Just In
Don't Miss!
- News
Breaking; ತೈಲ ಕೊರತೆ, ಶ್ರೀಲಂಕಾದಲ್ಲಿ ವಾಹನ ಸಂಚಾರಕ್ಕೆ ಹೊಸ ನಿಯಮ
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Sports
ಕಿವೀಸ್ ವಿರುದ್ಧ ಮತ್ತೊಂದು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್: ನ್ಯೂಜಿಲೆಂಡ್ಗೆ ವೈಟ್ವಾಶ್ ಮುಖಭಂಗ
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ದುಬಾರಿ ಕಾರಿನೊಂದಿಗೆ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಶಾಹಿದ್ ಕಪೂರ್..
ಭಾರತೀಯ ಸಿನಿಮಾ ರಂಗದಲ್ಲಿ ಹಲವು ನಟ ನಟಿಯರಿಗೆ ಕಾರುಗಳ ಕ್ರೇಜ್ ಇದೆ. ಇದೇ ಕಾರಣಕ್ಕೆ ತಮ್ಮ ಹುಟ್ಟುಹಬ್ಬ ಅಥವ ಇತರೆ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿರುವ ಐಷಾರಾಮಿ ಕಾರಗಳನ್ನು ಖರೀದಿಸುತ್ತಿರುತ್ತಾರೆ. ಇದೀಗ ಬಾಲಿವುಡ್ ಖ್ಯಾತ ನಟ ಶಾಹಿದ್ ಕಪೂರ್ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಹೊಸ ಕಾರನ್ನು ಖರೀದಿಸಿದ್ದಾರೆ.

41ನೇ ವಸಂತಕ್ಕೆ ಕಾಲಿಟ್ಟ ನಟ ಶಾಹಿದ್ ಕಪೂರ್ ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ದುಬಾರಿ ಕಾರಿನೊಂದಿಗೆ ಆಚರಿಸಿಕೊಂಡಿದ್ದಾರೆ. ಈ ನಟ ಹೊಸದಾಗಿ ಖರೀದಿಸಿದ ಕಾರಿನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳುವುದಾದರೆ. ನಟ ಶಾಹಿದ್ ಕಪೂರ್ ಅವರು ಮರ್ಸಿಡಿಸ್ ಮೇಬ್ಯಾಕ್ ಎಸ್580 ಅನ್ನು ಖರೀದಿಸಿದ್ದಾರೆ.

ಭಾರತದಲ್ಲಿ ಈ ಐಷಾರಾಮಿ ಕಾರನ ಆನ್-ರೋಡ್ ಬೆಲೆ ರೂ. 3.79 ಕೋಟಿ ಇದೆ. ಇಂತಹ ದುಬಾರಿ ಐಷಾರಾಮಿ ಕಾರನ್ನು ಫೆಬ್ರವರಿ 28ರಂದು ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಾಜ್ ಭುತ್ ಡೆಲಿವರಿ ಪಡೆದಿದ್ದಾರೆ. ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರನ್ನು ಕಿಂಗ್ ಆಫ್ ಲಕ್ಸೂರಿ (ಐಷಾರಾಮಿ ಕಾರುಗಳ ರಾಜ) ಅಂತಲೂ ಕರಿಯುತ್ತಾರೆ. ಹಾಗಾಗಿಯೇ ಈ ಕಾರನ್ನು ಸಿನಿಮಾ ತಾರೆಗಳಿಂದ ಹಿಡಿದು ಪ್ರಮುಖ ಕೈಗಾರಿಕೋದ್ಯಮಿಗಳವರೆಗೆ ಹಲವರು ಖರೀದಿಸಿದ್ದಾರೆ. ಶಾಹಿದ್ ಕಪೂರ್ ಅವರ ಬಳಿ ಮತ್ತೊಂದು ಎಸ್-ಕ್ಲಾಸ್ ಕಾರು ಸಹ ಬಳಕೆಯಲ್ಲಿದೆ. ಇದು ಹಿಂದಿನ ಪೀಳಿಗೆಯ ಆವೃತ್ತಿಯಾಗಿದೆ.

ಇದು ಎಎಂಜಿ ಕಿಟ್‌ನ ಕಾರಾಗಿದ್ದು, ತುಂಬಾ ಸ್ಪೋರ್ಟಿ ಲುಕ್‌ನಲ್ಲಿ ಕಾಣುತ್ತದೆ. ಈ ವಾಹನವು 3.0 ವಿ6 ಪೆಟ್ರೋಲ್ ಎಂಜಿನ್ ಆಗಿದೆ, ಇದು 329ಬಿಎಚ್‌ಪಿ ಮತ್ತು 480 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಬೆಲೆ ರೂ. 1.3 ಕೋಟಿ ಇದೆ. ಇದರ ಹೊರತಾಗಿಯೂ ಶಾಹಿದ್ ಹೊಸ ಪೀಳಿಗೆಯ ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.

ಇದಲ್ಲದೆ, ಅವರು ಇನ್ನೂ ಅನೇಕ ದುಬಾರಿ ಕಾರುಗಳನ್ನು ಬಳಸುತ್ತದರೂ, ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಅನ್ನು ಖರೀದಿಸಿರುವುದು ವಿಶೇಷ. ಮರ್ಸಿಡಿಸ್ ಕಳೆದ ವರ್ಷ ಈ ಮಾದರಿಯನ್ನು ದೇಶದಲ್ಲಿ ಮಾರಾಟಕ್ಕೆ ಬಿಡುಗಡೆ ಮಾಡಿತ್ತು. ಕಂಪನಿಯು ತನ್ನ ಉತ್ಪಾದನೆಯನ್ನು ಸ್ಥಳೀಕರಣಗೊಳಿಸಿದೆ ಎಂಬುದು ಗಮನಾರ್ಹವಾಗಿದೆ.

ಮೇಬ್ಯಾಕ್ ಎಸ್ 580 ಅನ್ನು ಸಕಾನ್ ಘಟಕದಲ್ಲಿ ತಯಾರಿಸಲಾಗುತ್ತದೆ. ಈ ಕಾರು 4.0 ಲೀಟರ್ ಟ್ವಿನ್ ಟರ್ಬೋಚಾರ್ಜ್ ವಿ8 ಪೆಟ್ರೋಲ್ ಎಂಜಿನ್ ಆಗಿದೆ. ಇದು ಗರಿಷ್ಠ 503 ಪಿಎಸ್ ಶಕ್ತಿ ಮತ್ತು 700 ಎನ್‌ಟಾರ್ಕ್ ಹೊಂದಿದೆ. ಇದಲ್ಲದೆ, ಈ ಕಾರಿನಲ್ಲಿ 48 ವೋಲ್ಟ್ ಹೈಬ್ರಿಡ್ ತಂತ್ರಜ್ಞಾನವಿದೆ.

ಈ ವ್ಯವಸ್ಥೆಯು ಅತ್ಯುತ್ತಮ ಇಂಧನ ಆರ್ಥಿಕತೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈ ಕಾರು 9-ಸ್ಪೀಡ್ ಸ್ವಯಂಚಾಲಿತ ಪ್ರಸರಣ ಸೌಲಭ್ಯವನ್ನು ಹೊಂದಿದೆ. ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಒಂದು ಉನ್ನತ ಐಷಾರಾಮಿ ವಾಹನ ಮಾತ್ರವಲ್ಲ, ಹೈ ಸ್ಪೀಡ್ ಕಾರು ಕೂಡ ಆಗಿದೆ. ಇದು ಗಂಟೆಗೆ 250 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಈ ಕಾರಿನಲ್ಲಿ ಬಹುಮುಖಿ ಚಾಲನಾ ವಿಧಾನಗಳೂ ಸಹ ಇವೆ.

ಈ ಮೂಲಕ ಪ್ರತಿಯೊಂದೂ ವಿಭಿನ್ನ ಚಲನಕೌಶಲ್ಯಗಳನ್ನು ಪ್ರದರ್ಶಿಸುತ್ತದೆ. ಕಾರಿನ ಒಳಾಂಗಣವನ್ನು ಪ್ರೀಮಿಯಂ ಗುಣಮಟ್ಟದ ವೈಶಿಷ್ಟ್ಯಗಳಿಂದ ಅಲಂಕರಿಸಲಾಗಿದೆ. ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಬಳಸಲಾಗಿದೆ. ಈ ಮೂಲಕ ಇದು ಟ್ಯಾಬ್ಲೆಟ್‌ಂತೆ ಕಾಣಲಿದ್ದು, 12.8 ಇಂಚು ಗಾತ್ರದಲ್ಲಿದೆ. ಈ ಕಾರಿನಲ್ಲಿ ಎಂಬುಎಕ್ಸ್ ವ್ಯವಸ್ಥೆಯನ್ನು ಸಹ ಒದಗಿಸಲಾಗಿದೆ.

12.3 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪರದೆಯನ್ನು 3ಡಿ ವಿಷನ್‌ನೊಂದಿಗೆ ಬಳಸಲಾಗಿದೆ. ಇದು ಚಾಲಕನಿಗೆ ಬಹಳ ಮುಖ್ಯ ಅಂಶವಾಗಿದೆ. ಅದೇ ರೀತಿ ಹಿಂದಿನ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುರಷ್ಯನ್ ಮಾಡಲು ಅನುಕೂಲವಾಗುವಂತೆ ಕಾರು ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಜೊತೆಗೆ ಕಾರು ಮಸಾಜ್ ಸೌಲಭ್ಯ, ಶಬ್ದ ನಿಯಂತ್ರಣ ಕನ್ನಡಿಗಳು, ಆಂಬಿಯೆಂಟ್ ಎಲೆಕ್ಟ್ರಿಕ್ ಲೈಟ್‌ಗಳು, ನಾಲ್ಕು ವಲಯ ಹವಾಮಾನ ನಿಯಂತ್ರಣ, ಹಿಂಭಾಗದಲ್ಲಿ ಟ್ರೇ ಮತ್ತು ಸಣ್ಣ ರೆಫ್ರಿಜರೇಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮೂಲಕ ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ವಾಹನವಾಗಿದೆ. ಇದೇ ಕಾರಣಕ್ಕೆ ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಹಲವರನ್ನು ಆಕರ್ಷಿಸುತ್ತದೆ.

ಇದಲ್ಲದೆ, ಶಾಹಿದ್ ಕಪೂರ್ ಜಿಎಲ್ ಕ್ಲಾಸ್, ಎಲ್‌ಎಲ್ ಕ್ಲಾಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಮತ್ತು ಪೋರ್ಷೆ ಕ್ಯಾನ್ಯನ್ ಜಿಟಿಎಸ್ ಸೇರಿದಂತೆ ಹಲವು ಕಾರುಗಳನ್ನು ಬಳಸಿದ್ದಾರೆ. ಅವರು ಹಾರ್ಲೆ ಡೆವಿಡನ್ ಫ್ಯಾಟ್ ಬಾಯ್ ನಂತಹ ದುಬಾರಿ ಬೈಕ್ ಅನ್ನು ಸಹ ಹೊಂದಿದ್ದಾರೆ.