ರೂ.3 ಕೋಟಿ ಮೌಲ್ಯದ ಮರ್ಸಿಡಿಸ್ ಕಾರು ಖರೀಸಿದ ನಟ ಶಾಹಿದ್ ಕಪೂರ್

ಬಾಲಿವುಡ್ (Bollywood) ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೂಪರ್ ಸ್ಟಾರ್‌‍ಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತ್ಯಂತ ದುಬಾರಿ ಕಾರುಗಳನ್ನು ಖರೀದಿಸಿ ಸುದ್ದಿಯಾಗುತ್ತಾರೆ.

ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ (Shahid Kapoor) ಮರ್ಸಿಡಿಸ್ ಮೇಬ್ಯಾಕ್ Gls600 ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಮರ್ಸಿಡಿಸ್ ಕಾರಿನ ಬೆಲೆಯು ರೂ.3 ಕೋಟಿಯಾಗಿದೆ. ನಟ ಶಾಹಿದ್ ಕಪೂರ್ ತಮ್ಮ ಹೊಸ ಐಷಾರಾಮಿ ಕಾರು ವಿತರಣೆ ಪಡೆಯುತ್ತಿರುವ ಚಿತ್ರ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿದೆ. ಈ ಐಷಾರಾಮಿ ಎಸ್‌ಯುವಿಯನ್ನು ಆಟೋ ಹ್ಯಾಂಗರ್ ಮರ್ಸಿಡಿಸ್ ಬೆಂಝ್‌ನಿಂದ ಖರೀದಿಸಲಾಗಿದೆ.

Shahid Kapoor

ಮರ್ಸಿಡಿಸ್-ಮೇಬ್ಯಾಕ್ GLS 600 (Mercedes-Maybach GLS600) ಇತ್ತೀಚೆಗೆ ಬಾಲಿವುಡ್ ನಟರಿಗೆ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಈ ಐಷಾರಾಮಿ ಮರ್ಸಿಡಿಸ್ ಕಾರನ್ನು ನೀತು ಕಪೂರ್, ಕೃತಿ ಸನೋನ್, ಆಯುಷ್ಮಾನ್ ಖುರಾನಾ ಮತ್ತು ರಣವೀರ್ ಸಿಂಗ್ ಅವರಂತಹ ನಟರು ಸಹ GLS60 ಅನ್ನು ಹೊಂದಿದ್ದಾರೆ. ಶಾಹಿದ್ ಕಪೂರ್ ತಮ್ಮ 41 ನೇ ಹುಟ್ಟುಹಬ್ಬದಂದು ಮರ್ಸಿಡಿಸ್-ಮೇಬ್ಯಾಕ್ S580 ಅನ್ನು ಖರೀದಿಸಿದ್ದಾರೆ.

ನಟ ಶಾಹಿದ್ ಕಪೂರ್ ಅವರ ಬಳಿ Mercedes-Benz S400, Mercedes-Benz GL-Class, Mercedes-Benz ML-Class, Land Rover Range Rover Vogue, Harley-Davidson Fatboy ಮತ್ತು Porsche Cayenne GTS ಎಂಬ ಐಷಾರಾಮಿ ಕಾರುಗಳನ್ನು ಹೊಂದಿದಾರೆ. ಇನ್ನು ನಟ ಹೊಸದಾಗಿ ಖರೀದಿಸಿದ ಮರ್ಸಿಡಿಸ್-ಮೇಬ್ಯಾಕ್ GLS 600 ಕಾರಿನ ಬಗ್ಗೆ ಹೇಳುವುದಾದರೆ, CBU ಮಾದರಿಗಳಾಗಿ ಭಾರತಕ್ಕೆ ಆಮದು ಮಾಡಿಕೊಳ್ಳುವುದರಿಂದ, ಭಾರತದ ಮಾರುಕಟ್ಟೆಗೆ ಬರುವ ವಾಹನದ ಕೆಲವೇ ಸೀಮಿತ ಯುನಿಟ್ ಗಳಾಗಿವೆ.

Shahid Kapoor Buys New Mercedes-Maybach GLS600

ಗ್ರಾಹಕರ ಬೇಡಿಕೆಯೆಂತೆ 4 ಸೀಟರ್ ಅಥವಾ 5 ಸೀಟರ್ ಮಾದರಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ Mercedes Maybach GLS600 ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇದು ಸುಧಾರಿತ ತಂತ್ರಜ್ಞಾನ ಮತ್ತು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿದೆ. ಈ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ.

ಈ ಕಾರಿನಲ್ಲಿ ಬಳಸಲಾಗಿರುವ ಲೆದರ್ ಕೂಡಾ ಮೇಬ್ಯಾಕ್ ಎಕ್ಸ್‌ಕ್ಲೂಸಿವ್ ನಪ್ಪಾ ಲೆದರ್ ಮಾದರಿಯಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಕೇವಲ ನಾಲ್ಕು ಆಸನಗಳ ಸೌಲಭ್ಯವಿದೆ. ವಿಸ್ತರಿತವಾಗಿ ಸೆಂಟರ್ ಕನ್ಸೊಲ್ ಹಿಂಬದಿಯ ಸವಾರಿಗೆ ಹೆಚ್ಚಿನ ಮಟ್ಟದ ಸವಾರಿ ಅನುಭವ ನೀಡಲು ಇದನ್ನು ಅಭಿವೃದ್ದಿಗೊಳಿಸಲಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಅಡಾಪ್ಟಿವ್ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್ಸ್, ಹಿಂತೆಗೆದುಕೊಳ್ಳಬಹುದಾದ ಡೋರ್ ಹ್ಯಾಂಡಲ್‌, ಫಿಂಗರ್‌ಪ್ರಿಂಟ್ ರೀಡರ್ ಮತ್ತು ಪನೋರಮಿಕ್ ಸನ್‌ರೂಫ್ ಹೊಂದಿದೆ

ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಹೊಂದಿದೆ. ಈ Mercedes Maybach GLS600 ಕಾರಿ ಹಿಂಭಾಗದಲ್ಲಿ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದೆ. ಈ ಐಷಾರಾಮಿ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 9 ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 542 ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ. ಈ ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 20, 2023, 14:51 [IST]
English summary
Bollywood actor shahid kapoor buys new mercedes maybach gls600 price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+