ಪ್ರೀತಿಯ ಬೈಕ್‌ಜೊತೆ ನಟನನ್ನು ಭೇಟಿಯಾದ ಅಭಿಮಾನಿ: ಆದರೆ ಆತನ ಬೈಕ್‌ಗೆ ನಟ ಮಾಡಿದ್ದೇನು ಗೊತ್ತಾ?

ಸಾಮಾನ್ಯ ಯುವಕರಿಗೆ ಅಥವಾ ಯುವತಿಯರಿಗೆ ಬೈಕ್‌ಗಳ ಮೇಲೆ ಎಷ್ಟು ಕ್ರೇಜ್‌ ಇರುತ್ತದೋ, ಅಷ್ಟೇ ಸೆಲೆಬ್ರಿಟಿಗಳಿಗೂ ಇರುತ್ತದೆ. ನಮ್ಮ ನಡುವೆ ಹಲವು ನಟರು ಮತ್ತು ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳು ಎಷ್ಟೇ ದೊಡ್ಡವರಾದರೂ ಬೈಕ್‌ಗಳನ್ನು ಹೆಚ್ಚು ಹೆಚ್ಚಾಗಿ ಇಷ್ಟಪಡುತ್ತಾ ಹೋಗುವುದನ್ನು ನಾವು ಕಾಣಬಹುದು.

ಅಂತಹ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ನಟ ಜಾನ್ ಅಬ್ರಹಾಂ (John Abraham). ಜಾನ್‌ ಅಬ್ರಹಾಂ ಅವರು ಅವರ ಸೂಪರ್‌ ಬೈಕ್‌ ಕಲೆಕ್ಷನ್‌ಗೆ ಹೆಸರುವಾಸಿಯಾದವರು. ಈಗಾಗಲೇ ಹಲವಾರು ಬಾರಿ ನಾವೂ ಸೇರಿದಂತೆ ಇತರ ಮಾಧ್ಯಮಗಳು ಇವರ ಬಳಿ ಯಾವುದೆಲ್ಲಾ ಬೈಕ್‌ ಇದೆ ಎಂಬುದನ್ನು ಸಾಕಷ್ಟು ಬಾರಿ ವರದಿ ಮಾಡಿದ್ದಾರೆ. ಇದೀಗ ಜಾನ್‌ ಅಬ್ರಹಾಂ ಬೈಕ್‌ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

Bollywood actor John Abraham signs onto his fans Himalayan 411

ಅಭಿಮಾನಿಯೊಬ್ಬ ತನ್ನನ್ನು ಭೇಟಿಯಾಗಲು ಬಂದ ಸಂಧರ್ಭದಲ್ಲಿ ಅಭಿಮಾನಿಗೆ ಆತನ ಬೈಕ್‌ ಮೇಲೆಯೇ ಆಟೋಗ್ರಾಫ್‌ ನೀಡಿರುವ ಜಾನ್‌ ಅಬ್ರಹಾಂ, ಆತನ ಅಭಿಮಾನಿ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಕ್ಷಯ್‌ ಕೇದಾದ್ರಿ ಎಂಬ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಈ ಕುರಿತಾದ ವಿಡಿಯೋ ಶೇರ್‌ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಅಕ್ಷಯ್‌ ಕೇದಾದ್ರಿಯ ಹಿಮಾಲಯನ್‌ ೪೧೧ ಬೈಕ್‌ಗೆ ಜಾನ್‌ ಅಬ್ರಹಾಂ ಸಹಿ ಹಾಕುತ್ತಿರುವುದನ್ನು ಕಾಣಬಹುದು.

ಆನಂತರದ ಆತನ ಬೈಕ್‌ನಲ್ಲಿ ಕೂತು ಜೊತೆಗೆ ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೇಲೆ ತಿಳಿಸಿದಂತೆ ಜಾನ್ ಅಬ್ರಹಾಂಗೆ ಬೈಕ್‌ಗಳೆಂದರೆ ಬಹಳ ಪ್ರೀತಿ. ಈ ಹಿಂದೆಯೂ ಅಕ್ಷಯ್‌ ಕೇದಾದ್ರಿ, ಜಾನ್‌ ಅಬ್ರಹಾಂ ಅವರನ್ನು ಭೇಟಿಯಾಗಿ ಹಲವಾರು ಬೈಕ್‌ಗಳ ಸ್ಕೇಲ್‌ ಮಾಡೆಲ್ ಅನ್ನು ಕೊಟ್ಟಿರುವುದನ್ನು ನಾವು ವರದಿ ಮಾಡಿದ್ದೆವು.

Bollywood actor John Abraham signs onto his fans Himalayan 411

ಹಲವು ತಿಂಗಳ ಹಿಂದೆ, ಈ ವಿಡಿಯೋವನ್ನು ಅಭಿಮಾನಿ ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದರು. ಅಕ್ಷಯ್‌ ಕೇದಾದ್ರಿ ಎಂಬಾತ ಜಾನ್ ಅಬ್ರಹಾಂಗೆ ಸೂಪರ್‌ ಬೈಕ್‌ಗಳ ಆಕರ್ಷಕ ಮಿನಿಯೇಚರ್ ನೀಡಿದ್ದ. ಜಾನ್‌ ಅಬ್ರಹಾಂ ಅವರು ಇತ್ತೀಚೆಗಷ್ಟೇ ಹೊಸ ಮೂರನೇ ತಲೆಮಾರಿನ ಸುಜುಕಿ ಹಯಾಬುಸಾ ಬೈಕ್‌ ಅನ್ನು ಕೊಂಡುಕೊಂಡಿದ್ದರು.

ಸುಜುಕಿಯ ಮಾನ್ಸ್ಟರ್‌ ಆಗಿರುವ ಹಯಾಬುಸಾ ಬೈಕ್‌ನ ಮಿನಿಯೇಚರ್‌. ಜಾನ್‌ ಅಬ್ರಹಾಂ ಅವರಿಗೆ ಈ ಹಯಾಬುಸಾ ಬೈಕ್‌ನ ಮಿನಿಯೇಚರ್ ಕೊಂಚ ಅಧಿಕ ಸ್ಪೆಷಲ್‌ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಅಬ್ರಹಾಂ ಬಳಿಯು ಸಹ ಸುಜುಕಿಯ ಈ ಹಯಾಬುಸಾ ಬೈಕ್‌ ಇದೆ ಎಂಬುದು. ಇದನ್ನು ಜಾನ್‌ ಅಬ್ರಾಂ ಅವರಿಗಾಗಿಯೇ ಸ್ಪೆಷಲ್‌ ಆಗಿ ಆರ್ಡರ್‌ ಕೊಟ್ಟು ತರಿಸಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೆ ಮೇಲೆ ತಿಳಿಸಿದಂತೆ ಧೂಮ್‌ ಚಿತ್ರಗಳ ಮೂಲಕ ಪ್ರಸಿದ್ದಿಗೆ ಬಂದಿದ್ದ ಜಾನ್‌ ಅಬ್ರಹಾಂ, ನಿಜ ಜೀವನದಲ್ಲಿಯೂ ಆ ಚಿತ್ರದಲ್ಲಿನ ಪಾತ್ರದ ಒಂದು ಗುಣವಾದ ಸೂಪರ್‌ ಬೈಕ್‌ನ ಸಂಗ್ರಹವನ್ನು ಹೊಂದಿದ್ದಾರೆ. ಭಾರತದಲ್ಲಿ ಸುಜುಕಿಯ ಈ ಹಯಾಬುಸಾ ಬೈಕ್‌ಗೆ ಅದರದ್ದೇ ಆದ ಅಭಿಮಾನಿಗಳ ಬಳಗವಿದೆ.

ಇನ್ನು ಮಾಹಿತಿಗಳ ಪ್ರಕಾರ ಜಾನ್‌ ಅಬ್ರಹಾಂ ಅವರ ಬಳಿ ಯಮಹಾ V-MAX, ಕವಾಸಾಕಿ ನಿಂಜಾ ಝಡ್‌ಎಕ್ಸ್‌ 14-R, ಎಪ್ರಿಲಿಯಾ ಆರ್‌ಎಸ್‌ವಿ4 ಆರ್‌ಎಫ್‌, ಯಮಹಾ ಆರ್‌೧, BMW S1000RR ಮಾತ್ರವಲ್ಲದೇ ಇದೇ ರೀತಿಯ ಇನ್ನೂ ಹಲವಾರು ದುಬಾರಿ ಬೈಕ್‌ಗಳ ಸಂಗ್ರಹವಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Monday, May 13, 2024, 11:14 [IST]
English summary
Bollywood actor john abraham signs onto his fans himalayan 411
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+