ಬಹುಕೋಟಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಖರೀದಿಸಿದ ಜನಪ್ರಿಯ ನಟ
ಜನಪ್ರಿಯ ನಟ ಮತ್ತು ನಿರ್ಮಾಪಕರೊಬ್ಬರು ಇತ್ತೀಚೆಗೆ ಬಹುಕೋಟಿ ಬೆಲೆಯ ಹೊಚ್ಚ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಖರೀದಿಸಿದ್ದಾರೆ. ಹೊಸ ಐಷಾರಾಮಿ ಲ್ಯಾಂಡ್ ರೋವರ್ ಎಸ್‌ಯುವಿಯನ್ನು ಡೆಲಿವರಿ ತೆಗೆದುಕೊಳ್ಳುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಡೀಲರ್‌ಶಿಪ್ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಎಷ್ಟೇ ನಟನಾದರು ದುಬಾರಿ ಕಾರಿಗೆ ಹಿಂದೂ ಸಂಪ್ರದಾಯದಂತೆ ಪೂಜೆಗಳನ್ನು ನೆರವೇರಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಕಾರಿನ ಮುಂದೆ ತೆಂಗಿನಕಾಯಿ ಒಡೆಯುವ ಮೂಲಕ ಧಾರ್ಮಿಕ ವಿಧಿ ವಿಧಾಗಳನ್ನು ನೆರವೇರಿಸಿದರು. ಅವರ ಅರ್ಚಕರ ಮಾರ್ಗದರ್ಶನದಂತೆ ಪೂಜೆ ಮಾಡುವುದನ್ನು ವೀಡಿಯೊದಲ್ಲಿ ನೋಡಬಹುದು. ಅದಕ್ಕೂ ಮುನ್ನ ಡೀಲರ್‌ಶಿಪ್ ನೀಡಿದ ಕೇಕ್ ಅನ್ನು ಸಹ ಕತ್ತರಿಸಿದರು.

ಬಾಲಿವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರಾದ ಜಸ್ಜಿತ್ ಸಿಂಗ್ ಗಿಲ್ ಅಥವಾ ಜಿಮ್ಮಿ ಶೆರ್ಗಿಲ್ ಮೊದಲಿನಿಂದಲು ವಾಹನ ಉತ್ಸಾಹಿ. ಹಲವಾರು ಕಾರು ಕಲೆಕ್ಷನ್ ಹೊಂದಿರುವ ಇವರು, ಇದೀಗ ಐಷಾರಾಮಿ ಲ್ಯಾಂಡ್ ರೋವರ್ ಎಸ್‌ಯುವಿಯನ್ನು ಡೆಲಿವರಿ ಪಡೆದುಕೊಂಡಿದ್ದಾರೆ. ಈ ಕುರಿತ ವೀಡಿಯೊವನ್ನು ಮುಂಬೈ ಮೂಲದ ಲ್ಯಾಂಡ್ ರೋವರ್ ಡೀಲರ್‌ಶಿಪ್ ನವನಿತ್ ಮೋಟಾರ್ಸ್ Instagram ನಲ್ಲಿ ಹಂಚಿಕೊಂಡಿದೆ.
ವಿಡಿಯೋಗೆ ಶೀರ್ಷಿಕೆ ನೀಡಿರುವ ಡೀಲರ್, "@ಜಿಮ್ಮಿಶೆರ್ಗಿಲ್, ನೀವು ಇತ್ತೀಚೆಗೆ ಅದ್ಭುತವಾದ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಸ್ವಾಧೀನಪಡಿಸಿಕೊಂಡಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಲು ನಾವು ಬಯಸುತ್ತೇವೆ! ನೀವು ಆನ್ ಮತ್ತು ಆಫ್-ಸ್ಕ್ರೀನ್ ಎರಡರಲ್ಲೂ ಹೊಸ ಸಾಹಸಗಳನ್ನು ಮಾಡುತ್ತೀರಿ, ಲ್ಯಾಂಡ್ ರೋವರ್ ಡಿಫೆಂಡರ್‌ನ ನಿಮ್ಮ ಆಯ್ಕೆಯು ಗುಣಮಟ್ಟ, ಸೊಬಗು ಮತ್ತು ಒರಟಾದ ಕಾರ್ಯಕ್ಷಮತೆಗಾಗಿ ನಿಮ್ಮ ಅಭಿರುಚಿಗೆ ಸಾಕ್ಷಿಯಾಗಿದೆ ಎಂದು ಡೀಲರ್‌ಶಿಪ್ ಬರೆದುಕೊಂಡಿದೆ.

ಕಾರಿನ ವಿಶೇಷತೆಗಳು: ಭಾರತದಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 2.0-ಲೀಟರ್ ಮತ್ತು 3.0-ಲೀಟರ್ ಪೆಟ್ರೋಲ್ ಮತ್ತು 3.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಈ ಎಂಜಿನ್‌ಗಳ ಪವರ್ ಔಟ್‌ಪುಟ್ ನೋಡುವುದಾದ್ರೆ, ಟರ್ಬೊ ಪೆಟ್ರೋಲ್ ಎಂಜಿನ್ 2.0-ಲೀಟರ್ 4-ಸಿಲಿಂಡರ್ ಯೂನಿಟ್ ಒಳಗೊಂಡಿದ್ದು 300 bhp ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಉಳಿದಂತೆ 3.0-ಲೀಟರ್ 6-ಸಿಲಿಂಡರ್ ಎಂಜಿನ್ ಗರಿಷ್ಠ 400 bhp ಪವರ್ ಮತ್ತು 550 Nm ಟಾರ್ಕ್ ಉತ್ಪಾದಿಸುತ್ತದೆ. ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿರುವ ಟರ್ಬೊ ಡೀಸೆಲ್ ಎಂಜಿನ್ 3.0-ಲೀಟರ್ ಇನ್‌ಲೈನ್ 6-ಸಿಲಿಂಡರ್ ಯುನಿಟ್ ಆಗಿದ್ದು, ಇದು 300 bhp ಪವರ್ ಮತ್ತು 650 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಸ್‌ಯುವಿ ಬೆಲೆಯು 93.55 ಲಕ್ಷ ರೂ.ನಿಂದ ಪ್ರಾರಂಭವಾಗಿ 2.3 ಕೋಟಿ ರೂ.ವರೆಗೆ ಇದೆ.
ಜಿಮ್ಮಿ ಶೆರ್ಗಿಲ್ ಲ್ಯಾಂಡ್ ರೋವರ್ ಡಿಫೆಂಡರ್: ನಟ ಜಿಮ್ಮಿ ಶೆರ್ಗಿಲ್ ಅವರು ಸ್ಯಾಂಟೊರಿನಿ ಬ್ಲಾಕ್ ಬಣ್ಣದ ಎಸ್‌ಯುವಿಯನ್ನು ಆರಿಸಿಕೊಂಡಿದ್ದಾರೆ. ಇದು ಸಿಲ್ವರ್ 5-ಸ್ಪೋಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇದರ ಹೊರತಾಗಿ, ಸ್ಯಾಂಟೋರಿನಿ ಬ್ಲ್ಯಾಕ್ ತುಂಬಾ ಕ್ಲಾಸಿಯಾಗಿ ಕಾಣುವ ಟ್ಯಾನ್ ಲೆದರ್ ಇಂಟೀರಿಯರ್ ಅನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








