Emraan Hashmi: 12 ಕೋಟಿಯ 'ರೋಲ್ಸ್ ರಾಯ್ಸ್ ಘೋಸ್ಟ್' ಖರೀದಿಸಿದ ನಟ ಇಮ್ರಾನ್ ಹಶ್ಮಿ, ಭಾರತದಲ್ಲೇ ದುಬಾರಿ ಕಾರು!
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಟನೆಯ ಸೂಪರ್ ಹಿಟ್ 'ಟೈಗರ್ 3' ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿ, ಇಮ್ರಾನ್ ಹಶ್ಮಿ (Emraan Hashmi) ಭಾರೀ ಜನಪ್ರಿಯತೆಯನ್ನು ಗಳಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ತಮ್ಮ ಮನೆಗೆ ತಂದಿದ್ದಾರೆ.
ನಟ ಇಮ್ರಾನ್ ಹಶ್ಮಿ ಅವರು ಗುರುವಾರ (ಜ.11) ಹೊಚ್ಚ ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಬ್ಲ್ಯಾಕ್ ಬ್ಯಾಡ್ಜ್ (Rolls Royce Ghost Black Badge) ಕಾರನ್ನು ಕೊಂಡುಕೊಂಡಿದ್ದಾರೆ. ಇದು ರೂ.12.25 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಭಾರತದಲ್ಲಿ ಖರೀದಿಗೆ ಸಿಗುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದೆನಿಸಿಕೊಂಡಿದೆ.

ನೂತನ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ ನಟ ಇಮ್ರಾನ್ ಹಶ್ಮಿ ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಾಪರಾಜಿಯೊಬ್ಬರು ಈ ದೃಶ್ಯಗಳನ್ನು ಸೆರೆಹಿಡಿದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಮ್ರಾನ್ ಹಶ್ಮಿ ಹೊಸ ಕಾರಿನಲ್ಲಿ ಕುಳಿತುಕೊಂಡು ಫೋನ್‌ನಲ್ಲಿ ಮಾತನಾಡುತ್ತಾ ಕ್ಯಾಮೆರಾಗಳಿಗೆ ಕೈ ಬೀಸುತ್ತಿರುವುದನ್ನು ನೋಡಬಹುದು.
ನಟ ಇಮ್ರಾನ್ ಹಶ್ಮಿ ಕೊನೆಯದಾಗಿ ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮನೀಶ್ ಶರ್ಮಾ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಕತ್ರಿನಾ ಕೈಫ್, ರಿದ್ಧಿ ಡೋಗ್ರಾ, ವಿಶಾಲ್ ಜೇತ್ವಾ, ಕುಮುದ್ ಮಿಶ್ರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ವಿಶೇಷವಾಗಿ ನಟ ಶಾರುಖ್ ಖಾನ್ (Shah Rukh Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ರೋಲ್ಸ್ ರಾಯ್ಸ್ ಘೋಸ್ಟ್ ಬ್ಲ್ಯಾಕ್ ಬ್ಯಾಡ್ಜ್ ಕಾರು ಬೆಲೆಗೆ ತಕ್ಕಂತೆ ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. ರೋಲ್ಸ್ ರಾಯ್ಸ್ ಫ್ಯಾಂಟಮ್‌ನಲ್ಲಿ ಬಳಕೆ ಮಾಡಿದ ಎಂಜಿನ್ ಅನ್ನು ಘೋಸ್ಟ್ ಕಾರಿನಲ್ಲಿಯೂ ಉಪಯೋಗಿಸಲಾಗಿದೆ. ಇದು 6.75 - ಲೀಟರ್ ಟ್ವಿನ್ ಟರ್ಬೊ ವಿ12 ಪೆಟ್ರೂಲ್ ಎಂಜಿನ್ ಪಡೆದಿದೆ.
ಅದಕ್ಕೆ ಅನುಗುಣವಾಗಿ ಗರಿಷ್ಠ 571 PS ಪವರ್ ಹಾಗೂ 850 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದ್ದು, 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಕೇವಲ 4.8 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದೆ. ಸುರಕ್ಷತೆಯ ಸಲುವಾಗಿ ಗರಿಷ್ಠ ವೇಗವನ್ನು 205 kmph ಗೆ ಸೀಮಿತಗೊಳಿಸಲಾಗಿದೆ.
ಈ ರೋಲ್ಸ್ ರಾಯ್ಸ್ ಘೋಸ್ಟ್ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. ಕ್ಯಾಬಿನ್ ಸಂಪೂರ್ಣ ಸೌಂಡ್ ಪ್ರೊಫ್ ಆಗಿದ್ದು, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 1300ಡಬ್ಲ್ಯೂ ಆಡಿಯೋ ಸಿಸ್ಟಮ್, ಹೆಡ್-ಅಪ್ ಡಿಸ್ಪ್ಲೇ, ಇಲ್ಯುಮಿನೇಟೆಡ್ ಡ್ಯಾಶ್‌ಬೋರ್ಡ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು, ನಟ ಇಮ್ರಾನ್ ಹಶ್ಮಿ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಗ್ಯಾರೇಜ್ ನಲ್ಲಿ ರೂ.3.22 ಕೋಟಿ ಬೆಲೆಯ ಲಂಬೋರ್ಗಿನಿ ಹುರಾಕನ್ (Lamborghini Huracan), ರೂ.1.70 ಕೋಟಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಎಸ್560 (Mercedes Maybach S560) ಸೇರಿದಂತೆ ಹಲವು ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








