ಜನಪ್ರಿಯ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಬಳಸುತ್ತಿದ್ದ ಐಷಾರಾಮಿ ಕಾರುಗಳಿವು!
ಜನಪ್ರಿಯ ಭಾರತೀಯ ಗಾಯಕ ಮತ್ತು ಕೆಕೆ ಎಂದೇ ಜನಪ್ರಿಯರಾಗಿದ್ದ 'ಕೃಷ್ಣಕುಮಾರ್ ಕುನ್ನತ್' ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ. ಅವರ ಮರಣಕ್ಕೂ ಮುನ್ನ ಮೇ 30, 2022 ರಂದು (ಮಂಗಳವಾರ) ಕೊಲ್ಕತ್ತಾದ ನರ್ಜುಲ್ ಮಂಚದಲ್ಲಿ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ಭಾಗವಹಿಸಿದ್ದರು.

ನಂತರ ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿದ ಕೆಲವೇ ನಿಮಿಷಗಳಲ್ಲಿ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಕೆಕೆ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು. ಕೆಕೆ ಅವರ ಸಾವಿನ ಸುದ್ಧಿ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ನೀಡಿದೆ.

ಕೃಷ್ಣ ಕುಮಾರ್ ಕುನ್ನತ್ ಅವರು ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಬೆಂಗಾಲಿ, ಅಸ್ಸಾಮಿ ಮತ್ತು ಗುಜರಾತಿ ಭಾಷೆಗಳಲ್ಲಿ ಹಾಡಿ ಮಿಂಚಿದ್ದಾರೆ. ಹಾಡುಗಳನ್ನು ಹಾಡುವುದರಲ್ಲಿ ಅತ್ಯುತ್ತಮ ಗಾಯಕ ಎಂದು ಹೆಸರು ಗಳಿಸಿರುವ ಕೆಕೆ ಅವರು ಕಾರುಗಳ ಪ್ರೇಮಿಯೂ ಹೌದು.. ಹಾಗಾದರೆ ಈ ಲೇಖನದಲ್ಲಿ ಕೆಕೆ ಹೊಂದಿರುವ ಕಾರುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.

ಕೃಷ್ಣ ಕುಮಾರ್ ಕುನ್ನತ್ ಅವರು ಜೀಪ್‌ನ ಚೆರೋಕೀ, ಮರ್ಸಿಡಿಸ್-ಬೆನ್ಜ್‌ನ ಎ-ಕ್ಲಾಸ್ ಮತ್ತು ಆಡಿ ಆರ್‌ಎಸ್ 5 ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಕೆಕೆ ಇತ್ತೀಚೆಗೆ ಆಡಿ ಆರ್ಎಸ್5 ಕಾರನ್ನು ಖರೀದಿಸಿದ್ದರು.

ಆಡಿ RS5:
ಜರ್ಮನ್ ಬ್ರಾಂಡ್ ಆಡಿಯ RS5 ಬೆಲೆ ರೂ. 1.04 ಕೋಟಿ (ಎಕ್ಸ್ ಶೋ ರೂಂ)ರೂ. ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಸುಧಾರಿತ ವೈಶಿಷ್ಟ್ಯಗಳು ಮತ್ತು ಸಲಕರಣೆಗಳನ್ನು ಹೊಂದಿರುವ ಈ ಐಷಾರಾಮಿ ಕಾರು ವಾಹನ ಬಳಕೆದಾರರಿಗೆ ತುಂಬಾ ಸೂಕ್ತವಾಗಿದೆ.

RS5 ಸ್ಪೋರ್ಟ್‌ಬ್ಯಾಕ್ V6 2.9-ಲೀಟರ್ TFSI ಟ್ವಿನ್-ಟರ್ಬೊ ಎಂಜಿನ್‌ನಿಂದ ಚಾಲಿತವಾಗಿದೆ. ಎಂಜಿನ್ 6,700rpm ನಲ್ಲಿ 443bhp ಪವರ್ ಮತ್ತು 5,000rpm ನಲ್ಲಿ 600Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಸೆಲ್ಫ್-ಲಾಕಿಂಗ್ ಸೆಂಟರ್ ಡಿಫರೆನ್ಷಿಯಲ್‌ನೊಂದಿಗೆ ಬ್ರ್ಯಾಂಡ್‌ನ ಕ್ವಾಟ್ರೊ ಶಾಶ್ವತ ಆಲ್-ವೀಲ್ ಡ್ರೈವ್ ಮೂಲಕ ಪವರ್ ಅನ್ನು ನಾಲ್ಕು ಚಕ್ರಗಳಿಗೆ ಹೊಂದಿಸಲಾಗಿದೆ. ಸೆಡಾನ್ ಅನ್ನು ಆಡಿ ಡ್ರೈವ್ ಸೆಲೆಕ್ಟ್, ಆರ್‌ಎಸ್ ಸ್ಪೋರ್ಟ್ಸ್ ಸಸ್ಪೆನ್ಷನ್ ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಆರ್‌ಎಸ್ ಸ್ಟೀಲ್ ಬ್ರೇಕ್‌ಗಳನ್ನು ಸಹ ನೀಡಲಾಗಿದೆ.

RS5 ಸ್ಪೋರ್ಟ್‌ಬ್ಯಾಕ್ ಅದ್ಭುತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇವುಗಳಲ್ಲಿ 6 ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಆಂಟಿ-ಥೆಫ್ಟ್ ವೀಲ್ ಬೋಲ್ಟ್‌ಗಳು, ಹೋಲ್ಡ್ ಅಸಿಸ್ಟ್, ಆಟೋ-ಡಿಮ್ಮಿಂಗ್ ರಿಯರ್ ವ್ಯೂ ಮಿರರ್, ಸ್ಟೆಬಿಲಿಟಿ ಕಂಟ್ರೋಲ್ ಮತ್ತು EBD ಜೊತೆಗೆ ABS ಸೇರಿವೆ. ಇವೆಲ್ಲವೂ ವಾಹನ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಜೀಪ್ ಗ್ರ್ಯಾಂಡ್ ಚೆರೋಕೀ:
ಕೆಕೆ ಒಡೆತನದ ಕಾರುಗಳಲ್ಲಿ ಜೀಪ್ ಕಂಪನಿಯ 'ಗ್ರ್ಯಾಂಡ್ ಚೆರೋಕೀ' ಒಂದು. ಇದರ ಬೆಲೆ ರೂ. 75 ಲಕ್ಷ (ಎಕ್ಸ್ ಶೋ ರೂಂ). ಈ ಕಾರಿನಲ್ಲಿ 'ಕೃಷ್ಣ ಕುಮಾರ್ ಕುನ್ನತ್' ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಸಹ ನೀಡುತ್ತದೆ. ಹಾಗಾಗಿ ಹೆಚ್ಚಿನ ಸೆಲೆಬ್ರಿಟಿಗಳು ಇದನ್ನು ಖರೀದಿಸುತ್ತಾರೆ.

ಜೀಪ್ ಗ್ರಾಂಡ್ ಚೆರೋಕೀ ಭಾರತದಲ್ಲಿ ಡೀಪ್ ಚೆರ್ರಿ ರೆಡ್ ಕ್ರಿಸ್ಟಲ್ ಪರ್ಲ್, ಬ್ರಿಲಿಯಂಟ್ ಬ್ಲ್ಯಾಕ್ ಕ್ರಿಸ್ಟಲ್ ಪರ್ಲ್, ಬ್ರೈಟ್ ವೈಟ್, ಟ್ರೂ ಬ್ಲೂ ಪರ್ಲ್, ಗ್ರಾನೈಟ್ ಕ್ರಿಸ್ಟಲ್ ಮತ್ತು ಬಿಲ್ಲೆಟ್ ಸಿಲ್ವರ್ ನಂತಹ 6 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ವರ್ಷದ ಫೆಬ್ರವರಿಯಲ್ಲಿ, ಕಂಪನಿಯು ಜೀಪ್ ಗ್ರಾಂಡ್ ಚೆರೋಕೀ 4xe ಅನ್ನು ಪರಿಚಯಿಸಿತು.

Mercedes-Benz A class:
ಕೆಕೆ ಅವರು ಜರ್ಮನ್ ಐಷಾರಾಮಿ ಕಾರು ತಯಾರಕ ಸಂಸ್ಥೆಯ Mercedes-Benz A class ಸೆಡಾನ್ ಅನ್ನು ಸಹ ಬಳಸುತ್ತಿದ್ದರು. ಇದರ ಬೆಲೆ ರೂ. 32.32 ಲಕ್ಷ (ಎಕ್ಸ್ ಶೋ ರೂಂ). ಕಂಪನಿಯು 2019 ರಲ್ಲಿ ಉತ್ಪಾದನೆಯನ್ನು ನಿಲ್ಲಿಸಿತು. ಆದಾಗ್ಯೂ ಇದು ಉತ್ತಮ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಎಷ್ಟೋ ಜನ ಈಗಲೂ ಈ ಕಾರನ್ನು ಬಳಸುತ್ತಿದ್ದಾರೆ.


Click it and Unblock the Notifications








