ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಬೋಯಿಂಗ್ ಕಂಪನಿಯು ಹೊಸ ಎಹೆಚ್ -64 ಇ ಅಪಾಚೆ ಹಾಗೂ ಸಿಎಚ್ -47 ಎಫ್ (ಐ) ಚಿನೂಕ್ ಮಿಲಿಟರಿ ಹೆಲಿಕಾಪ್ಟರ್ ಗಳನ್ನು ಭಾರತೀಯ ವಾಯುಸೇನೆಗೆ ಹಸ್ತಾಂತರಿಸಿದೆ. ಬೋಯಿಂಗ್, ಭಾರತೀಯ ವಾಯುಸೇನೆಯ ಹಿಂಡನ್‌ ನೆಲೆಯಲ್ಲಿ ಇವುಗಳನ್ನು ಹಸ್ತಾಂತರಿಸಿದೆ.

ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಈ ಕುರಿತು ಹೇಳಿಕೆ ನೀಡಿರುವ ಕಂಪನಿಯು ಒಟ್ಟು 22 ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಲ್ಲಿ ಕೊನೆಯ 5 ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಲಾಗಿದೆ. ಈ ಮೊದಲು ಮಾರ್ಚ್‌ನಲ್ಲಿ, ಒಟ್ಟು 15 ಸಿಎಚ್ -47 ಎಫ್ (ಐ) ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್‌ಗಳ ಪೈಕಿ ಕೊನೆಯ 5 ಯುನಿಟ್ ಗಳನ್ನು ಹಸ್ತಾಂತರಿಸಲಾಗಿತ್ತು ಎಂದು ಹೇಳಿದೆ. ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಆಯ್ಕೆ ಮಾಡಿಕೊಂಡ 17 ದೇಶಗಳಲ್ಲಿ ಭಾರತವೂ ಸೇರಿದೆ.

ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಎಹೆಚ್ -64 ಇ, ಅಪಾಚೆ ಹೆಲಿಕಾಪ್ಟರ್‌ಗಳ ಅತ್ಯಾಧುನಿಕ ಮಾದರಿಯಾಗಿದೆ. ಎಹೆಚ್ -64 ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಅಮೆರಿಕಾ ಸೇರಿದಂತೆ ಹಲವಾರು ದೇಶಗಳು ಬಳಸುತ್ತವೆ. ಎಹೆಚ್-64ಇ ಅಪಾಚೆ ಹೆಲಿಕಾಪ್ಟರ್‌ಗಳನ್ನು ಓಪನ್ ಸಿಸ್ಟಮ್ ಆರ್ಕಿಟೆಕ್ಚರ್ ನಿಂದ ವಿನ್ಯಾಸಗೊಳಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಈ ಹೆಲಿಕಾಪ್ಟರ್‌ಗಳಲ್ಲಿ ಹೊಸ ಕಮ್ಯೂನಿಕೇಷನ್, ನ್ಯಾವಿಗೇಷನ್, ಸೆನ್ಸಾರ್, ವೆಪನ್ ಸಿಸ್ಟಂ, ಮಾಡರ್ನ್ ಟಾರ್ಗೆಟ್ ಅಕ್ವಿಸಿಷನ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ಮಾಡರ್ನ್ ಟಾರ್ಗೆಟ್ ಅಕ್ವಿಸಿಷನ್ ಸಿಸ್ಟಂ ಹಗಲು, ರಾತ್ರಿ ಹಾಗೂ ಎಲ್ಲಾ ರೀತಿಯ ಹವಾಮಾನದಲ್ಲಿ ಗುರಿಯ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡುತ್ತದೆ.

ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಆಕಾಶ ಹಾಗೂ ಭೂಮಿಯ ಮೇಲಿರುವ ಗುರಿಗಳನ್ನು ಪ್ರತ್ಯೇಕವಾಗಿ ಗುರುತಿಸಲು ಫೈರ್ ಕಂಟ್ರೋಲ್ ರೇಡಾರ್ ಗಳನ್ನು ಅಪ್ ಡೇಟ್ ಮಾಡಲಾಗಿದೆ. ಈ ರೇಡಾರ್ ಎಲ್ಲಾ ರೀತಿಯ ಪರಿಸರದಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಚಿನೂಕ್ ಹೆಲಿಕಾಪ್ಟರ್‌ಗಳನ್ನು ವಿಶ್ವದ ಸುಮಾರು 20 ಭದ್ರತಾ ಪಡೆಗಳು ಹೊಂದಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಚಿನೂಕ್ ಅನ್ನು 50 ವರ್ಷಗಳಿಂದ ವಿಶ್ವದ ಸುರಕ್ಷಿತವಾದ ಹಾಗೂ ಅತ್ಯುತ್ತಮವಾದ ಹೆವಿ-ಲಿಫ್ಟ್ ಹೆಲಿಕಾಪ್ಟರ್ ಎಂದು ಪರಿಗಣಿಸಲಾಗಿದೆ. ಈ ಹೆಲಿಕಾಪ್ಟರ್ ಸಾಮಾನ್ಯ ಹೆಲಿಕಾಪ್ಟರ್ ಗಳು ಹಾರಾಟ ನಡೆಸಲು ಸಾಧ್ಯವಾಗದ ಹವಾಮಾನ, ಎತ್ತರ ಹಾಗೂ ಕ್ರಾಸ್‌ವಿಂಡ್‌ಗಳಲ್ಲಿ ಹಾರಾಟ ನಡೆಸುತ್ತದೆ.

ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಚಿನೂಕ್ ಆಧುನಿಕವಾದ ಮಷಿನ್ ಏರ್ ಫ್ರೇಮ್, ಡಿಜಿಟಲ್ ಆಟೋಮ್ಯಾಟಿಕ್ ಫ್ಲೈಟ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದೆ. ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಸೇನೆಗೆ ಬಂದಿದ್ದು, ಗಡಿಗಳ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿವೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳಿಂದ ಮತ್ತಷ್ಟು ಬಲಿಷ್ಠವಾದ ಭಾರತೀಯ ವಾಯುಸೇನೆ

ಬೋಯಿಂಗ್‌ನ ಹೊಸ ಎಹೆಚ್ -64 ಇ ಅಪಾಚೆ ಹಾಗೂ ಸಿಎಚ್ -47 ಎಫ್ (ಐ) ಚಿನೂಕ್ ಮಿಲಿಟರಿ ಹೆಲಿಕಾಪ್ಟರ್‌ಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು 2015ರ ಸೆಪ್ಟೆಂಬರ್ ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಬೋಯಿಂಗ್‌ನ ಜಂಟಿ ಸಹಭಾಗಿತ್ವದ ಟಾಟಾ ಬೋಯಿಂಗ್ ಏರೋಸ್ಪೇಸ್ ಲಿಮಿಟೆಡ್, ಅಪಾಚೆ ಹೆಲಿಕಾಪ್ಟರ್‌ನ ಏರೋ ರಚನೆಯನ್ನು ತಯಾರಿಸುತ್ತದೆ.

Most Read Articles

Kannada
English summary
Boeing delivers Apache Chinook helicopter to Indian Air Force. Read in Kannada.
Story first published: Friday, July 10, 2020, 19:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X