ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಉದ್ಯಮಿ ಬಾಬಿ ಚೆಮ್ಮನೂರ್ ಕೇರಳದಾದ್ಯಂತ ಜನಪ್ರಿಯತೆಯನ್ನು ಹೊಂದಿದ್ದಾರೆ. ಆಭರಣ ಅಂಗಡಿ ಮಾಲೀಕರಾಗಿರುವ ಅವರು ಬಹುಮುಖ ಪ್ರತಿಭೆಯೂ ಹೌದು. ಅವರು ಕೆಲ ತಿಂಗಳ ಹಿಂದೆ ತಮ್ಮ ಶೋರೂಂ ಉದ್ಘಾಟನೆಗಾಗಿ ಫುಟ್ಬಾಲ್ ದಂತಕಥೆ ದಿವಂಗತ ಮರಡೋನಾ ಅವರನ್ನು ಕರೆತಂದಿದ್ದರು.

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಬಾಬಿ ಚೆಮ್ಮನೂರ್ ಇತ್ತೀಚೆಗೆ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದ ಬಗ್ಗೆ ಸುದ್ದಿಯಾಗಿತ್ತು. ಮರ್ಸಿಡಿಸ್ ಬೆಂಝ್ ಇಕ್ಯೂಸಿ ಭಾರತದ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದರ ಜೊತೆಗೆ ಅವರು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರನ್ನು ಟ್ಯಾಕ್ಸಿಯಾಗಿ ಬಳಸುತ್ತಾರೆ

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಈಗ ಬಾಬಿ ಚೆಮ್ಮನೂರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸಿದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಹರಾಜು ಪ್ರಕ್ರಿಯೆಯಲ್ಲಿ ಬಾಬಿ ಚೆಮ್ಮನೂರ್ ಕೂಡ ಭಾಗಿಯಾಗಿದ್ದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಈ ಮಾಹಿತಿಯನ್ನು ಬಾಬಿ ಚೆಮ್ಮನೂರ್ ಅವರೇ ಖಚಿತಪಡಿಸಿದ್ದಾರೆ. ನಾನು ಈ ಹರಾಜಿನಲ್ಲಿ ಭಾಗವಹಿಸಲಿದ್ದೇನೆ. ಟೆಕ್ಸಾಸ್'ನಲ್ಲಿರುವ ನಮ್ಮ ಕಚೇರಿಯು ಈಗಾಗಲೇ ಹರಾಜಿನಲ್ಲಿ ಭಾಗವಹಿಸುವ ಪ್ರಕ್ರಿಯೆಗಳನ್ನು ಆರಂಭಿಸಿದೆ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಅಮೆರಿಕಾ ಮೂಲದ ಮೆಕಮ್ ಕಂಪನಿಯು ಈ ಕಾರಿನ ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿದೆ. ಡೊನಾಲ್ಡ್ ಟ್ರಂಪ್'ರವರ ಬಳಿಯಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಹಲವಾರು ಐಷಾರಾಮಿ ಫೀಚರ್'ಗಳನ್ನು ಹೊಂದಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಇವುಗಳಲ್ಲಿ ಥಿಯೇಟರ್ ಪ್ಯಾಕೇಜ್, ಸ್ಟಾರ್‌ಲೈಟ್ ಹೆಡ್‌ಲೈನರ್ ಹಾಗೂ ಎಲೆಕ್ಟ್ರಾನಿಕ್ ಸ್ಕ್ರೀನ್'ಗಳು ಸೇರಿವೆ. ಈ ಕಾರು ಇದುವರೆಗೂ ಒಟ್ಟು 91,249 ಕಿ.ಮೀ ಸಂಚರಿಸಿದೆ. ಡೊನಾಲ್ಡ್ ಟ್ರಂಪ್ ಬಳಸಿದ ಈ ಕಾರು 2010ರ ಮಾದರಿಯಾಗಿದೆ.

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಬಾಬಿ ಚೆಮ್ಮನೂರ್ ಅವರು ಈ ಹರಾಜಿನಲ್ಲಿ ಗೆಲ್ಲುವ ಭರವಸೆಯನ್ನು ಹೊಂದಿದ್ದಾರೆ. ಈ ಕಾರಿನ ಮೂಲ ಬೆಲೆಯನ್ನು ಸುಮಾರು ರೂ.3 ಕೋಟಿಗಳಿಗೆ ನಿಗದಿಪಡಿಸಲಾಗಿದೆ. ಈ ಹರಾಜು ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಆದರೆ ಪ್ರಪಂಚದಾದ್ಯಂತವಿರುವ ಹಲವು ಕಾರು ಪ್ರಿಯರು ಈ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಭಾರತದಿಂದ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಬಾಬಿ ಚೆಮ್ಮನೂರ್ ತಮ್ಮ ಪ್ರಯತ್ನದಲ್ಲಿ ಸಫಲರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಡೊನಾಲ್ಡ್ ಟ್ರಂಪ್ ಕಾರು ಖರೀದಿಸಲು ಮುಂದಾದ ಭಾರತೀಯ

ಬಾಬಿ ಚೆಮ್ಮನೂರ್ ಕಾರು ಉತ್ಸಾಹಿ ಮಾತ್ರವಲ್ಲದೆ ತಮ್ಮ ಉದಾರತೆಗೂ ಹೆಸರುವಾಸಿಯಾಗಿದಾರೆ. ಅವರು ಹಲವು ಬಾರಿ ರಕ್ತದಾನ ಮಾಡಿದ್ದಾರೆ ಎಂಬುದು ಗಮನಾರ್ಹ. ಜೊತೆಗೆ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳಲ್ಲಿ ಅವರು ನಿರಂತರವಾಗಿ ಭಾಗವಹಿಸುತ್ತಾರೆ.

Most Read Articles

Kannada
English summary
Bobby Chemmanur to bid for Donald Trump Rolls Royce car. Read in Kannada.
Story first published: Wednesday, January 13, 2021, 12:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X