ಟ್ರಾಫಿಕ್‌ಗೆ ಹೆದರಿ ಐಷಾರಾಮಿ ಕಾರುಗಳನ್ನು ತೊರೆದ ಸೂಪರ್‌ ಸ್ಟಾರ್‌: ಪಾಪ ಕೊನೆಗೆ ಮೆಟ್ರೋನೆ ಗತಿ!

ಸದ್ಯಕ್ಕೆ ನಮ್ಮ ಬೆಂಗಳೂರಿನಲ್ಲಿರುವ ಟ್ರಾಫಿಕ್‌ಗೆ ಎಂತಹವರೂ ಸಹ ಸುಸ್ತಾಗುತ್ತಾರೆ. ಅದರಲ್ಲೂ ಪ್ರತಿ ದಿನ ಕೆಲಸಕ್ಕೆ ಹೋಗುವ ಮತ್ತು ಮುಗಿಸಿ ಬರುವ ಸಮಯಗಳಲ್ಲಂತೂ ಗಂಟೆ ಗಟ್ಟಲೆ ಟ್ರಾಫಿಕ್‌ನಲ್ಲಿ ಸುಸ್ತಾಗಿ ನಿಂತಿರಬೇಕಾಗುತ್ತದೆ. ನಮ್ಮ ದೇಶದಲ್ಲಿನ ಬಹುತೇಕ ಮಹಾನಗರಗಳ ಕಥೆಯಂತೂ ಇದಕ್ಕಿಂತ ಹೊರತಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಹೌದು, ಬೆಂಗಳೂರು ಮಾತ್ರವಲ್ಲ ದೇಶದ ಬಹಳಷ್ಟು ನಗರಗಳ ಪರಿಸ್ಥಿತಿ ಇದೇ ಆಗಿದೆ. ಭಾರತದ ಮಹಾ ನಗರಗಳಲ್ಲಿ ಒಂದಾದ ಮುಂಬೈ ಸಹ ಇದಕ್ಕೆ ಹೊರತಾಗಿಲ್ಲ. ಮುಂಬೈನ ಟ್ರಾಫಿಕ್‌ಗೆ ಬಳಲಿ ಬೆಂಡಾದ ಪ್ರಸಿದ್ದ ನಾಯಕ ನಟನೊಬ್ಬ ತನ್ನ ಐಷಾರಾಮಿ ಕಾರುಗಳನ್ನು ತೊರೆದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋದಲ್ಲಿ ಚಲಿಸಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

Bollywood Star Akshay Kumar Uses Metro To get Rid From Mumbai Traffic

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತನ್ನ ಐಷಾರಾಮಿ ಕಾರುಗಳನ್ನು ತೊರೆದು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಅಕ್ಷಯ್‌ ಕುಮಾರ್‌ ಬಳಿ ದುಬಾರಿ ಕಾರು ಮತ್ತು ಬೈಕ್‌ ಕಲೆಕ್ಷನ್‌ಗಳಿವೆ. ಆದರೆ ನಾನಾ, ನೀನಾ ಎಂದು ಸವಾಲು ಹಾಕಿದಂತಿರುವ ಮುಂಬೈ ಟ್ರಾಫಿಕ್‌ ಇಂತಹ ಪ್ರಸಿದ್ದ ನಟ ತನ್ನ ಸಂಚಾರಕ್ಕಾಗಿ ಮೆಟ್ರೋವನ್ನು ಅವಲಂಬಿಸುವಂತೆ ಮಾಡಿದೆ ಎಂದರೆ ನಂಬಲೇ ಬೇಕು.

ಮೆಟ್ರೋದಲ್ಲಿ ಅಕ್ಷಯ್‌ ಕುಮಾರ್‌ ಪ್ರಯಾಣ ಮಾಡುವಾಗ ಅಲ್ಲಿದ್ದ ಇತರ ಪ್ರಯಾಣಿಕರು ಈತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ಭಾರೀ ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನೆಟ್ಟಿಗರು ಮುಂಬೈ ಟ್ರಾಫಿಕ್‌ನ ಪರಿಸ್ಥಿತಿಯನ್ನು ಕಾಮೆಂಟ್‌ ಮೂಲಕ ವಿವರಿಸಿದ್ದಾರೆ. ಮಾಸ್ಕ್‌ ಮತ್ತು ಟೋಪಿ ಧರಿಸಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಅಕ್ಷಯ್‌ ಕುಮಾರ್‌ ಎಂದು ಗುರುತಿಸುವಲ್ಲಿ ಸಾರ್ವಜನಿಕರು ಸಫಲರಾಗಿದ್ದಾರೆ.

Bollywood Star Akshay Kumar Uses Metro To get Rid From Mumbai Traffic

ಇನ್ನು ಅಕ್ಷಯ್‌ ಕುಮಾರ್‌ ಬಳಿ ಯಾವುದೆಲ್ಲಾ ಕಾರುಗಳಿವೆ ಎಂದು ನೋಡುವುದಾದರೆ, ಮುಖ್ಯವಾದುದು ಅವರ ರೇಂಜ್‌ ರೋವರ್ ವೋಗ್‌. ಪೋರ್ಷೆ ಕೆಯನ್ ಗೆ ನೇರ ಎದುರಾಳಿಯಾಗಿರುವ ಕಾರು ರೇಂಜ್ ರೋವರ್ ವೋಗ್. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಲ್ಲಿ ಲಭ್ಯದ್ದು, ಟಾಪ್ ಎಂಡ್ ಪೆಟ್ರೋಲ್ ಮಾದರಿಯು 5 ಲೀಟರ್ ವಿ8 ಸೂಪರ್ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಪೋರ್ಷೆ ಕಯೆನಿ: ಕಳೆದ 15 ವರ್ಷಗಳಿಂದ ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಪೋರ್ಷೆ ಕಂಪನಿಯ ಅತೀ ಪ್ರಸಿದ್ದ ಕಾರು ಈ ಕಯೆನಿ. ಈ ಕಾರು ಮಾದರಿಯು 3.0-ಲೀಟರ್ ಟರ್ಬೋ ಡಿಸೇಲ್ ಎಂಜಿನ್ ಹೊಂದಿದ್ದು, 242ಬಿಎಚ್‌ಪಿ ಮತ್ತು 550ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Bollywood Star Akshay Kumar Uses Metro To get Rid From Mumbai Traffic

ಮರ್ಸಿಡಿಸ್ ಬೆಂಝ್ GLS: ಹೊಸ ಮರ್ಸಿಡಿಸ್ ಬೆಂಝ್ GLS ಎಸ್‍ಯುವಿಯಲ್ಲಿ 3.0-ಲೀಟರ್ ಆರು-ಸಿಲಿಂಡರ್ ಎಂಜಿನ್‌ಗಳನ್ನು ಮುಂದುವರಿಸುವ ನಿರೀಕ್ಷೆಯಿದೆ. ಈ ಪೆಟ್ರೋಲ್ ರೂಪಾಂತರ, GLS 450 4Matic, ಜೊತೆಗೆ GLS 400d 4ಮ್ಯಾಟಿಕ್ ಡೀಸೆಲ್ ಮಾದರಿಯು ವಿಶ್ವಾಸಾರ್ಹ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 4ಮ್ಯಾಟಿಕ್ AWD ಸಿಸ್ಟಂ ಅನ್ನು ಹೊಂದಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, January 12, 2024, 19:00 [IST]
English summary
Bollywood star akshay kumar uses metro to get rid of mumbai traffic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+