ರಸ್ತೆಯಲ್ಲಿ ಅಡ್ಡ ಬಂದ ನಾಯಿ ಉಳಿಸಲು 30 ಲಕ್ಷದ ಬೈಕ್‌ ಸವಾರನ ಸರ್ಕಸ್‌ ನೊಡಿ: ಹೀಗೂ ಇರ್ತಾರಾ?

ರಸ್ತೆಯಲ್ಲಿ ಬೈಕರ್‌ಗಳು ಚಲಿಸುವಾಗ ಎದುರಿಸುವ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಬೀದಿ ನಾಯಿಗಳದ್ದು. ಹಲವು ಬೈಕ್‌ ಸವಾರರ ಸಿಂಹ ಸ್ವಪ್ನವಾಗಿ ಈ ಬೀದಿ ನಾಯಿಗಳು ಕಾಡುತ್ತಿರುತ್ತವೆ ಎಂದರೆ ಖಂಡಿತಾ ತಪ್ಪಾಗಲಾರದು. ಭಾರತದಲ್ಲಿ ಪ್ರತಿ ನಿತ್ಯ ನಡೆಯುವ ರಸ್ತೆ ಅಪಘಾತದಲ್ಲಿ ಬೀದಿ ನಾಯಿಗಳ ಕೊಡುಗೆಯೂ ಅಪಾರ ಎನ್ನಬಹುದು.

ಇಲ್ಲೊಂದು ಕಡೆ ಇದೇ ರೀತಿ ಅಪಘಾತ ನಡೆಯುತ್ತಿತ್ತಾದರೂ ಬೈಕ್‌ ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬೇಕಾಗಿದ್ದ ದೊಡ್ಡ ಅಪಘಾತವೊಂದು ತಪ್ಪಿದೆ ಎಂದೇ ಹೇಳಬಹುದು. ಅಲ್ಲೇ ಪಕ್ಕದ ವಾಹನದಲ್ಲಿ ಇದ್ದ 360 ಡಿಗ್ರೀ ಕ್ಯಾಮೆರಾದಲ್ಲಿ ಈ ಸಂಪೂರ್ಣ ಘಟನೆ ರೆಕಾರ್ಡ್‌ ಆಗಿದ್ದು, ನೋಡುಗರ ಮೈ ಜುಮ್ಮೆನ್ನುವಷ್ಟು ರೋಮಾಂಚಕಾರಿಯಾಗಿದೆ.

BMW S1000 RR

BMW S1000 RR ಬೈಕ್ ಅನ್ನು ಓಡಿಸುತ್ತಿದ್ದ ಸವಾರನೊಬ್ಬ ರೋಡ್‌ ದಾಟುತ್ತಿದ್ದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದಾನೆ. ಇನ್ನು ಇನ್ಸ್ಟಾಗ್ರಾಂ ನಲ್ಲಿ ಈ ವಿಡಿಯೋ ಹರಿಬಿಟ್ಟಿದ್ದು, ವೈರಲ್‌ ಆಗಿದೆ. ಒಂದು ನಾಯಿಮರಿಯನ್ನು ಉಳಿಸುವುದಕ್ಕಾಗಿ ಬೈಕ್‌ ಸವಾರ ತೆಗೆದುಕೊಂಡ ರಿಸ್ಕ್‌ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಈ ವಿಡಿಯೋ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ದೊರಕಿಲ್ಲವಾದರೂ, ಆ ಬೈಕ್‌ ಸವಾರನ ಕಾರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ನಾಯಿ ಅಡ್ಡಬಂದ ಪರಿಣಾಮ ಆತ ಏನಾದರೂ ಅಲ್ಲಿ ಬಿದ್ದಿದ್ದರೆ ಸುಮಾರು ಮೂವತ್ತು ಲಕ್ಷ ಬೆಲೆ ಬಾಳುವ ಬೈಕ್‌ ಸಹ ಹಾನಿಗೆ ಒಳಗಾಗುತ್ತಿತ್ತು. ಹೀಗೇನಾದರೂ ಹಾನಿಗೊಳಗಾಗಿದ್ದರೆ ಅದನ್ನು ಸರಿ ಪಡಿಸಲು ನಂತರ ಆತ ಸುಮಾರು ಲಕ್ಷಗಳನ್ನೇ ಖರ್ಚು ಮಾಡಬೇಕಿತ್ತೋ ಏನೋ ಎಂಬುದು ಎಲ್ಲರ ಮಾತಾಗಿದೆ.

BMW S1000 RR

ವಿಡಿಯೋದಲ್ಲಿ ಕಾಣುವಂತೆ ಬೈಕ್‌ ಸವಾರರ ಗುಂಪೊಂದು ಹೆದ್ದಾರಿಯಲ್ಲಿ ಚಲಿಸುತ್ತಿರುವ ಸಂಧರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಇನ್ನೊಂದು ವಾಹನದಲ್ಲಿ ಇದನ್ನು 360 ಡಿಗ್ರಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿತ್ತು. ಇದೇ ಸಂಧರ್ಭದಲ್ಲಿ ಈ ಮೇಲೆ ತಿಳಿಸಿದ ಘಟನೆ ನಡೆದಿದ್ದು, ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ.

ಇನ್ನು ಬೈಕ್‌ ಸವಾರರು ಚಲಿಸುತ್ತಿದ್ದ ವೇಳೆ ಕಪ್ಪು, ಬಿಳುಪು ಮಿಶ್ರಿತ ಬಣ್ಣ ಹೊಂದಿರುವ ನಾಯಿಯೊಂದು ರಸ್ತೆ ದಾಟಿಸಲು ಪ್ರಯತ್ನಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಹುದಾಗಿದೆ. ಉಳಿದ ಸವಾರರು ಅದನ್ನು ದಾಟಿ ಮುಂದೆ ಹೋಗಿದ್ದು, BMW S1000 RR ಬೈಕ್ ಸವಾರ ಅದನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗದೇ ನಾಯಿ ಬಳಿ ಬಂದಾಗಲೇ ಬ್ರೇಕ್‌ ಹಾಕಿದ್ದಾನೆ.

BMW S1000 RR ಸವರಾ ನಾಯಿಯನ್ನು ಉಳಿಸಲು ಬ್ರೇಕ್ ಹಾಕಿದ ರಭಸಕ್ಕೆ ಬೈಕ್‌ ಸ್ಟೋಪೀ ಆಗಿದೆ. ಅಂದರೆ ಬೈಕ್‌ ಹಿಂಬದಿಯ ಚಕ್ರ ನೆಲದಿಂದ ಮೇಲೆದ್ದು ಬೈಕ್‌ನ ವೇಗ ಕಮ್ಮಿ ಆಗಿದೆ. ಈ ಸಂಧರ್ಭದಲ್ಲಿ ಬದುಕಿದೆಯಾ ಬಡ ಜೀವವೇ ಎಂಬಂತೆ ಅಲ್ಲಿದ್ದ ನಾಯಿಮರಿ ಸುರಕ್ಷಿತವಾಗಿ ರಸ್ತೆ ದಾಟುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.

ಇನ್ನು ವೇಗದಲ್ಲಿದ್ದ BMW S1000 RR ಬೈಕ್‌ ಸವಾರ ಕ್ಷಣ ಮಾತ್ರದಲ್ಲಿ ತನ್ನ ವಾಹನವನ್ನು ಹತೋಟಿಗೆ ತಂದ ರೀತಿ ನಿಜಕ್ಕೂ ಶ್ಲಾಘನೀಯ. ಒಂದು ವೇಳೆ ಆತ ತನ್ನ ಬೈಕ್‌ ಚಲಾವಣೆಯ ನಿಪುಣತೆಯನ್ನು ಅಲ್ಲಿ ಹೊರತೆಗೆಯದೇ ಇದ್ದಿದ್ದರೆ ಅಲ್ಲೊಂದು ದೊಡ್ಡ ಅಪಘಾತವೇ ಸಂಭವಿಸುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರತಿಯೊಬ್ಬರೂ ಸಹ ಬೈಕ್‌ ಸವಾರಿ ಮಾಡುವಾಗ ಎಚ್ಚರಿಕೆಯಿಂದ ಸವಾರಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಕಾರಣ ಹಲವಾರಿದೆ. ರಸ್ತೆಯಲ್ಲಿ ನಾಯಿಗಳು, ಮನುಷ್ಯರು ಇಲ್ಲವೇ ಇತರ ವಾಃನಗಳು ಅಡ್ಡ ಬರುವ ಸಾಧ್ಯತೆಗಳು ಇರುತ್ತವೆ. ಇದೇ ಕಾರಣಕ್ಕಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ, ಹೆಲ್ಮೆಟ್‌ಗಳನ್ನು ಧರಿಸಿ ವಾಹನ ಚಲಾಯಿಸುವುದರಿಂದ ಅಪಘಾತಗಳನ್ನುತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 27, 2023, 13:00 [IST]
English summary
Bmw s1000 rr rider stoppie to save street dog
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+