ಒಂದೂವರೆ ಕೋಟಿ ಮೌಲ್ಯದ ಟೊಯೊಟಾ ಕಾರು ಖರೀದಿಸಿದ ನಟ ಅಕ್ಷಯ್ ಕುಮಾರ್: ಇದು ರಸ್ತೆ ಮೇಲಿನ ಅರಮನೆ!

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) 57ನೇ ವಯಸ್ಸಿನಲ್ಲಿಯೂ ಚಿರ ಯುವಕರಂತೆ ಇದ್ದು, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಲು, ಸಾಲು ಸಿನಿಮಾಗಳ ಶೂಟಿಂಗ್‌ನಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಅವರಿಗೆ ಕಾರುಗಳ ಬಗ್ಗೆ ವಿಶೇಷವಾದ ಪ್ರೀತಿಯಿದ್ದು, ಮರ್ಸಿಡಿಸ್-ಬೆಂಜ್ ಜಿಎಲ್ಎಸ್, ಹೋಂಡಾ ಸಿಆರ್-ವಿ, ಮರ್ಸಿಡಿಸ್-ಬೆಂಜ್ ಜಿಎಲ್ 350, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್, ರೋಲ್ಸ್ ರಾಯ್ಸ್ ಫ್ಯಾಂಟಮ್, ಪೋರ್ಷೆ ಕೇಯೆನ್ನೆ ಮತ್ತು ಜೀಪ್ ಕಂಪಾಸ್ ಸೇರಿದಂತೆ ಹಲವು ಕಾರುಗಳ ಒಡೆಯರಾಗಿದ್ದಾರೆ.

ಸದ್ಯ, ನಟ ಅಕ್ಷಯ್ ಕುಮಾರ್ ದುಬಾರಿ ಬೆಲೆಯ ಐಷಾರಾಮಿ ಟೊಯೊಟಾ ವೆಲ್‌ಫೈರ್‌ (Toyota Vellfire) ಎಂಪಿವಿ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಲ್‌ಚಲ್ ಸೃಷ್ಟಿಸಿದೆ. ನೆಟ್ಟಿಗರು ಕೂಡ ಈ ಕಾರಿನ ಬೆಲೆ ಏನು.. ವಿಶೇಷತೆಗಳೇನು ಎಂಬುದರ ಕುರಿತಂತೆ ಹುಡುಕಾಟ ನಡೆಸಿದ್ದಾರೆ.

Bollywood Actor Akshay Kumar Bought Toyota Vellfire Mpv

ನಟ ಅಕ್ಷಯ್ ಕುಮಾರ್ ಕೊಂಡುಕೊಂಡಿದ್ದಾರೆ ಎನ್ನಲಾದ ಟೊಯೊಟಾ ವೆಲ್‌ಫೈರ್‌ ಎಂಪಿವಿ, ರೂ.1.22 ಕೋಟಿಯಿಂದ ರೂ.1.32 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದರ ಆನ್-ರೋಡ್ ದರ ಬರೋಬ್ಬರಿ ರೂ.1.50 ಕೋಟಿವರೆಗೂ ತಲುಪುತ್ತದೆ. ಈ ಕಾರು, ಹೈ ಹಾಗೂ ವಿಐಪಿ ಎಕ್ಸಿಕ್ಯೂಟಿವ್ ಲೌಂಜ್ ಎಂಬ 2 ಆಕರ್ಷಕ ರೂಪಾಂತರಗಳ ಆಯ್ಕೆಯಲ್ಲಿಯೂ ಖರೀದಿಗೆ ದೊರೆಯುತ್ತದೆ.

ಹೊಚ್ಚ ಹೊಸ ಟೊಯೊಟಾ ವೆಲ್‌ಫೈರ್‌ ಎಂಪಿವಿ 2.5-ಲೀಟರ್ ಸಾಮರ್ಥ್ಯದ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್‌ನ್ನು ಹೊಂದಿದೆ. ಇದು 193 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 240 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಇ-ಸಿವಿಟಿ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದೆ.

Bollywood Actor Akshay Kumar Bought Toyota Vellfire Mpv

ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (14-ಇಂಚು), ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಬಿಯೆಂಟ್ ಲೈಟಿಂಗ್, ಜೆಬಿಎಲ್ ಸೌಂಡ್ ಸಿಸ್ಟಮ್, ಡುಯಲ್-ಪ್ಯಾನಲ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯಂತಹ ಹಲವು ವೈಶಿಷ್ಟ್ಯಗಳು ಸಹ ಇದರಲ್ಲಿವೆ.

ವಿಮಾನದಂತಹ ಐಷಾರಾಮಿ ಸೌಲಭ್ಯವಿರುವ ಈ ಟೊಯೊಟಾ ವೆಲ್‌ಫೈರ್‌ ಎಂಪಿವಿಯಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಯಸಬಹುದು. ಈ ಕಾರು 170 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಬ್ಲ್ಯಾಕ್ & ಪ್ಲಾಟಿನಂ ವೈಟ್ ಪರ್ಲ್ ಒಳಗೊಂಡಂತೆ 3 ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

Bollywood Actor Akshay Kumar Bought Toyota Vellfire Mpv

ನಟ ಅಕ್ಷಯ್ ಕುಮಾರ್ ದುಬಾರಿ ಬೆಲೆಯ 'ರೋಲ್ಸ್ ರಾಯ್ಸ್ ಫ್ಯಾಂಟಮ್' ಕಾರಿನ ಮಾಲೀಕರೂ ಆಗಿದ್ದಾರೆ. ಇದರ ಬಗ್ಗೆ ಹೇಳುವುದಾದರೆ, ಈ ಕಾರು ರೂ.8.99 ರಿಂದ ರೂ.10.48 ಕೋಟಿ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 6.75-ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್ ಒಳಗೊಂಡಿದ್ದು, 8-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆದಿದೆ. 250 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಅಕ್ಷಯ್ ಕುಮಾರ್ ಅವರ ಬಳಿ 'ಮರ್ಸಿಡಿಸ್-ಬೆಂಜ್ ಜಿಎಲ್ಎಸ್' ಎಸ್‌ಯುವಿಯೂ ಇದೆ. ಈ ಕಾರು, ರೂ.1.32 ರಿಂದ ರೂ.1.37 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 3-ಲೀಟರ್ 6-ಸಿಲಿಂಡರ್ ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 12 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಜೊತೆಗೆ 7 ಆಸನಗಳನ್ನು ಒಳಗೊಂಡಿದೆ.

ಅಕ್ಷಯ್ ಕುಮಾರ್ ಅವರಂತೆ ವಿವಿಧ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಟೊಯೊಟಾ ವೆಲ್‌ಫೈರ್ ಎಂಪಿವಿಯನ್ನು ಹೊಂದಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್, ಅಮೀರ್ ಖಾನ್, ಅಜಯ್ ದೇವಗನ್, ಮೋಹನ್ ಲಾಲ್, ಫಹಾದ್ ಫಾಸಿಲ್, ಅನಿಲ್ ಕಪೂರ್, ಜಾನ್ವಿ ಕಪೂರ್, ಆಲಿಯಾ ಭಟ್ ಹಾಗೂ ಭೂಮಿ ಪೆಡ್ನೇಕರ್ ಅವರ ಬಳಿಯೂ ಈ ಕಾರು ಇದೆ.

Article Published On: Tuesday, November 12, 2024, 23:16 [IST]
English summary
Bollywood actor akshay kumar bought toyota vellfire mpv
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+