ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಬಾಲಿವುಡ್ ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಆ್ಯಕ್ಷನ್​ ಸಿನಿಮಾಗಳ ಸರದಾರ ರೋಹಿತ್ ಶೆಟ್ಟಿ ಆ್ಯಕ್ಷನ್​ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರಿಯರ ಮೆಚ್ಚಿನ ನಿರ್ದೇಶಕ. ಗೋಲ್​ಮಾಲ್​, ಚೆನ್ನೈ ಎಕ್ಸ್‌ಪ್ರೆಸ್, ಆಲ್ ದಿ ಬೆಸ್ಟ್, ಸಿಂಗಮ್ ಸೀರೀಸ್, ಸೂರ್ಯವಂಶಿ, ದಿಲ್‌ವಾಲೆ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇನ್ನು ರೋಹಿತ್ ಶೆಟ್ಟಿ ಅವರು ಕೆಲ ಚಿತ್ರಗಳಿಗೆ ಅವರು ಬಂಡವಾಳ ಕೂಡ ಹೂಡಿದ್ದಾರೆ. ಬಾಲಿವುಡ್‍ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಕಾರುಗಳ ಕ್ರೇಜ್ ಅನ್ನು ಹೊಂದಿದ್ದಾರೆ. ಇವರ ಬಳಿ ಹಲವಾರು ಐಷಾರಾಮಿ ಕಾರುಗಳಿವೆ, ಈ ಐಷಾರಾಮಿ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ರೇಂಜ್ ರೋವರ್ ವೋಗ್

ರೇಂಜ್ ರೋವರ್ ವೋಗ್ ಅನ್ನು ಈಗ ಸ್ಥಗಿತಗೊಳಿಸಲಾಗಿದೆ ಆದರೆ ಇದು ಲ್ಯಾಂಡ್ ರೋವರ್‌ನ ಪ್ರಮುಖ ಎಸ್‍ಯುವಿಗಳಲ್ಲಿ ಒಂದಾಗಿತ್ತು, ರೋಹಿತ್ ಶೆಟ್ಟಿ ಅವರು ರೇಂಜ್ ರೋವರ್ ವೋಗ್ ಎಸ್‍ಯುವಿಯು 555" ಎಂಬ ವಿಶೇಷ ಸಂಖ್ಯೆಯ ಪ್ಲೇಟ್ ಅನ್ನು ಹೊಂದಿದೆ. ಇದು ನೀಲಿ ಬಣ್ಣವನ್ನು ಹೊಂದಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಈ ರೇಂಜ್ ರೋವರ್ ವೋಗ್ ಎಸ್‍ಯುವಿಯಲ್ಲಿ 4.4-ಲೀಟರ್ ವಿ8 ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 740 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಸುತ್ತದೆ. ಈ ಎಸ್‍ಯುವಿಯನ್ನು ಅವರು ಹೆಚ್ಚಾಗಿ ಪ್ರಯಾಣಕ್ಕಾಗಿ ಬಳಸುತ್ತಾರೆ. ಲ್ಯಾಂಡ್ ರೋವರ್ ಈಗ ಹೊಸ ಜನರೇಷನ್ ರೇಂಜ್ ರೋವರ್ ಅನ್ನು ಬಿಡುಗಡೆ ಮಾಡಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಲ್ಯಾಂಬೊರ್ಗಿನಿ ಉರುಸ್

ಉರುಸ್ ರೋಹಿತ್ ಶೆಟ್ಟಿ ಅವರು 2019 ರಲ್ಲಿ ಹಳದಿ ಬಣ್ಣದ ಉರುಸ್‌ನ ವಿತರಣೆಯನ್ನು ಪಡೆದುಕೊಂಡರು. ಈ ಲ್ಯಾಂಬೊರ್ಗಿನಿ ಉರುಸ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಉದ್ಯಮಿ ಮುಖೇಶ್ ಅಂಬಾನಿ, ನಟ ಕಾರ್ತಿಕ್ ಆರ್ಯನ್, ನಟ ಜೂನಿಯರ್ ಎನ್​ಟಿಆರ್ ಮತ್ತು ನಟ ರಣವೀರ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಲ್ಯಾಂಬೊರ್ಗಿನಿ ಉರುಸ್ ಕಾರನ್ನು ಹೊಂದಿದ್ದಾರೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಲ್ಯಾಂಬೊರ್ಗಿನಿ ಉರುಸ್ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 650 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉರುಸ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಪವರ್ ಫುಲ್ ಕಾರುಗಳಲ್ಲಿ ಒಂದಾಗಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಈ ಐಷಾರಾಮಿ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. ಲ್ಯಾಂಬೊರ್ಗಿನಿ ಉರುಸ್ ಸ್ಲಿಮ್ ಆಗಿರುವ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಉರುಸ್ ಕಾರಿನ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರ್ ನಿಂದ ಸ್ಫೂರ್ತಿ ಪಡೆದಿದೆ. ಈ ಎಸ್‌ಯುವಿಯಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಬಹುದು. ಉರುಸ್, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಆಗಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಫೋರ್ಡ್ ಮಸ್ಟಾಂಗ್

ರೋಹಿತ್ ಶೆಟ್ಟಿ ಫೋರ್ಡ್ ಮಸ್ಟಾಂಗ್ ಜಿಟಿ ಕಾರನ್ನು ಹೊಂದಿದ್ದಾರೆ. ರೋಹಿತ್ ಶೆಟ್ಟಿಯವರ ಮುಸ್ತಾಂಗ್ ಭಾರತದಲ್ಲಿ ಮಾರ್ಪಡಿಸಿದ ಮೊದಲ ಮಸ್ಟ್ಯಾಂಗ್‌ಗಳಲ್ಲಿ ಒಂದಾಗಿದೆ. . ಇದನ್ನು ಡಿ.ಎ. ವಿನ್ಯಾಸ ಮತ್ತು ಪರ್ಪಲ್ ಬಣ್ಣವನ್ನು ಹೊಂದಿದೆ. ಮುಂಭಾಗದಲ್ಲಿ ಬೃಹತ್ ಏರ್ ಸ್ಕೂಪ್ ಇದೆ, ಇದು ಎಂಜಿನ್‌ಗೆ ನೀಡಲಾಗುವ ಗಾಳಿಯ ಪ್ರಮಾಣವನ್ನು ಹೆಚ್ಚಿಸುತ್ತದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಮಸ್ಟಾಂಗ್ ಬಾಡಿ ಕಿಟ್ ಅನ್ನು ಸಹ ಸ್ಥಾಪಿಸಲಾಗಿದೆ ಮತ್ತು ಎಕ್ಸಾಸ್ಟ್ ಸಿಸ್ಟಮ್ ಅನ್ನು ಬೋರ್ಲಾಗೆ ಅಪ್‌ಗ್ರೇಡ್ ಮಾಡಲಾಗಿದೆ. ಯಾಂತ್ರಿಕವಾಗಿ, ಎಂಜಿನ್ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದ್ದರಿಂದ, ಇದು ಇನ್ನೂ 5.0-ಲೀಟರ್ ನ್ಯಾಚುರಲ್ ಆಸ್ಪೈರಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 395 ಬಿಹೆಚ್‍ಪಿ ಪವರ್ ಮತ್ತು 515 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಬಿಎಂಡಬ್ಲ್ಯು 7 ಸೀರಿಸ್

ರೋಹಿತ್ ಶೆಟ್ಟಿಯ ದೈನಂದಿನ ಪ್ರಯಾಣಿಕ್ಕೆ ಈ ಬಿಎಂಡಬ್ಲ್ಯು 7 ಸೀರಿಸ್ ಕಾರನ್ನು ಬಳಸುತ್ತಾರೆ. ಈ ಐಷಾರಾಮಿ ಸೆಡಾನ್ ಬಿಳಿ ಬಣ್ಣವನ್ನು ಹೊಂದಿದೆ. ನಾವು ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್‌ನಲ್ಲಿ ನೋಡಿದ "555" ನಂಬರ್ ಪ್ಲೇಟ್ ಅನ್ನು ಹೊಂದಿದೆ.

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಇರುವ ಐಷಾರಾಮಿ ಕಾರುಗಳಿವು..

ಹೊಸ ಮಸೆರಾಟಿ ಗ್ರ್ಯಾನ್ ಟುರಿಸ್ಮೊ

ಮಸೆರಾಟಿ ಕಾರುಗಳು ಭಾರತೀಯ ರಸ್ತೆಗಳಲ್ಲಿ ಕಾಣುವುದು ತೀರಾ ಅಪರೂಪ. ರೋಹಿತ್ ಶೆಟ್ಟಿ ಬಿಳಿ ಬಣ್ಣದ ಹೊಸ ಮಸೆರಾಟಿ ಗ್ರ್ಯಾನ್ ಟುರಿಸ್ಮೊ ಕಾರನ್ನು ಹೊಂದಿದ್ದಾರೆ. ಅವರು ಅದನ್ನು 2018 ರಲ್ಲಿ ಖರೀದಿಸಿದರು. ಸ್ಪೋರ್ಟ್ಸ್ ಟೂರರ್ 4.7-ಲೀಟರ್ ವಿ8 ಎಂಜಿನ್‌ ಅನ್ನು ಹೊಂದಿದೆ, ಈ ಎಂಜಿನ್ 453 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Bollywood film director rohit shetty and his luxury cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X