ಭಾರತೀಯನಿಂದ ಪೈಲಟ್ ರಹಿತ ವಿಮಾನ ಅಭಿವೃದ್ಧಿ

By Nagaraja

ದೇಶದ ಉತ್ಸಾಹಿ ವಿನ್ಯಾಸಗಾರನೊಬ್ಬ ಅತಿ ನೂತನ ಪೈಲಟ್ ರಹಿತ ದೂರಗಾಮಿ ವಿಮಾನದ ಕಾನ್ಸೆಪ್ಟ್ ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಕಣ್ಗಾವಲು ಹಾಗೂ ಯುದ್ಧದ ವೇಳೆ ಕಾರ್ಯಾಚರಣೆಯನ್ನು ಮಾಡಬಹುದಾಗಿದೆ.

ಮುಂಬೈ ಮೂಲದ ಲುನಾಟಿಕ್ ಕಾನ್ಸೆಪ್ಟ್ (Lunatic Koncepts) ಸ್ಥಾಪಕ ಅಭಿಷೇಕ್ ರಾಯ್ ಎಂಬವರೇ ಈ ಅತಿ ನೂತನ ವಿನ್ಯಾಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಅಲರ್ಟ್ ವಾಯುವಿಮಾನ ಹಾಗೂ ಅರ್ಬನ್ ಬಸ್ ಕಾನ್ಸೆಪ್ಟ್ ರಚಿಸಿರುವ ಅಭಿಷೇಕ್ ಅವರ ಈ ಪರಿಕಲ್ಪನೆಯು ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತೀಯನಿಂದ ಪೈಲಟ್ ರಹಿತ ವಿಮಾನ ಅಭಿವೃದ್ಧಿ

ಇದೊಂದು ಡ್ರೋನ್ ಮಾದರಿಯ ವಿಮಾನವಾಗಿದ್ದು ಬ್ಲ್ಯಾಕ್ ಬೋಲ್ಟ್ ಎಂದು ಹೆಸರಿಸಲಾಗಿದೆ. ಲಿಂಕ್ಸ್ (Lynx) ಉಪಕಕ್ಷಾ ಬಾಹ್ಯಾಕಾಶ ವಿಭಾಗಕ್ಕೆ ಸೇರಿರುವ ಇದನ್ನು ರಿಮೋಟ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಭಾರತೀಯನಿಂದ ಪೈಲಟ್ ರಹಿತ ವಿಮಾನ ಅಭಿವೃದ್ಧಿ

ಯುದ್ಧದಂತಹ ತುರ್ತು ಪರಿಸ್ಥಿತಿಯ ವೇಳೆ ಸೈನಿಕರನ್ನು ನಿಯೋಜಿಸಲು ಅಥವಾ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಅಷ್ಟೇ ಯಾಕೆ ಸೂಪರ್ ಸೋನಿಕ್ ವಿಮಾನವಾಗಿಯೂ ಇದರ ಸೇವೆ ಪಡೆಯಬಹುದಾಗಿದೆ.

ಭಾರತೀಯನಿಂದ ಪೈಲಟ್ ರಹಿತ ವಿಮಾನ ಅಭಿವೃದ್ಧಿ

2009ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದ್ದ ಅಭಿಷೇಕ್ ಅವರ ಮನದಲ್ಲಿ ಅಲ್ಲಿನ ಫಾಲ್ಕನ್ ಹಾಗೂ ಡ್ರಾಗನ್ ಯೋಜನೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲವನ್ನುಂಟು ಮಾಡಿತ್ತು. ಇದುವೇ ಬಳಿಕ ನಾವೀನ್ಯ ಹಾಗೂ ಹೆಚ್ಚು ಕಾರ್ಯ ಕ್ಷಮತೆಯುಳ್ಳ ವಿಮಾನ ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ.

ಭಾರತೀಯನಿಂದ ಪೈಲಟ್ ರಹಿತ ವಿಮಾನ ಅಭಿವೃದ್ಧಿ

ಬಾಹ್ಯಾಕಾಶ ಸಂಶೋಧನೆಯಲ್ಲಿ ಬ್ಲ್ಯಾಕ್ ಬೋಲ್ಟ್ ಮಹತ್ವದ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಇದು 33 ಅಡಿ ಉದ್ದ ಹಾಗೂ 26 ಅಡಿ ಅಗಲವನ್ನು ಹೊಂದಿದೆ.

ಭಾರತೀಯನಿಂದ ಪೈಲಟ್ ರಹಿತ ವಿಮಾನ ಅಭಿವೃದ್ಧಿ

ಬಲವರ್ಧಿತ ಸಂಯೋಜಿತ ಭಾಗಗಳಿಂದ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಹಾಗೆಯೇ ಆರು ಎಕ್ಸ್‌ಆರ್-5ಕೆಡಬ್ಲ್ಯು ಲಿಕ್ವಿಡ್ ಫ್ಲೂಯಲ್ಡ್ ರಿ ಇಗ್ನೈಟಬಲ್ ರಾಕೆಟ್ ಎಂಜಿನ್ ಗಳನ್ನು ಆಳವಡಿಸಲಾಗಿದೆ.

ಭಾರತೀಯನಿಂದ ಪೈಲಟ್ ರಹಿತ ವಿಮಾನ ಅಭಿವೃದ್ಧಿ

ಈ ಡ್ರೋನ್ ವಿಮಾನಕ್ಕೆ ಯಾವುದೇ ವಿಂಡೋ ವ್ಯವಸ್ಥೆಯಿರುವುದಿಲ್ಲ. ಇದರಲ್ಲಿ ಎರಡು ಮಂದಿ ಪ್ರಯಾಣಿಕರಿಗೆ ಆರಾಮವಾಗಿ ಸಂಚರಿಸಬಹುದಾಗಿದೆ. ಪ್ರಸ್ತುತ ಯೋಜನೆಗೆ ಯಶ ಸಿಗಲಿ ಎಂಬುದು ನಮ್ಮ ಆಶಯವಾಗಿದೆ.


More from DriveSpark

Article Published On: Tuesday, August 11, 2015, 9:40 [IST]
English summary
The BlackBolt spacedrone is a long range and pilotless version of the Lynx suborbital spacecraft
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+