ಬಾಲಿವುಡ್ ನಟಿಯರೇನೂ ಕಮ್ಮಿಯಿಲ್ಲ: ಎಂತಹ ಐಷಾರಾಮಿ ಕಾರುಗಳ ಒಡತಿಯರು ಗೋತ್ತಾ?
ಪ್ರತಿಯೊಬ್ಬರು ತಮ್ಮಿಷ್ಟದ ಕಾರುಗಳನ್ನು ಖರೀದಿಸಬೇಕೆಂದು ಬಯಸುತ್ತಾರೆ.. ಅದಕ್ಕೆ ಬಾಲಿವುಡ್ ನಟಿಯರೇನೂ ಕಮ್ಮಿಯಿಲ್ಲ ಎಂಬಂತೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಖರೀದಿಸುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಕೆಲ ನಟಿಯರು ಕಾರುಗಳನ್ನು ಉಡುಗೊರೆಯಾಗಿಯೂ ಪಡೆಯುತ್ತಾರೆ. ಇಲ್ಲಿ ಬಾಲಿವುಡ್ ಟಾಪ್ ಬೆಡಗಿಯರು ಹೊಂದಿರುವ ಕಾರುಗಳು ಯಾವುದೆಂದು ನೋಡೋಣ.
ಬಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವ ಕತ್ರಿನಾ ಕೈಫ್ ಕಳೆದ ವರ್ಷ ನಟ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದು, ದುಬಾರಿ ಐಷಾರಾಮಿ ಕಾರುಗಳ ಒಡತಿಯು ಆಗಿದ್ದಾರೆ. ವರದಿಗಳ ಪ್ರಕಾರ, ಬಾಲಿವುಡ್ ನಟ ಸಲ್ಮಾನ್ ಖಾನ್ ಕತ್ರಿನಾ ಕೈಫ್‌ಗೆ ವೈಟ್ ಕಲರ್ ರೇಂಜ್ ರೋವರ್ ವೋಗ್ ಕಾರನ್ನು ಗಿಫ್ಟ್ ನೀಡಿದ್ದರು. ಮುಂಬೈ ಮಹಾನಗರಿಯಲ್ಲಿ ಹಲವು ಬಾರಿ ಕತ್ರಿನಾ, ಈ ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ, ಆಡಿ Q7 ಕಾರನ್ನು ಆಕೆ ಖರೀದಿಸಿದ್ದರು. ಸದ್ಯ, ಅವರ ಬಳಿಯಿರುವ ರೇಂಜ್ ರೋವರ್ ವೋಗ್
SE ರೂಪಾಂತರ, ರೂ.2.72 ಕೋಟಿ ಆನ್-ರೋಡ್ ಬೆಲೆಯನ್ನು ಹೊಂದಿದೆ.

ಒಂದು ಮಗುವಿನ ತಾಯಾಗಿರುವ ಮತ್ತೊಬ್ಬ ಬಾಲಿವುಡ್ ಬೆಡಗಿ ಆಲಿಯಾ ಭಟ್ ಕೂಡ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಈ ಮೊದಲು ಆಡಿ ಕ್ಯೂ7 ಎಸ್‌ಯುವಿಯನ್ನು ಖರೀದಿಸಿದ್ದ ಆಕೆ, ಯಶಸ್ಸಿನ ಉತ್ತುಂಗ ತಲುಪುತ್ತಿದ್ದನಂತೆ ಬ್ರಿಟಿಷ್ ವಾಹನ ತಯಾರಕ ಲ್ಯಾಂಡ್ ರೋವರ್ ಒಡೆತನದ ರೇಂಜ್ ರೋವರ್ ಕಾರನ್ನು ಕೊಂಡುಕೊಂಡರು. ಇದರ ಬೆಲೆ ಸುಮಾರು ರೂ.2 ಕೋಟಿ ಇದೆ. 3.0 - ಲೀಟರ್ V6 ಡೀಸೆಲ್ ಎಂಜಿನ್ ಹೊಂದಿದ್ದು, 296 bhp ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಬರೋಬ್ಬರಿ 25ಕ್ಕೂ ಹೆಚ್ಚಿನ ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿ, ಸದ್ಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಡದಿಯಾಗಿರುವ ಖ್ಯಾತ ನಟಿ ಅನುಷ್ಕಾ ಶರ್ಮಾ ಕೂಡ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆಕೆ, ಮುಂಬೈನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಭಾಗವಹಿಸಲು ರೇಂಜ್ ರೋವರ್ ಕಾರನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿರುತ್ತಾರೆ. ಈ ಎಸ್‌ಯುವಿ 4.4-ಲೀಟರ್ V8 ಡೀಸೆಲ್ ಎಂಜಿನ್ ಹೊಂದಿದ್ದು, 355 Bhp ಗರಿಷ್ಠ ಪವರ್ ಹಾಗೂ 740 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಪತಿ ವಿರಾಟ್ ಕೂಡ ರೇಂಜ್ ರೋವರ್ ಕಾರಿನ ಮಾಲೀಕರಾಗಿದ್ದಾರೆ.

ಸರಿ ಸುಮಾರು ಎರಡು ದಶಕಗಳಿಗಿಂದ ಬಾಲಿವುಡ್ ಸಿನಿರಂಗದಲ್ಲಿ ಆಕ್ಟಿವ್ ಇರುವ ಮೂಲಕ ಅಭಿಮಾನಿಗಳು 'ಬೆಬೋ' ಎಂದು ಕರೆಯುವ ನಟಿ ಕರೀನಾ ಕಪೂರ್ ಕೂಡ ದುಬಾರಿಯನ್ನು ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಉಳಿದ ನಟಿಯರಿಗಿಂತ ಹೆಚ್ಚಿನ ಐಷಾರಾಮಿ ಕಾರುಗಳು ಕರೀನಾ ಒಡೆತನದಲ್ಲಿವೆ. ಆಕೆ, ಆಕರ್ಷಕ ಲುಕ್ ಹೊಂದಿರುವ ರೇಂಜ್ ರೋವರ್ ಸ್ಪೋರ್ಟ್ ಸೇರಿದಂತೆ ಈ ವರ್ಷಾರಂಭದಲ್ಲಿ ಖರೀದಿಸಿದ ಮರ್ಸಿಡಿಸ್ ಬೆಂಜ್ ಎಸ್ - ಕ್ಲಾಸ್ ಮತ್ತು ಜೀಪ್ ರಾಂಗ್ಲರ್ ಎಸ್‌ಯುವಿಗಳ ಮಾಲೀಕರಾಗಿದ್ದಾರೆ.
ವಯಸ್ಸು 50ರ ಸಮೀಪಕ್ಕೆ ಬಂದರೂ ಸದಾ ಚಿರಯುವತಿಯಂತೆ ಕಾಣುವ ಮಲೈಕಾ ಅರೋರಾ ಕೂಡ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆದರೆ, ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ನಟಿಯು ಪುಣೆಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮುಂಬೈನ ತಮ್ಮ ನಿವಾಸಕ್ಕೆ ಹಿಂದಿರುಗುವ ಅವರ ರೇಂಜ್ ರೋವರ್ ಅಪಘಾತಕ್ಕೀಡಾಗಿತ್ತು. ಆಕೆ ಅದೃಷ್ಟವಶಾತ್ ದೊಡ್ಡ ಮಟ್ಟದ ಅಪಾಯದಿಂದ ಪಾರಾಗಿದ್ದರು. ಸದ್ಯ ಮಲೈಕಾ ಅರೋರಾ ಹೊಸ ಹೊಚ್ಚ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ರಾರಾ ರುಕ್ಕಮ್ಮ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಐಷಾರಾಮಿ ರೇಂಜ್ ರೋವರ್ ಕಾರಿನ ಮಾಲೀಕರಾಗಿದ್ದಾರೆ. ಮತ್ತೊಬ್ಬ ಬಾಲಿವುಡ್ ನಟಿ ದಿಶಾ ಪಟಾನಿ ಹಲವು ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದು, ಅವರ ಗ್ಯಾರೇಜ್ ನಲ್ಲಿ ರೇಂಜ್ ರೋವರ್ ಸ್ಪೋರ್ಟ್, ಹೋಂಡಾ ಸಿವಿಕ್ ಮತ್ತು ಷೆವರ್ಲೆ ಕ್ರೂಜ್ ಕಾರುಗಳಿವೆ. ನಟ ಕಮಲ್ ಹಾಸನ್ ಪುತ್ರಿ, ಸೌತ್ ಸಿನಿರಂಗದ ಖ್ಯಾತ ನಟಿ ಶ್ರುತಿ ಹಾಸನ್ ಕೂಡ ರೇಂಜ್ ರೋವರ್ ಸ್ಪೋರ್ಟ್ ಒಡತಿಯಾಗಿದ್ದು, ಇದು 3.0-ಲೀಟರ್ V6 ಎಂಜಿನ್ ಹೊಂದಿದೆ.
ಒಟ್ಟಾರೆಯಾಗಿ ಸಾಮಾನ್ಯರಂತೆ ಬಾಲಿವುಡ್ ನಟಿಯರು ಕೂಡ ಕಾರಿನ ಕ್ರೇಜ್ ಹೊಂದಿದ್ದಾರೆ. ಇವರ ಬಳಿಯಿರುವ ಕಾರುಗಳು ಎಷ್ಟು ದುಬಾರಿ ಹಾಗೂ ಐಷಾರಾಮಿಯೋ ಸುರಕ್ಷತೆ ದೃಷ್ಟಿಯಿಂದಲ್ಲೂ ಅಷ್ಟೇ ಉತ್ತಮವಾಗಿರುತ್ತವೆ. ಜೊತೆಗೆ ಒಳ್ಳೆಯ ಕಾರ್ಯಕ್ಷಮತೆಯನ್ನು ಹೊಂದಿರುತ್ತವೆ. ಬಹುತೇಕ ನಟ - ನಟಿಯರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಅಂತಹ ವೈಶಿಷ್ಟ್ಯಗಳನ್ನು ಪಡೆದಿರುವ ಕಾರುಗಳನ್ನು ಖರೀದಿಸಲು ಬಯಸುತ್ತಾರೆ ಎಂದು ಹೇಳಬಹುದು. ಕಾರು, ಬೈಕ್ ಕುರಿತಂತೆ ಹೊಸ ಹೊಸ ವಿಚಾರಗಳಿಗೆ ಡ್ರೈವ್ ಸ್ಪಾರ್ಕ್ ಓದಿರಿ.


Click it and Unblock the Notifications








