ಶಾಸಕರೊಬ್ಬರ ಹದಿಹರೆಯದ ಮಗನಿಂದ ಬಹುಕೋಟಿ ಬೆಲೆಯ ಲ್ಯಾಂಬೋರ್ಘಿನಿ ಹುರಾಕಾನ್ ಸೂಪರ್‌ ಕಾರು ಅಪಘಾತಕ್ಕೀಡಾಗಿದೆ. ಇನ್ನೂ ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಈ ಕಾರು ಅಪಘಾತಕ್ಕೆ ಸಿಲುಕಿರುವುದು ಎರಡನೇ ಬಾರಿ. ಈ ಹಿಂದೆ, ಶಾಸಕರ ಪತ್ನಿ ಈ ಸೂಪರ್‌ಕಾರ್ ಓಡಿಸಿ ಅಪಘಾತಕ್ಕೀಡಾಗಿದ್ದರು.

ನಮಗೆಲ್ಲರಿಗೂ ತಿಳಿದಿರುವಂತೆ, ಭಾರತದಲ್ಲಿನ ರಸ್ತೆಗಳ ಪರಿಸ್ಥಿತಿಗಳು ಉತ್ತಮವಾಗಿಲ್ಲ. ರಸ್ತೆಗಳನ್ನು ಹೊರತುಪಡಿಸಿ ಉನ್ನತ ಮಟ್ಟದ ಸೂಪರ್‌ ಕಾರ್‌ಗಳನ್ನು ಓಡಿಸಲು ಸಾಕಷ್ಟು ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ. ಮುಖ್ಯವಾಗಿ ಭಾರತದಲ್ಲಿನ ಸೂಪರ್‌ಕಾರ್‌ಗಳ ಮಾಲೀಕರಿಗೆ ಇದು ಅನ್ವಯಿಸುತ್ತದೆ. ಏಕೆಂದರೆ ವಿದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಹೆಚ್ಚಾಗಿ ಇಂತಹ ಅಪಘಾತಗಳು ಸಂಭವಿಸುತ್ತಿವೆ.

bjp-ex-mla-son-crashes-lamborghini-huracan

ತೀರಾ ಇತ್ತೀಚೆಗೆ ಮೇಲೆ ತಿಳಿಸಿದ ಎರಡೂ ಕಾರಣಗಳಿಂದಾಗಿ ಮುಂಬೈನಲ್ಲಿನ ಮಾಜಿ ಶಾಸಕರೊಬ್ಬರ ಮಗನಿಂದ ಬಹುಕೋಟಿ ಬೆಲೆಯ ಲ್ಯಾಂಬೋರ್ಘಿನಿ ಹುರಾಕನ್ ಕಾರು ಅಪಘಾತಕ್ಕೀಡಾಗಿದೆ. ಬಿಜೆಪಿಯ ಮಾಜಿ ಶಾಸಕ ನರೇಂದ್ರ ಮೆಹ್ತಾ ಅವರ ಒಡೆತನದ ಈ ಲ್ಯಾಂಬೋರ್ಗಿನಿ ಹುರಾಕನ್‌ಗೆ ಅಪಘಾತವಾಗಿದ್ದು, ಪ್ರಕರಣದಲ್ಲಿ ಅವರ ಮಗ ತಕ್ಷೀಲ್ ಇರುವುದು ಬೆಳಕಿಗೆ ಬಂದಿದೆ.

ನರೇಂದ್ರ ಮೆಹ್ತಾ ಅವರ ಮಗ ಈ ಆರೆಂಜ್ ಬಣ್ಣದ ಲ್ಯಾಂಬೋರ್ಘಿನಿ ಹುರಾಕನ್ ಕಾರ್‌ನಲ್ಲಿ ಬೆಳಿಗ್ಗೆ ತನ್ನ ಕಾಲೇಜಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ ಎಂದು ತಿಳಿದುಬಂದಿದೆ. ಪೊಲೀಸ್ ವರದಿಗಳ ಪ್ರಕಾರ, ಬಾಂದ್ರಾ-ವರ್ಲಿ ಸಮುದ್ರ ಪಕ್ಕದ ರಸ್ತೆಯಲ್ಲಿ ಕಾರನ್ನು ಚಲಾಯಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಸೇತುವೆಯ ಬೇಲಿಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ.

bjp-ex-mla-son-crashes-lamborghini-huracan

ತಕ್ಷೀಲ್ ಮೆಹ್ತಾ ವೇಗವಾಗಿ ಚಲಿಸುತ್ತಿದ್ದು, ಈ ಉನ್ನತ-ಕಾರ್ಯಕ್ಷಮತೆಯ ಸೂಪರ್‌ಕಾರ್ ಇದ್ದಕ್ಕಿದ್ದಂತೆ ನಿಯಂತ್ರಣವನ್ನು ಕಳೆದುಕೊಂಡಿತು ಎಂದು ಪೊಲೀಸ್ ವರದಿಗಳು ಬಹಿರಂಗಪಡಿಸಿವೆ. ಈ ನಿಯಂತ್ರಣದ ಕೊರತೆಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಮಳೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಳೆಯಿಂದಾಗಿ ಕಾರು ಹೈಡ್ರೋಪ್ಲೇನ್ ಮಾಡಿ ಸೇತುವೆಯ ಬೇಲಿಗಳಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಹೊರಬಂದಿದ್ದಾನೆ.

ಅಪಘಾತದ ನಂತರ ಪೊಲೀಸರು ಕಾರನ್ನು ಜಪ್ತಿ ಮಾಡಿ ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆ. ತಕ್ಷೀಲ್ ಮೆಹ್ತಾ ವಿರುದ್ಧ ಸೆಕ್ಷನ್ 279 ರ ಅಡಿಯಲ್ಲಿ ಅಜಾಗರೂಕ ಚಾಲನೆ ಮತ್ತು ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ ಕಾರಣ ಸೆಕ್ಷನ್ 336 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈಗ, ಸದ್ಯಕ್ಕೆ ಶಾಸಕರ ಮಗ ಎಲ್ಲಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ.

bjp-ex-mla-son-crashes-lamborghini-huracan

ಈ ಹಿಂದೆ ಪತ್ನಿಗು ಅಪಘಾತ: ಮೊದಲೇ ಹೇಳಿದಂತೆ ಈ ಕಾರಿಗೆ ಅಪಘಾತವಾಗಿರುವುದು ಇದೇ ಮೊದಲಲ್ಲ. ಈ ಕಾರಿನ ಮೊದಲ ಅಪಘಾತವು ಡೆಲಿವರಿ ದಿನದಂದೇ ಸಂಭವಿಸಿದೆ. ಮಾಜಿ ಶಾಸಕ ನರೇಂದ್ರ ಮೆಹ್ತಾ ಅವರ ಪತ್ನಿ ಸುಮನ್ ಮೆಹ್ತಾ ಅವರಿಗೆ ಈ ಸೂಪರ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದ್ದು, ಅವರು ಈ ಕಾರನ್ನು ಡೆಲಿವರಿ ಪಡೆದ ದಿನದಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದರು.

ಇನ್ನು ಲ್ಯಾಂಬೊರ್ಘಿನಿ ಹುರಾಕಾನ್ ಕಾರಿನ ವಿಶೇಷತೆಗಳನ್ನು ನೋಡುವುದಾದ್ರೆ, ಇದು 610 bhp ಪವರ್ ಮತ್ತು 560 Nm ಗರಿಷ್ಟ ಟಾರ್ಕ್ ಉತ್ಪಾದಿಸಬಲ್ಲ ಸೂಪರ್ ಕಾರಾಗಿದೆ. ಇದು 5.2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ V10 ಎಂಜಿನ್ ಅನ್ನು ಹೊಂದಿದೆ. ಈ ಕಾರು ಕೇವಲ 3.2 ಸೆಕೆಂಡ್‌ಗಳಲ್ಲಿ 100 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆಯು 3.5 ಕೋಟಿ ರೂ. (ಎಕ್ಸ್‌ ಶೋರೂಂ) ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Tuesday, September 5, 2023, 9:37 [IST]
English summary
Bjp ex mla son crashes lamborghini huracan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+