Viral video: ಬೆನ್ನಟ್ಟಿದ ಕಾರಿನವನಿಗೂ ಸಿಗಲಿಲ್ಲ ಬಾಲಕ... ಅಜ್ಜಿನ ಕೂರಿಸಿಕೊಂಡು ಏನ್ ಸ್ಪೀಡ್ ಅಂತೀರಾ...
ಯುವಕರಿಗೆ ದ್ವಿಚಕ್ರ ವಾಹನ ಅಂದ್ರೆ ಅದೇನೋ ಕ್ರೇಜ್, ಆದ್ರೆ ಬೈಕ್ ಓಡಿಸಲು ವಯಸ್ಸಿನ ಮಿತಿಯಿದೆ. ಇದನ್ನು ಮರೆತು ಪೋಷಕರು ಕೂಡ ಸಣ್ಣ ವಯಸ್ಸಿನಲ್ಲೇ ತಮ್ಮ ಮಕ್ಕಳಿಗೆ ವಾಹನಗಳನ್ನು ಕೊಟ್ಟು ಪ್ರೋತ್ಸಾಹಿಸುವುದು ದೊಡ್ಡ ಅಪರಾದ. ಈಗ ಕೂಡ ಸಣ್ಣ ಬಾಲಕ ವೃದ್ಧೆಯನ್ನು ಕೂರಿಸಿಕೊಂಡು ದ್ವಿಚಕ್ರ ವಾಹನ ಓಡಿಸಿರುವ Viral video ಹೆಚ್ಚು ವೀಕ್ಷಣೆಗಳನ್ನು ಗಳಿಸುತ್ತಿದೆ.
ವಿಡಿಯೋದಲ್ಲಿ ಕಾಣುವ ಬಾಲಕನಿಗೆ ಅಂದಾಜು 8-10 ವರ್ಷ ವಯಸ್ಸಿರಬಹುದು, ಈ ವಯಸ್ಸಿಗೆ ಟಿವಿಎಸ್ XL ಓಡಿಸುತ್ತಿರುವುದನ್ನು ನೋಡಬಹುದು. ಹಿಂಬದಿ ತನ್ನ ಅಜ್ಜಿಯನ್ನು ಕೂರಿಸಿಕೊಂಡು ತುಂಬಾ ವೇಗವಾಗಿ ಓಡಿಸುತ್ತಿದ್ದು, ಪಕ್ಕದಲ್ಲಿ ಬಂದ ಮತ್ತೊಂದು ವಾಹನದಲ್ಲಿನ ವ್ಯಕ್ತಿ ವಿಡಿಯೋ ಮಾಡಿದ್ದಾನೆ. ಇದು ಸಂಚಾರ ನಿಯಮಗಳ ಉಲ್ಲಂಘನೆಯಾಗಿದ್ದು, ಬಾಲಕನಿಗೆ ನಿಯಮಗಳ ಅರಿವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ತೀರಾ ಸಾಮಾನ್ಯವಾಗಿಬಿಟ್ಟಿವೆ. ಇದಕ್ಕೆ ಮುಖ್ಯ ಕಾರಣ ಸಂಚಾರ ನಿಯಮಗಳ ನಿರ್ಲಕ್ಷ್ಯವಾಗಿದೆ. ಅದರಲ್ಲೂ ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯು ರಸ್ತೆ ಅಪಘಾತಗಳ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋ ಮೊದಲಿಗೆ ತಮಾಷೆಯಾಗಿ ತೋರುತ್ತದೆಯಾದರೂ, ಹೆಲ್ಮೆಟ್ ಇಲ್ಲದೆ ಇಬ್ಬರು ಆ ವೇಗದಲ್ಲಿ ಹೋಗುವುದು ತುಂಬಾ ಅಪಾಯಕಾರಿ.
ಇದಲ್ಲದೆ, ಹಿಂದೆ ಕುಳಿತಿರುವ ವೃದ್ಧೆಗೆ ತನ್ನ ಅಪಾಯಕಾರಿ ಪರಿಸ್ಥಿತಿಯ ಬಗ್ಗೆಯೂ ತಿಳಿದಿರುವುದಿಲ್ಲ. ಆಕೆಗೆ ತನ್ನ ಗಮ್ಯ ಸ್ಥಳಕ್ಕೆ ಪ್ರಯಾಣಿಸುತ್ತಿರುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲದಂತೆ ಕಾಣುತ್ತಿದೆ. ಇದು ಹಳ್ಳಿಯೊಂದರ ರಸ್ತೆಯಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋ ಆಗಿರುವುದರಿಂದ ಯಾವುದೇ ಟ್ರಾಫಿಕ್ ಸಿಗ್ನಲ್‌ಗಳು, ಪೊಲೀಸರು ಅಥವಾ ಕ್ಯಾಮೆರಾಗಳು ಇಲ್ಲದಿರುವುದು ಅವರನ್ನು ಈ ನಿಯಮ ಉಲ್ಲಂಘನೆಗಳಿಗೆ ಪ್ರೋತ್ಸಾಹಿಸಿದೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಡಿಸೆಂಬರ್ 11, 2022 ರಂದು ಪೋಸ್ಟ್ ಮಾಡಲಾಗಿದೆ. ಈ ವರೆಗೆ ಬರೋಬ್ಬರಿ 1.24 ಕೋಟಿಗೂ ಹೆಚ್ಚು ವೀಕ್ಷಣೆಗಳು ಮತ್ತು 7.36 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಮಕ್ಕಳು ವಾಹನ ಚಲಾಯಿಸಲು ಪ್ರೋತ್ಸಾಹಿಸುವುದರ ಕುರಿತು ನಮಗೆ ತಿಳಿಯುತ್ತದೆ.
ಎಲ್ಲರೂ ಇದಕ್ಕೆ ಪ್ರೋತ್ಸಾಹಿಸಿಲ್ಲ, ಬದಲಿಗೆ ಒಂದಷ್ಟು ಮಂದಿ ಬಾಲಕ ದ್ವಿಚಕ್ರ ವಾಹನ ಚಲಾಯಿಸುವುದು ಸರಿಯೇ ಎಂದು ಕಾಮೆಂಟ್‌ಗಳ ವಿಭಾಗದಲ್ಲಿ ಚರ್ಚಿಸಿದ್ದಾರೆ. ಕೆಲವರು ಮಗು ಮತ್ತು ಅಜ್ಜಿ ಸುರಕ್ಷಿತವಾಗಿ ಮನೆಗೆ ತಲುಪಿದ್ದರೆ ಸಾಕು ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೇ ಬಾಲಕನ ಮೂಲವನ್ನು ತಿಳಿದು ಅವರ ಪೋಷಕರ ವಿರುದ್ಧ ದಂಡ ವಿಧಿಸಿ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ಏನೇ ಆಗಲಿ ಬಾಲಕ ಆ ರೀತಿ ವಾಹನ ಜಲಾಯಿಸುವುದು ನಿಯಮಗಳ ಉಲ್ಲಂಘನೆಯಾಗಿದೆ. ಅಲ್ಲದೇ ವಾಹನವನ್ನು ನಿಯಂತ್ರಿಸುವ ಸಾಮರ್ಥ್ಯ ಕೂಡ ಆ ಬಾಲಕಿನಿಗೆ ಇಲ್ಲ. ಇದು ಆತನಿಗೆ ಮಾತ್ರವಲ್ಲದೇ ಎದರು ಬರುವ ವಾಹಗಳಿಗೂ ಸಮಸ್ಯೆ ತಂದೊಡ್ಡಿ ಅಪಘಾತಗಳಿಗೆ ಕಾರಣವಾಗಬಹುದು. ಬಾಲಕನ ಈ ವಿಡಿಯೋ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications