ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಭಾರತದ ವಿವಿಧ ಭಾಗಗಳಲ್ಲಿ ವಾಹನಗಳು ಕಳ್ಳತನವಾಗುತ್ತಲೇ ಇರುತ್ತವೆ. ವಾಹನಗಳ ಮಾಲೀಕರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕಳ್ಳತನವಾಗುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ವಾಹನಗಳ್ಳರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿರುವುದೇ ಇದಕ್ಕೆ ಮುಖ್ಯ ಕಾರಣ.

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಗೌತಮ್ ಗಂಭೀರ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ. ಕ್ರಿಕೆಟ್‌ಗೆ ವಿದಾಯ ಹೇಳಿರುವ ಗಂಭೀರ್ ಸದ್ಯಕ್ಕೆ ರಾಜಕಾರಣಿಯಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಸಂಸದರಾಗಿರುವ ಗಂಭೀರ್ ರಾಜಕೀಯದತ್ತ ಗಮನ ಹರಿಸಿದ್ದಾರೆ.

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಗೌತಮ್ ಗಂಭೀರ್ ಅವರ ತಂದೆ ದೀಪಕ್ ಗಂಭೀರ್‌ರವರಿಗೆ ಸೇರಿದ ಟೊಯೊಟಾ ಫಾರ್ಚೂನರ್ ಕಾರನ್ನು ಅಪರಿಚಿತರು ಕದ್ದಿದ್ದಾರೆ. ಮೇ 28ರ ತಡರಾತ್ರಿ ಅವರ ಮನೆಯ ಹೊರಗೆ ನಿಲ್ಲಿಸಿದ್ದ ಕಾರನ್ನು ಕಳ್ಳರು ಕದ್ದಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರು ಟೊಯೊಟಾ ಫಾರ್ಚೂನರ್ ಕಾರನ್ನು ಕದಿಯುತ್ತಿರುವ ದೃಶ್ಯಗಳು ಸೆರೆಯಾಗಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಈ ಘಟನೆ ಮಧ್ಯ ದೆಹಲಿಯ ರಾಜೇಂದ್ರ ನಗರದಲ್ಲಿ ನಡೆದಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಗೌತಮ್ ಗಂಭೀರ್‌ರವರ ಕುಟುಂಬ ಸದಸ್ಯರು ಮನೆಯಲ್ಲಿರಲಿಲ್ಲ ಎಂದು ಹೇಳಲಾಗಿದೆ.

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಕಾರು ಕಳುವಾಗಿದ್ದು ಗಮನಕ್ಕೆ ಬಂದ ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ವಿಧಿವಿಜ್ಞಾನ ವಿಭಾಗದ ನೆರವನ್ನು ಕೋರಿದ್ದಾರೆ. ಈ ಘಟನೆ ವಾಹನ ಮಾಲೀಕರಿಗೆ ಆಘಾತವನ್ನುಂಟು ಮಾಡಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಕಾರು ಕದಿಯಲು ಕಳ್ಳರು ಮತ್ತೊಂದು ಕಾರಿನಲ್ಲಿ ಬಂದಿದ್ದರು. ಕಾರು ಕದಿಯಲು ಹೆಚ್ಚು ಸಮಯ ತೆಗೆದುಕೊಳ್ಳದೇ, ಕಾರು ಅಲಾರಂ ಮಾಡದಂತೆ ನೋಡಿಕೊಂಡು ಕೇವಲ 4-5 ನಿಮಿಷಗಳಲ್ಲಿ ತಮ್ಮ ಕೆಲಸವನ್ನು ಮುಗಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಕಳುವಾಗಿರುವ ಟೊಯೊಟಾ ಫಾರ್ಚೂನರ್ ಹೊಸ ತಲೆಮಾರಿನ ಕಾರ್ ಆಗಿದ್ದು, ಹೆಚ್ಚಿನ ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ. ಈ ಕಾರಿನಲ್ಲಿ ಎಂಜಿನ್ ಇಮ್ಮೊಬಿಲೈಜರ್ ಕೂಡ ಅಳವಡಿಸಲಾಗಿದೆ. ಆದರೂ ಕಳ್ಳರು ಹೈಟೆಕ್ ಸಾಧನಗಳನ್ನು ಬಳಸಿ ಕಾರ್ ಅನ್ನು ಕದ್ದಿದ್ದಾರೆ. ಈ ಹೈಟೆಕ್ ಸಾಧನಗಳ ಬೆಲೆ ತುಂಬಾ ದುಬಾರಿಯಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಈ ಹೈಟೆಕ್ ಸಾಧನಗಳನ್ನು ಅಭಿವೃದ್ಧಿ ಹೊಂದಿದ ದೇಶಗಳ ಪ್ರಮುಖ ಕಾರು ತಯಾರಕ ಕಂಪನಿಗಳು ಅಭಿವೃದ್ಧಿಪಡಿಸುತ್ತವೆ. ಇದರ ಜೊತೆಗೆ ಕೀಗಳನ್ನು ಡುಪ್ಲಿಕೇಟ್ ಮಾಡುವ ಮತ್ತೊಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಸರ್ವೀಸ್ ಸೆಂಟರ್ ಅಥವಾ ಇನ್ನಾವುದೋ ಸ್ಥಳಗಳಿಗೆ ಹೋದಾಗ ಕಾರು ಮಾಲಿಕರಿಂದ ಕೀ ಪಡೆಯಲಾಗುತ್ತದೆ.

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಅತ್ಯಾಧುನಿಕ ಟೆಕ್ನಾಲಜಿಗಳನ್ನು ಬಳಸಿಕೊಂಡು ಕೀಗಳನ್ನು ಡೂಪ್ಲಿಕೇಟ್ ಮಾಡಲಾಗುತ್ತದೆ. ಡೂಪ್ಲಿಕೇಟ್ ಮಾಡಲಾದ ಕೀ ಬಳಸಿ ಕಾರಿನಲ್ಲಿ ಅಲಾರಂ ಬರದಂತೆ ಮಾಡಿ ಕಾರುಗಳನ್ನು ಕದಿಯುತ್ತಾರೆ. ಸರ್ವೀಸ್ ಸೆಂಟರ್‌ಗಳಲ್ಲಿ ನಕಲಿ ದಾಖಲೆಗಳನ್ನು ನೀಡಿ ಕೆಲಸಕ್ಕೆ ಸೇರಿಕೊಳ್ಳುವ ಕಳ್ಳರು ಈ ಕೃತ್ಯಗಳನ್ನು ಎಸಗುತ್ತಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಡೂಪ್ಲಿಕೇಟ್ ಕೀಗಳನ್ನು ಬಳಸಿ ಕಾರುಗಳನ್ನು ಸುಲಭವಾಗಿ ಕದಿಯಬಹುದು. ಕಾರು ಮಾಲೀಕರು ಸರ್ವೀಸ್ ಸೆಂಟರ್‌ಗಳಲ್ಲಿ ಬೇರೆಯವರಿಗೆ ತಮ್ಮ ಕೀಗಳನ್ನು ನೀಡುವ ಮುನ್ನ ಜಾಗರೂಕತೆ ವಹಿಸುವುದು ಒಳ್ಳೆಯದು. ಕಾರಿನಲ್ಲಿ ಟ್ರ್ಯಾಕಿಂಗ್ ಸಾಧನಗಳನ್ನು ಹೊಂದಿದ್ದರೆ ಕಳುವಾದ ಕಾರನ್ನು ಮರಳಿ ಪಡೆಯಬಹುದು.

ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ತಂದೆ ಕಾರು ಕದ್ದ ಖದೀಮರು

ಕಾರು ಮಾಲೀಕರು ಟ್ರ್ಯಾಕಿಂಗ್ ಸಾಧನಗಳನ್ನು ಬಳಸುವುದು ಉತ್ತಮ. ಅವುಗಳ ಬೆಲೆ ಸಹ ದುಬಾರಿಯೇನಲ್ಲ. ದುಬಾರಿ ಕಾರುಗಳನ್ನು ಹೊಂದಿರುವವರು ಟ್ರ್ಯಾಕಿಂಗ್ ಸಾಧನಗಳನ್ನು ಬಳಸುವುದು ಅಗತ್ಯ.

Most Read Articles

Kannada
English summary
BJP MP cricketer Gautam Gambhir fathers Toyota Fortuner SUV stolen. Read in Kannada.
Story first published: Saturday, May 30, 2020, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more