ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಕರೋನಾ ವೈರಸ್ ಕಾರಣಕ್ಕೆ ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಏಪ್ರಿಲ್ 14ರವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಕರೋನಾ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಲಾಕ್ ಡೌನ್ ಅನ್ನು ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಇದರ ಜೊತೆಗೆ ಲಾಕ್ ಡೌನ್ ಅನ್ನು ವಿಸ್ತರಿಸುವ ಉದ್ದೇಶವಿಲ್ಲವೆಂದು ಕೇಂದ್ರ ಸರ್ಕಾರವು ಹೇಳಿದೆ. ರಾಜ್ಯ ಸರ್ಕಾರಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಲಾಕ್ ಡೌನ್ ಅನ್ನು ವಿಸ್ತರಿಸಿದರೆ ಜನರು ಇನ್ನೂ ಕೆಲವು ದಿನಗಳ ಕಾಲ ಮನೆಯಲ್ಲಿಯೇ ಉಳಿಯಬೇಕಾಗುತ್ತದೆ. ಇದರಿಂದಾಗಿ ಸಮಾಜ ವಿರೋಧಿಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಕೆಲ ಸಮಾಜ ವಿರೋಧಿಗಳು ದರೋಡೆ ಹಾಗೂ ಕಳ್ಳತನದಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಇಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಲಾಕ್ ಡೌನ್ ಸಮಯದಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಅನ್ನು ಕದಿಯಲಾಗಿದೆ. ಈ ಬೈಕಿನ ಬೆಲೆ ಭಾರತದಲ್ಲಿ ರೂ.3 ಲಕ್ಷಗಳಾಗಿದೆ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಬೆಂಗಳೂರಿನ ಸೂರಜ್ ಎಂಬಾತನೇ ದುಬಾರಿ ಬೆಲೆಯ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಕಳೆದುಕೊಂಡ ಯುವಕ. ಲಾಕ್ ಡೌನ್ ಕಾರಣಕ್ಕೆ ಮನೆಯಿಂದ ಹೊರಬಾರದ ಸೂರಜ್ ತಾವು ವಾಸವಿರುವ ಅಪಾರ್ಟ್ಮೆಂಟ್ ಪಾರ್ಕಿಂಗ್ ನಲ್ಲಿ ತಮ್ಮ ಬೈಕ್ ಅನ್ನು ಪಾರ್ಕ್ ಮಾಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಈ ಪರಿಸ್ಥಿತಿಯ ಲಾಭವನ್ನು ಪಡೆದ ಕಿಡಿಗೇಡಿಯೊಬ್ಬ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬಿಎಂಡಬ್ಲ್ಯು ಬೈಕ್ ಅನ್ನು ಕದ್ದಿದ್ದಾನೆ. ಲಾಕ್ ಡೌನ್ ನಿಂದ ಮನೆಯೊಳಗಿದ್ದ ಸೂರಜ್ ಬೈಕ್ ಕಾಣೆಯಾಗಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಮಾರ್ಚ್ 28ರಂದು ಕೊನೆಯ ಬಾರಿಗೆ ಪಾರ್ಕಿಂಗ್ ನಲ್ಲಿ ತಮ್ಮ ಬೈಕ್ ಅನ್ನು ನೋಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು ಮಾರ್ಚ್ 28 ಹಾಗೂ ಏಪ್ರಿಲ್ 1ರ ನಡುವೆ ಬೈಕ್ ಕಳ್ಳತನವಾಗಿದೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಕೆಎ05 ಕೆಪಿ5515 ರಿಜಿಸ್ಟರ್ ನಂಬರ್ ಹೊಂದಿರುವ ಈ ಬಿಎಂಡಬ್ಲ್ಯು ಬೈಕ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಸೂರಜ್ ರವರು ತಂಗಿರುವ ಅಪಾರ್ಟ್ಮೆಂಟ್ ಸುತ್ತಲಿನ ಪ್ರದೇಶವನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಸೂರಜ್ ರವರ ಬಿಎಂಡಬ್ಲ್ಯು ಬೈಕಿನಲ್ಲಿ ಜಿಪಿಎಸ್ ಫೀಚರ್ ಇಲ್ಲದ ಕಾರಣಕ್ಕೆ ಈ ಬೈಕ್ ಅನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಇದರ ಜೊತೆಗೆ ಸೂರಜ್ ರವರು ವಾಸವಿದ್ದ ಅಪಾರ್ಟ್ಮೆಂಟ್ ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ.

ಲಾಕ್ ಡೌನ್ ಹಿನ್ನೆಲೆ: ದುಬಾರಿ ಬೆಲೆಯ ಬೈಕ್ ಕದ್ದ ಖದೀಮರು..!

ಈ ಕಾರಣಗಳಿಗಾಗಿ ಬೈಕ್ ಹುಡುಕಲು ಪೊಲೀಸರಿಗೆ ಕಷ್ಟವಾಗುತ್ತಿದ್ದು, ಸೂರಜ್ ರವರ ಅಪಾರ್ಟ್ಮೆಂಟ್ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಲಾಕ್ ಡೌನ್ ನಂತಹ ಸಂದರ್ಭದಲ್ಲಿಯೂ ಇಂತಹ ನಿಜ ಕೆಲಸಕ್ಕೆ ಕಿಡಿಗೇಡಿಗಳು ಕೈ ಹಾಕಿರುವುದು ನಿಜಕ್ಕೂ ಅಸಹ್ಯಕರ.

Most Read Articles

Kannada
English summary
BMW bike looted in Bengaluru unknown miscreants took advantage of the lockdown. Read in Kannada.
Story first published: Monday, April 6, 2020, 13:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X