ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಗ್ರಾಮೀಣ ಪ್ರದೇಶಗಳ ಜನರು ಮೂಢ ನಂಬಿಕೆಗಳನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ವಿದ್ಯಾವಂತರು ಯಾವುದೇ ಮೂಢ ನಂಬಿಕೆಗಳನ್ನು ಹೊಂದಿರುವುದಿಲ್ಲವೆಂಬುದು ಇದರ ಅರ್ಥವಲ್ಲ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಅವರು ಸಹ ಮೂಢ ನಂಬಿಕೆಗಳನ್ನು ಹೊಂದಿರುತ್ತಾರೆ. ವಿಮಾನಗಳ ಪೈಲಟ್‌ಗಳು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದಾರೆ. ಹೆಚ್ಚು ಸವಾಲಿನ ಕೆಲಸವನ್ನುನಿರ್ವಹಿಸುವ ವಿಮಾನಗಳ ಪೈಲಟ್‌ಗಳು ಕೆಲ ಮೂಢ ನಂಬಿಕೆಗಳನ್ನು ಹೊಂದಿದ್ದಾರೆ. ಇದರಿಂದ ವಿಮಾನಗಳು ಸುರಕ್ಷಿತವಾಗಿ ಚಲಿಸುತ್ತವೆ ಎಂಬುದು ಅವರ ಭಾವನೆ. ವಿಮಾನಗಳ ಪೈಲಟ್‌ಗಳು ಹೊಂದಿರುವ ಮೂಢ ನಂಬಿಕೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಫೋಟೋ ತೆಗೆದುಕೊಳ್ಳುವುದಿಲ್ಲ:

ಸಿನಿಮಾವೊಂದರಲ್ಲಿ ಜನರು ಫೋಟೋ ತೆಗೆದರೆ ದೌರ್ಭಾಗ್ಯ ಬರುತ್ತದೆ ಎಂಬ ಮೂಢ ನಂಬಿಕೆಯನ್ನು ಹೊಂದಿದ್ದರು. ಕೆಲವು ಪೈಲಟ್‌ಗಳು ಸಹ ಈ ಮೂಢ ನಂಬಿಕೆಯನ್ನು ಹೊಂದಿದ್ದಾರೆ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಕೆಲವು ಪೈಲಟ್‌ಗಳು ವಿಮಾನಗಳು ಹೊರಡುವ ಮೊದಲು ಹೊರಗೆ ಫೋಟೋ ತೆಗೆದುಕೊಳ್ಳುವುದಿಲ್ಲ. ಫೋಟೋ ತೆಗೆಯುವುದು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಅವರ ನಂಬಿಕೆ. ಎರಡನೆಯ ಮಹಾಯುದ್ಧದಲ್ಲಿ ಹೋರಾಡಿದ ಪೈಲಟ್ ಡೇವ್ ಡೂಮ್ ಈ ವಿಚಿತ್ರ ಮೂಢ ನಂಬಿಕೆಯನ್ನು ನೆನಪಿಸಿಕೊಳ್ಳುತ್ತಾರೆ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಪ್ರವಾಸಕ್ಕೆ ಒಂದು ದಿನ ಮೊದಲು ಅವರಿಗೆ ಫೋಟೋ ತೆಗೆಯಲು ಅನುಮತಿ ನೀಡಲಾಗಿತ್ತು. ಆ ವೇಳೆ ಅವರ ವಿಮಾನವು ಕೆಲವು ಕಾರಣಗಳಿಂದ ಅಪಘಾತಕ್ಕೀಡಾಗಿತ್ತು. ಅಂದಿನಿಂದ ಪೈಲಟ್‌ಗಳು ಫೋಟೋ ತೆಗೆಯುವುದರಿಂದ ದುರಾದೃಷ್ಟ ಬರುತ್ತದೆ ಎಂದೇ ನಂಬಿದ್ದಾರೆ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಆಕಾಶದ ಕಡೆಗೆ ಕೈ ತೋರಿಸುವುದಿಲ್ಲ:

ವಿಮಾನಗಳ ಹಾರಾಟದಲ್ಲಿ ಹವಾಮಾನವು ಪ್ರಮುಖ ಪಾತ್ರ ವಹಿಸುತ್ತದೆ. ಹವಾಮಾನವು ಹದಗೆಟ್ಟರೆ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುವುದಿಲ್ಲ.ವಿಮಾನಗಳ ಹಾರಾಟವು ರದ್ದುಗೊಂಡರೆ, ಪೈಲಟ್‌ಗಳ ಯೋಜನೆಗಳಲ್ಲಿ ಬದಲಾವಣೆಯಾಗುತ್ತದೆ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಈ ಕಾರಣಕ್ಕೆ ಪೈಲಟ್‌ಗಳು ಹವಾಮಾನ ಉತ್ತಮವಾಗಿರ ಬೇಕೆಂದು ಬಯಸುತ್ತಾರೆ. ಹವಾಮಾನವು ಉತ್ತಮವಾಗಿರಬೇಕೆಂದು ಬಯಸುವ ಪೈಲಟ್‌ಗಳು ಎಂದಿಗೂ ಆಕಾಶ ಅಥವಾ ಸೂರ್ಯನ ಕಡೆಗೆ ಕೈ ತೋರಿಸುವುದಿಲ್ಲ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಬಹುಶಃ ಆಕಾಶ ಅಥವಾ ಸೂರ್ಯನ ಕಡೆಗೆ ಕೈ ತೋರಿಸಿದರೆ ಹವಾಮಾನವು ಹದಗೆಡುತ್ತದೆ ಎಂಬುದು ನಂಬಿಕೆ. ಈ ವಿಚಿತ್ರ ನಂಬಿಕೆ ಹೇಗೆ ಬಂತು ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಅದೃಷ್ಟದ ವಸ್ತುಗಳನ್ನು ತೊಳೆಯುವುದಿಲ್ಲ:

ಇದನ್ನು ಕೊಳಕು ನಂಬಿಕೆ ಎಂದೇ ಕರೆಯಬಹುದು. ಕೆಲವು ಪೈಲಟ್‌ಗಳು ಹಲವಾರು ತೊಳೆಯದ ವಸ್ತುಗಳನ್ನು ಹೊಂದಿದ್ದಾರೆ. ಈ ನಂಬಿಕೆ ಮೊದಲನೆ ಹಾಗೂ ಎರಡನೇ ಮಹಾಯುದ್ಧದ ಕಾಲದಿಂದಲೂ ಇದೆ. ಕೆಲವು ವಸ್ತುಗಳನ್ನು ತೊಳೆದರೆ ಅದೃಷ್ಟವು ದೂರವಾಗುತ್ತದೆ ಎಂಬುದು ಕೆಲವು ಪೈಲಟ್‌ಗಳ ನಂಬಿಕೆ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಈ ನಂಬಿಕೆಯನ್ನು ಪೈಲಟ್‌ಗಳು ಮಾತ್ರವಲ್ಲ ಕೆಲವು ಕ್ರೀಡಾಪಟುಗಳು ಸಹ ಹೊಂದಿದ್ದಾರೆ. ಕೆಲವು ಕ್ರೀಡಾಪಟುಗಳು ತೊಳೆಯದ ಬೂಟುಗಳಂತಹ ವಸ್ತುಗಳನ್ನು ಹೊಂದಿದ್ದಾರೆ. ಆ ವಸ್ತುಗಳನ್ನು ತೊಳೆದರೆ ಅದೃಷ್ಟವು ಕೈ ಬಿಡುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಕೆಲವು ಪೈಲಟ್‌ಗಳು ವಿವಿಧ ಆಚರಣೆ ಹಾಗೂ ಪದ್ಧತಿಗಳನ್ನು ಸಹ ಅನುಸರಿಸುತ್ತಾರೆ. ಇವುಗಳಲ್ಲಿ ವಾಟರ್ ಸೆಲ್ಯೂಟ್ ಪ್ರಮುಖವಾಗಿದೆ. ಕೆಲವು ವಿಮಾನಗಳು ಇಳಿಯುವಾಗ, ಅಗ್ನಿಶಾಮಕ ಟ್ರಕ್‌ಗಳು ಎರಡೂ ಬದಿಯಲ್ಲಿ ನಿಂತು, ವಿಮಾನದಲ್ಲಿ ನೀರನ್ನು ಸಿಂಪಡಿಸುತ್ತವೆ.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಇದು ಗೌರವದಿಂದ ನೀಡುವ ಆಚರಣೆಯಾಗಿದೆ. ಸಂಬಂಧಪಟ್ಟ ವಿಮಾನದ ಪೈಲಟ್ ನಿವೃತ್ತರಾದರೆ, ಅವರ ಗೌರವಾರ್ಥ ವಿಮಾನ ನಿಲ್ದಾಣದಲ್ಲಿ ಅವರಿಗೆ ವಾಟರ್ ಸೆಲ್ಯೂಟ್ ನೀಡಲಾಗುವುದು.

ಕೆಲವು ಪೈಲಟ್‌ಗಳು ಪಾಲಿಸುವ ಮೂಢ ನಂಬಿಕೆಗಳಿವು

ಈ ಕಾರಣಕ್ಕೆ ಮಾತ್ರವಲ್ಲದೆ ವಿವಿಧ ಕಾರಣಗಳಿಗಾಗಿ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಇದು ವಾಯುಯಾನ ಕ್ಷೇತ್ರದಲ್ಲಿ ಬಹಳ ಹಿಂದಿನಿಂದಲೂ ನಡೆದು ಕೊಂಡು ಬಂದಿರುವ ಸಂಪ್ರದಾಯವಾಗಿದೆ.

Most Read Articles

Kannada
English summary
Blind beliefs followed by pilots. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X