India
YouTube

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಇಂದು ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಸ್ಟಾರ್ ನಟರ ಸಾಲಲ್ಲಿ ನಿಲ್ಲುವ ನಟ. ಈ ಹ್ಯಾಂಡ್‌ಸಮ್ ನಟ ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟ ಕಾರ್ತಿಕ್ ಅವರು ಅಭಿನಯದ ಜೊತೆಗೆ ಸರಳ ವ್ಯಕ್ತತ್ವಕ್ಕೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ನಟ ಕಾರ್ತಿಕ್ ಅವರ ಭೂಲ್ ಭುಲೈಯಾ-2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ಇದರ ವೇಳೆ ಕಾರ್ತಿಕ್ ಆರ್ಯನ್ ಇತ್ತೀಚೆಗೆ ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಖರೀದಿಸಿದ ಮೊದಲ ಕಾರಿನ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಾನು ಇಂಡಸ್ಟ್ರಿಗೆ ಬಂದಾಗ ನನ್ನ ಬಳಿ ಕಾರು ಇರಲಿಲ್ಲ. ಪ್ಯಾರ್ ಕಾ ಪಂಚನಾಮಾ, ಆಕಾಶ್ ವಾಣಿ ಮತ್ತು ನನ್ನ ನಾಲ್ಕನೇ ಅಥವಾ ಐದನೇ ಚಿತ್ರದ ನಂತರ ನಾನು ಮೊದಲ ಕಾರು ಖರೀದಿಸಿದೆ. ಅದು ದರ್ಡ್ ಹ್ಯಾಂಡ್ ಕಾರ್ ಎಂದು ನಟ ಹೇಳಿದ್ದಾರೆ. ಅದಕ್ಕೆ ಅಂದು ಸುಮಾರು ರೂ.60 ರಿಂದ 65 ಸಾವಿರ ಬೆಲೆ ಇತ್ತು. ಆ ಕಾರನ್ನು ಬಹಳ ಕಷ್ಟ ಪಟ್ಟು ಖರೀದಿಸಿದೆ ಎಂದು ಹೇಳಿದ್ದಾರೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಕಾರನ್ನು ಖರೀದಿಸುವ ಮೊದಲು, ಅವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದರು. ಇತರ ಬೈಕ್ ಪಡೆದು ರೆಡ್ ಕಾರ್ಪೆಟ್ ಕಾರ್ಯಕ್ರಮಗಳಿಗೆ ತೆರಳುತ್ತಿದ್ದರು. ಕಾರು ಖರೀದಿಸಿದ ಬಳಿಕ ಅದರ ಡೋರ್ ಕೆಲವು ಸಲ ಓಪನ್ ಆಗುತ್ತಿರಲಿಲ್ಲ. ನನಗೆ ಡ್ರೈವರ್ ಇರಲಿಲ್ಲ, ನಾನು ಓಡಿಸುತ್ತಿದ್ದೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ನಾನು ಕಾರನ್ನು ನಿರ್ದಿಷ್ಟವಾಗಿ ತೆಗೆದುಕೊಂಡಿದ್ದೇನೆ ಏಕೆಂದರೆ ನಾನು ಮೊದಲು ರೆಡ್ ಕಾರ್ಪೆಟ್ ಈವೆಂಟ್‌ಗಳಿಗೆ ಹೋಗಿ, ನಾನು ಆಟೋದಲ್ಲಿ ಹೋಗುತ್ತಿದ್ದೆ ಅಥವಾ ಯಾರೊಬ್ಬರಿಂದ ಲಿಫ್ಟ್ ತೆಗೆದುಕೊಳ್ಳುತ್ತಿದ್ದೆ ಅಥವಾ ಯಾರೊಂದಿಗಾದರೂ ಬೈಕ್‌ನಲ್ಲಿ ಹೋಗುತ್ತಿದ್ದೆ, "ಎಂದು ನಟ ಹೇಳಿದರು.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಅವರ ಕಾರಿನ ಡ್ರೈವರ್ ಡೋರ್ ಓಪನ್ ಮಾಡುವುದಕ್ಕೆ ಆಗುತ್ತಿರಲಿಲ್ಲ. ಆದ್ದರಿಂದ ಅವರು ಪ್ರಯಾಣಿಕರ ಡೊರ್ ಬದಿಯಿಂದ ಹೊರಬರುತ್ತಿದ್ದರು. "ಅದು ಏನು ಎಂದು ನನಗೆ ತಿಳಿದಿರಲಿಲ್ಲ, ನಾನು ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ಡ್ರೈವರ್ ಸೀಟಿನಲ್ಲಿ ಮಳೆ ಬಿದ್ದಾಗ ಸೋರಿಕೆ ಆಗುತ್ತಿತ್ತು. ಆದರೆ ನಾನು ಅದೇ ಕಾರನ್ನು ಬಳಸುತ್ತಿದ್ದೆ ಎಂದು ಹೇಳಿದ್ದಾರೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಇನ್ನು ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಅವರ ಇತ್ತೀಚಿನ ಚಿತ್ರ ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ವಿಯನ್ನು ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಭೂಲ್ ಭುಲೈಯಾ-2 ಯಶಸ್ಸಿನ ಬಳಿಕ ನಿರ್ಮಾಪಕ ಭುಷಣ್ ಕುಮಾರ್ ಹೀರೋ ಕಾರ್ತಿರ್‌ಗೆ ದುಬಾರಿ ಬೆಲೆಯ ಕಾರ್ ಅನ್ನು ಗಿಫ್ಟ್ ಇತ್ತೀಚೆಗೆ ನೀಡಿದ್ದರು. ಇದು ಮೆಕ್ಲಾರೆನ್ ಜಿಟಿ, ಐಷಾರಾಮಿ ಸ್ಪೋರ್ಟ್ಸ್ ಕಾರ್ ಆಗಿದೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ವಿಶೇಷ ಎಂದರೆ ಈ ಕಾರನ್ನು ಹೊಂದಿದ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆ ಕೂಡ ಕಾರ್ತಿಕ್ ಅವರಿಗೆ ಸಲ್ಲುತ್ತದೆ. ಭೂಷಣ್ ಕುಮಾರ್ ಮತ್ತು ಕಾರ್ತಿಕ್ ಸೇರಿ ಹೊಸ ಕಾರಿನ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಈ ಚಿತ್ರವು ಸಖತ್ ವೈರಲ್ ಆಗಿದೆ. ಕಾರ್ತಿಕ್ ಅವರ ಈ ಹೊಸ ಕಾರು ಕ್ಲಾಸಿಕ್ ಆರೆಂಜ್ ಬಣ್ಣವನ್ನು ಹೊಂದಿದೆ. ಈ ಕಾರಿನ ವ್ಹೀಲ್ ಗಳು ಗ್ಲೋಸ್ ಬ್ಲ್ಯಾಕ್‌ ಬಣ್ಣ ಮತ್ತು ಅಜೋರ್ಸ್ ಕ್ಯಾಲಿಪರ್‌ಗಳಿವೆ. ಭಾರತದಲ್ಲಿ ಮೆಕ್ಲಾರೆನ್ ಕಾರುಗಳ ಹೆಚ್ಚುತ್ತಿರುವ ಜನಪ್ರಿಯತೆಯ ನಂತರ, ಬ್ರಿಟಿಷ್ ತಯಾರಕರು ಕಳೆದ ವರ್ಷ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರು. ಮೆಕ್ಲಾರೆನ್ ಜಿಟಿ ತಯಾರಕರ ಸರಣಿಯಿಂದ ಎಂಟ್ರಿ ಮಟ್ಟದ ಲೆವೆಲ್ ಕಾರ್ ಆಗಿದೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಮೆಕ್ಲಾರೆನ್ ಜಿಟಿ ಕಾರಿನ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.3.72 ಕೋಟಿಯಾಗಿದೆ. ಇದು ಯಾವುದೇ ಕಸ್ಟಮೈಸೇಶನ್ ಆಯ್ಕೆಯಿಲ್ಲದೆ ಇದು ಕಾರಿನ ಮೂಲ ಬೆಲೆಯಾಗಿದೆ. ಆದರೆ ಮೆಕ್ಲಾರೆನ್ ಜಿಟಿ ಆಡ್-ಆನ್ ಪ್ಯಾಕ್ ಅನ್ನು ನೀಡುತ್ತದೆ. ಇದರ ಬೆಲೆ ರೂ.29.77 ಲಕ್ಷವಾಗಿದೆ. ಇದರಲ್ಲಿ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ಕ್ಯಾಮೆರಾ, ವೆಹಿಕಲ್ ಲಿಫ್ಟ್ ಮತ್ತು ಹೆಚ್ಚಿನದನ್ನು ಹೊಂದಿರುತ್ತದೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಇದು ಎಂಟ್ರಿ-ಲೆವೆಲ್ ಆಗಿದ್ದರೂ ಸಹ, ಮೆಕ್ಲಾರೆನ್ ಜಿಟಿ ವಿ8 ಎಂಜಿನ್ ಅನ್ನು ಪಡೆಯುತ್ತದೆ. ಮೆಕ್ಲಾರೆನ್ ಜಿಟಿ ಟ್ವಿನ್-ಟರ್ಬೋಚಾರ್ಜರ್‌ಗಳೊಂದಿಗೆ 4.0-ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತದೆ. ಈ ಎಂಜಿನ್ 611 ಬಿಹೆಚ್‍ಪಿ ಪವರ್ ಮತ್ತು 630 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಈ ಕಾರು 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. ಈ ಕಾರಿನ ಟಾಪ್ ಸ್ಪೀಡ್ 326 ಕಿಮೀಗೆ ಸೀಮಿತಗೊಳಿಸಿದೆ.ಇದು ಭಾರತಕ್ಕೆ ಬಂದ ಮೊದಲ ಮೆಕ್ಲಾರೆನ್ ಜಿಟಿ. ಇದಕ್ಕೂ ಮೊದಲು ಭಾರತದ ರಸ್ತೆಗಳಲ್ಲಿ ಮೆಕ್‌ಲಾರೆನ್ 720S ಮತ್ತು 570S ಮಾತ್ರ ಕಾಣಿಸಿಕೊಂಡಿತ್ತು. ಮೆಕ್ಲಾರೆನ್ ಜಿಟಿ ಭಾರತೀಯ ಮಾರುಕಟ್ಟೆಯಲ್ಲಿ ಫೆರಾರಿ ರೋಮಾ, ಪೋರ್ಷೆ 911 ಟರ್ಬೊ ಎಸ್ ಮತ್ತು ಬೆಂಟ್ಲಿ ಕಾಂಟಿನೆಂಟಲ್ ಜಿಟಿಯಂತಹ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ನಟ ಕಾರ್ತಿಕ್ ಆರ್ಯನ್ ಈ ವರ್ಷ ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಕಳೆದ ವರ್ಷ ಖರೀದಿಸಿದ್ದರು. ಕಾರ್ತಿಕ್ ಆರ್ಯನ್‌ರವರು ಖರೀದಿಸಿರುವ ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯು ಕಪ್ಪು ಬಣ್ಣದಲ್ಲಿದ್ದು, ಆಕರ್ಷಕವಾಗಿ ಕಾಣುತ್ತದೆ. ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಹಾಗೂ ಹೆಚ್ಚಿನ ಸ್ಪೇಸ್ ಹೊಂದಿರುವ ಕಾರಣಕ್ಕೆ ವಿಶ್ವದಾದ್ಯಂತವಿರುವ ಗ್ರಾಹಕರು ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿ ಖರೀದಿಗೆ ಆದ್ಯತೆ ನೀಡುತ್ತಾರೆ. ಈ ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 850 ಎನ್‌ಎಂ ಹಾಗೂ 641 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಟರ್ ಆಗಿದೆ.

ಅಂದು ರೂ.60 ಸಾವಿರಕ್ಕೆ ಹಳೆಯ ಕಾರು ಖರೀದಿಸಿದ ನಟ ಇಂದು ಬಹುಕೋಟಿ ಬೆಲೆಯ ಕಾರುಗಳ ಒಡೆಯ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭೂಲ್ ಭುಲೈಯಾ-2 ಚಿತ್ರ ಯಶ್ವಸಿನ ಬಳಿಕ ನಿರ್ಮಾಪಕ ಭುಷಣ್ ಕುಮಾರ್ ಅವರು ಕಾರ್ತಿಕ್ ಆರ್ಯನ್ ಅವರಿಗೆ ಭಾರತದ ಮೊದಲ ಮೆಕ್ಲಾರೆನ್ ಜಿಟಿ ಐಷಾರಾಮಿ ಸ್ಪೋರ್ಟ್ಸ್ ಸೂಪರ್ ಕಾರ್ ಅನ್ನು ಗಿಫ್ಟ್ ಅನ್ನು ನೀಡಿದ್ದಾರೆ. ಭುಲೈಯಾ-2 ಚಿತ್ರಕ್ಕೆ ಅನೀಸ್ ಬಾಜ್ಮಿ ಆಕ್ಷನ್ ಕಟ್ ಹೇಳಿದರೆ, ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ಇದೀಗ ಭೂಲ್ ಭುಲೈಯಾ-2 ಸಿನಿಮಾ ಮೂಲಕ ಕಾರ್ತಿಕ್ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. ಅಭಿನಯ ಮಾತ್ರವಲ್ಲದೇ ಅವರ ಸರಳ ವ್ಯಕ್ತಿತ್ವ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿತ್ತು. ಕಾರ್ತಿಕ್ ಅಭಿಮಾನಿಗಳ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ಮೂಲಕ ಆಗಾಗ ಗಮನ ಸೆಳೆಯುತ್ತಿರುತ್ತಾರೆ.

Most Read Articles

Kannada
English summary
Bollywood actor kartik aaryan s first car was third hand details
Story first published: Thursday, July 21, 2022, 13:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X