ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ಸದ್ಯ ಭಾರತದ ಬಹುತೇಕ ಮನೆಗಳಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳಿವೆ. ಕೆಲವು ಮನೆಗಳಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮದೇ ಆದ ವಾಹನವನ್ನು ಹೊಂದಿದ್ದಾರೆ. ವಾಹನಗಳಿದ್ದರೆ ಪ್ರಯಾಣವು ಸುಲಭವಾಗುತ್ತದೆ.

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ಇಂದು ಬಹುತೇಕ ಜನರು ಎದುರಿಸುತ್ತಿರುವ ಸ್ಥೂಲಕಾಯದ ಸಮಸ್ಯೆಗೂ ವಾಹನಗಳೇ ಕಾರಣವೆಂದರೆ ತಪ್ಪಾಗಲಾರದು. ಈ ಮೊದಲು ಸೈಕಲ್ ಚಾಲನೆ ಮಾಡಲು ಹಿಂದೇಟು ಹಾಕುತ್ತಿದ್ದವರಿಗೂ ಸಹ ಈಗ ಸೈಕಲ್ ಗಳ ಮಹತ್ವದ ಬಗ್ಗೆ ಅರಿವು ಮೂಡಿದೆ.

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ಕರೋನಾ ವೈರಸ್ ನಂತರದ ದಿನಗಳಲ್ಲಿ ಸೈಕಲ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸೆಲೆಬ್ರಿಟಿಗಳೂ ಸಹ ಸೈಕಲ್ ಸವಾರಿಗೆ ಆದ್ಯತೆ ನೀಡುತ್ತಿದ್ದಾರೆ. ಈಗ ಜನಪ್ರಿಯ ನಟರೊಬ್ಬರು ಸಾರ್ವಜನಿಕ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ಬಾಲಿವುಡ್ ನಟ ರಣಬೀರ್ ಕಪೂರ್ ಕಳೆದ ಭಾನುವಾರ ತಮ್ಮ ಕೆಲವು ಸ್ನೇಹಿತರೊಂದಿಗೆ ಮುಂಬೈನ ರಸ್ತೆಗಳಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ. ವರದಿಗಳ ಪ್ರಕಾರ, ರಣಬೀರ್ ಕಪೂರ್ ಮುಂಬೈನ ಜುಹು ಸರ್ಕಲ್ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ.

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ರಣಬೀರ್ ಕಪೂರ್ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಸೈಕಲ್ ಸವಾರಿ ಮಾಡಿದ್ದಾರೆ. ಆದರೂ ಕೆಲವು ಅಭಿಮಾನಿಗಳು ಅವರನ್ನು ಗುರುತಿಸಿ ಅವರು ಸೈಕಲ್ ಮಾಡುತ್ತಿರುವುದನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ಜುಹು ಸರ್ಕಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಆದರೆ ಭಾನುವಾರ ಬೆಳಿಗ್ಗೆ ಆಗಿದ್ದರಿಂದ ರಣಬೀರ್ ಕಪೂರ್ ಸೈಕಲ್ ಮಾಡುವ ವೇಳೆಯಲ್ಲಿ ಸಂಚಾರ ದಟ್ಟಣೆ ಇರಲಿಲ್ಲ. ಸೈಕಲ್ ಚಾಲನೆ ಮಾಡುವಾಗ ರಣಬೀರ್ ಕಪೂರ್ ಹೆಲ್ಮೆಟ್ ಧರಿಸಿರಲಿಲ್ಲ.

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ಆದರೆ ಅವರ ಜೊತೆಯಲ್ಲಿದ್ದವರು ಹೆಲ್ಮೆಟ್ ಧರಿಸಿದ್ದರು. ಸೈಕಲ್ ಸವಾರಿಗೆಂದೇ ವಿಶೇಷವಾದ ಹೆಲ್ಮೆಟ್‌ಗಳನ್ನು ತಯಾರಿಸಲಾಗಿದೆ. ಬಹುತೇಕ ಸೈಕ್ಲಿಸ್ಟ್‌ಗಳು ಸೈಕಲ್ ಚಾಲನೆ ಮಾಡುವ ವೇಳೆಯಲ್ಲಿ ಈ ಹೆಲ್ಮೆಟ್ ಗಳನ್ನು ಧರಿಸಿರುತ್ತಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ರಣಬೀರ್ ಕಪೂರ್ ಸೈಕಲ್ ಚಾಲನೆ ಮಾಡುವಾಗ ತಮ್ಮ ಸ್ನೇಹಿತರು ತಮ್ಮೊಂದಿಗೆ ಬರುತ್ತಿದ್ದಾರೆಯೇ ಎಂಬುದನ್ನು ಹಲವು ಬಾರಿ ತಿರುಗಿ ನೋಡಿದ್ದಾರೆ. ರಣಬೀರ್ ಕಪೂರ್ ಸೈಕಲ್ ಚಾಲನೆ ಮಾಡುತ್ತಿರುವ ಚಿತ್ರಗಳನ್ನು ವೈರಲ್ ಭಯಾನಿರವರು ಶೇರ್ ಮಾಡಿದ್ದಾರೆ.

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ಸಾಕಷ್ಟು ಐಷಾರಾಮಿ ಕಾರುಗಳನ್ನು ಹೊಂದಿರುವ ರಣಬೀರ್ ಕಪೂರ್ ತಮ್ಮ ಫಿಟ್‌ನೆಸ್‌ಗಾಗಿ ಸೈಕಲ್ ಚಾಲನೆ ಮಾಡಿರಬಹುದು. ಇತರ ಬಾಲಿವುಡ್ ನಟರಂತೆ ರಣಬೀರ್ ಕಪೂರ್ ಸಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ರಣಬೀರ್ ಕಪೂರ್ ರೇಂಜ್ ರೋವರ್ ವೋಗ್, ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡಿಸ್ ಬೆಂಝ್ ಜಿ 63 ಎಎಂಜಿ, ಆಡಿ ಎ 8 ಎಲ್, ಆಡಿ ಆರ್ 8 ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಐಷಾರಾಮಿ ಕಾರು ಬಿಟ್ಟು ಸೈಕಲ್ ತುಳಿದ ನಟ

ರಣಬೀರ್ ಕಪೂರ್ ಅವರಂತೆಯೇ ಹಲವು ಬಾಲಿವುಡ್ ನಟ, ನಟಿಯರು ಫಿಟ್‌ನೆಸ್‌ಗಾಗಿ ಸೈಕಲ್ ಚಾಲನೆ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ.

Most Read Articles

Kannada
English summary
Bollywood actor Ranbir Kapoor seen with bicycle riding in mumbai street. Read in Kannada.
Story first published: Tuesday, October 13, 2020, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X