ಬಹುಕೋಟಿ ಬೆಲೆಯ 'ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್' ಕಾರು ಖರೀದಿಸಿದ ಜನಪ್ರಿಯ ನಟ
ಬಾಲಿವುಡ್ ನಟ ರಾಮ್ ಕಪೂರ್, ಅನೇಕ ಟಿವಿ ಸರಣಿಗಳು, ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಖ್ಯಾತಿಗಳಿಸಿದ್ದಾರೆ. ಅವರಿಗೆ ಕಾರುಗಳ ಕ್ರೇಜ್ ಸಹ ಹೆಚ್ಚಿದ್ದು, ಇತ್ತೀಚೆಗೆ ದುಬಾರಿ ಬೆಲೆಯ 'ಹೊಸ ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್' ಕಾರನ್ನು ಖರೀದಿಸಿದ್ದಾರೆ. ಇದು ಅವರ ಮೊದಲ ಸ್ಪೋರ್ಟ್ಸ್ ಕಾರ್ ಅಲ್ಲ. ಅವರ ಬಳಿ ಹಲವು ಕಾರುಗಳಿವೆ.
ಪೋರ್ಟೊಫಿನೊ ಫೆರಾರಿ ಅತ್ಯಂತ ದುಬಾರಿ ಬೆಲೆಯ ಕಾರಿನ ಮಾದರಿಯಾಗಿದೆ. ಈ ಕಾರು ಹೆಚ್ಚು ಶಕ್ತಿಶಾಲಿ ಮತ್ತು ನವೀಕೃತ ಆವೃತ್ತಿಯಾಗಿದೆ. ಈ ಚಿತ್ರಗಳಲ್ಲಿ ನಟ ರಾಮ್ ಕಪೂರ್ ತನ್ನ ಹೊಸ ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರಿನ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ಈ ಕಾರಿನ ಮಾದರಿಯಲ್ಲಿ 'M' ಎಂದರೆ Modificata (ಮಾರ್ಪಾಡು) ಫೆರಾರಿ ತನ್ನ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರಿನ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದೆ. ನಟ ಫೆರಾರಿಯ ಸಿಗ್ನೇಚರ್ ಬಣ್ಣವಾದ ರೆಡ್ ಅನ್ನು ಆರಿಸಿಕೊಂಡಿದ್ದಾರೆ.

ಫೆರಾರಿ ಪೋರ್ಟೊಫಿನೊ ಎಂ ಅನ್ನು ಸಾಮಾನ್ಯ ಆವೃತ್ತಿಗಳಿಗೆ ಹೋಲಿಸಿದಾಗ ಹೊರಭಾಗವನ್ನು ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ. ಬಂಪರ್ ಹೆಚ್ಚು ಅಗ್ರೆಸಿವ್ ಮತ್ತು ಸ್ಪೋರ್ಟಿಯಾಗಿ ಕಾಣುವಂತೆ ಮರುವಿನ್ಯಾಸಗೊಳಿಸಲಾಗಿದೆ. ಇದು ಗ್ರ್ಯಾಂಡ್ ಟೂರಿಂಗ್ ಸ್ಪೋರ್ಟ್ಸ್ ಕಾರ್ ಆಗಿದ್ದು, ಹಲವಾರು ಹೊಸ ವೈಶಿಷ್ಟಗಳನ್ನು ಹೊಂದಿದೆ. ಫೆರಾರಿ ಫುಲ್ 5-ಪೊಸಿಷನ್ ಮ್ಯಾನೆಟ್ಟಿನೊ ಡಯಲ್ ಅನ್ನು ಸಹ ನೀಡುತ್ತಿದೆ. ಇದು ಸಾಮಾನ್ಯವಾಗಿ ದುಬಾರಿ ಬೆಲೆಯ ಕಾರುಗಳಲ್ಲಿ ಕಂಡುಬರುತ್ತದೆ. ಇದರ ಹೊರತಾಗಿ ಕಾರು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು ಬೆಚ್ಚನೆಯ ಆಸನಗಳನ್ನು ಹೊಂದಿದೆ.
'ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್' ಹಿಂದಿನ ರೂಪಾಂತರಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಪೋರ್ಟೊಫಿನೊ ಎಂ 3.9 ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 620PS ಗರಿಷ್ಠ ಪವರ್ ಉತ್ಪಾದಿಸುತ್ತದೆ. ಇದು ಸಾಮಾನ್ಯ ಆವೃತ್ತಿಗಿಂತ 20 Ps ಹೆಚ್ಚು ಆಗಿದೆ. ಎಂಜಿನ್ ಅನ್ನು 8-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಎಂಜಿನ್ ಯುರೋ 6ಗೆ ಹೊಂದಿಕೊಳ್ಳುತ್ತದೆ. ಎಕ್ಸಾಸ್ಟ್ ಅನ್ನು ಸಹ ಎಂಜಿನ್ ಸೌಂಡ್ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಈ ಹೊಸ ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರ್ 3.4 ಸೆಕೆಂಡುಗಳಲ್ಲಿ 100kmph ವೇಗವನ್ನು ತಲುಪುವ ಸಾಮರ್ಥ್ಯವಿದ್ದು, ಇದೇ ವೇಳೆ ಕೇವಲ 9.8 ಸೆಕೆಂಡುಗಳಲ್ಲಿ 200kmph ವೇಗವನ್ನು ತುಂಬಾ ಸಲೀಸಾಗಿ ತಲುಪುತ್ತದೆ. ಈ ಕಾರ್ ಕನ್ವರ್ಟಿಬಲ್ ಹಾರ್ಡ್ ಟಾಪ್‌ನೊಂದಿಗೆ ಬರುತ್ತದೆ. ಜೊತೆಗೆ ಈ ಪೋರ್ಟೊಫಿನೊ ಕಾರನ್ನು ಎಂಟ್ರಿ ಲೆವೆಲ್ ಫೆರಾರಿ ಎಂದು ಕರೆಯಲಾಗುತ್ತದೆ. ಆದರೂ ಫೆರಾರಿ ಪೋರ್ಟೊಫಿನೊ ಎಂ ರೂಪಾಂತರವು ದುಬಾರಿ ಬೆಲೆಯನ್ನೇ ಹೊಂದಿದ್ದು, ಎಕ್ಸ್ ಶೋ ರೂಂ ಪ್ರಕಾರ, 4.04 ಕೋಟಿ ರೂಪಾಯಿ ಇದೆ.
ನಟ ರಾಮ್ ಕಪೂರ್ ಅವರಿಗೆ ಕಾರುಗಳು ಕ್ರೇಜ್ ಹೆಚ್ಚಿದೆ. ಆದರೆ, ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರ್ ಅವರ ಗ್ಯಾರೇಜ್‌ನಲ್ಲಿ ಮೊದಲ ಸ್ಪೋರ್ಟ್ಸ್ ಕಾರ್ ಅಲ್ಲ. ಅವರು ಐಷಾರಾಮಿ ಮತ್ತು ವಿದೇಶಿ ಕಾರುಗಳ ಉತ್ತಮ ಸಂಗ್ರಹವನ್ನು ಹೊಂದಿದ್ದಾರೆ. ಕಳೆದ ವರ್ಷ, ಅವರು ಹೊಸ ಪೋರ್ಷೆ 911 ಕ್ಯಾರೆರಾ ಎಸ್ ಸ್ಪೋರ್ಟ್ಸ್ ಕಾರನ್ನು ಖರೀದಿಸಿದರು. ಎಕ್ಸ್ ಶೋ ರೂಂ ಪ್ರಕಾರ, ಈ ಕಾರಿನ ಬೆಲೆ 1.80 ಕೋಟಿ ರೂ. ಇದೆ. ಪೋರ್ಷೆ ಹೊರತುಪಡಿಸಿ, ನಟನು BMW X5, Mercedes-Benz G63 AMG ಸೇರಿದಂತೆ ಹಲವು ಐಷಾರಾಮಿ ಕಾರುಗಳು ಮತ್ತು SUVಗಳನ್ನು ಹೊಂದಿದ್ದಾರೆ.
ಹಾರ್ಲೆ ಡೇವಿಡ್‌ಸನ್, ಬಿಎಂಡಬ್ಲ್ಯು ಮತ್ತು ಇಂಡಿಯನ್‌ನಂತಹ ಬ್ರಾಂಡ್‌ಗಳ ದುಬಾರಿ ಬೈಕ್‌ಗಳ ಕಲೆಕ್ಷನ್ ಸಹ ನಟ ರಾಮ್ ಕಪೂರ್ ಅವರ ಬಳಿ ಇದೆ. ಭಾರತದ ಶ್ರೀಮಂತ ಉದ್ಯಮಿಯಾಗಿರುವ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು, ಫೆರಾರಿ SF90 ಸ್ಟ್ರಾಡೇಲ್ ಸೂಪರ್ ಕಾರನ್ನು ಹೊಂದಿದ್ದಾರೆ. ಇತ್ತೀಚೆಗೆ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರು, ಆದಿಪುರುಶ್ ಚಿತ್ರದ ನಿರ್ದೇಶಕರಿಗೆ ದುಬಾರಿ ಬೆಲೆ ಹೊಂದಿರುವ ಸೆಕೆಂಡ್ ಹ್ಯಾಂಡ್ ಫೆರಾರಿ ಎಫ್ 8 ಟ್ರಿಬ್ಯೂಟೊ ಸೂಪರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications