ಮದುವೆ ಮಂಟಪಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಂದು ಪರಿಸರ ಪ್ರೇಮ ಮೆರೆದ ವಧು
ಭಾರತ ವೈವಿಧ್ಯಮಯ ಸಮುದಾಯ, ವಿಭಿನ್ನ ಸಂಪ್ರದಾಯ, ಸಂಸ್ಕತಿಯುಳ್ಳ ಭೂಮಿ. ಭಾರತದ ಅನೇಕ ಭಾಗಗಳಲ್ಲಿ ಮದುವೆ ಸಮಾರಂಭದಲ್ಲಿ ವರನು ಕುದುರೆ ಏರಿ ಬರುವುದನ್ನು ನಾವು ನೋಡಿದ್ದೇವೆ. ಆದರೆ ಈಗ ಭಾರತೀಯ ವಿವಾಹಗಳು ಸಂಪ್ರದಾಯ ಮತ್ತು ಆಧುನಿಕತೆಯ ಬೆಸುಗೆಯನ್ನು ಕಾಣುತ್ತಿವೆ. ನಾವು ಅಂತಹ ಒಂದು ಘಟನೆಯ ಬಗ್ಗೆ ಮಾತನಾಡಲು ಹೊರಟಿದ್ದೇವೆ.
ನಮ್ಮ ದೇಶದಲ್ಲಿ ಸಾಮಾನ್ಯವಾಗಿ ದಂಪತಿಗಳು ಮದುವೆಗೆ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಈಗ ತಮ್ಮ ಮದುವೆಯನ್ನು ಮತ್ತಷ್ಟು ಕಲರ್ ಫುಲ್ ಮಾಡಲು ವಿಭಿನ್ನ ರೀತಿಯಲ್ಲಿ ಮದುವೆ ಮಂಟಪಕ್ಕೆ ಬರುತ್ತಾರೆ. ಉತ್ತರ ಭಾರತದಲ್ಲಿ ಹೆಚ್ಚಾಗಿ ಕುದುರೆ ಏರಿ ವರ ಬರುತ್ತಾರೆ. ಆದರೆ ಕರ್ನಾಟಕದಲ್ಲಿ ಟ್ರೆಂಡ್ ಬೇರೆ. ಕುದುರೆಯ ಮೇಲೆ ತಮ್ಮ ವಿವಾಹ ಸಮಾರಂಭಕ್ಕೆ ಬರಲು ಬೇಡ ಎಂದು ಹೇಳುವ ಯುವ ಜೋಡಿಗಳು ತಮ್ಮ ವಿವಾಹ ಸಂಭ್ರಮವನ್ನು ನವೀನವಾಗಿಸಲು ಪ್ರಯತ್ನಿಸುತ್ತಾರೆ.

ಇದೇ ರೀತಿ ಬೆಂಗಳೂರಿನಲ್ಲಿ ವರನೊಬ್ಬ ತನ್ನ ಮದುವೆಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಆದರೆ ಮದುವೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಆಂಪಿಯರ್‌ನ ಹೊಸದಾಗಿ ಬಿಡುಗಡೆಯಾದ ನೆಕ್ಸಸ್ ಸ್ಕೂಟರ್ ಕೆಲವು ತಿಂಗಳ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿ ಪ್ರವಾಸಕ್ಕಾಗಿ ಬಳಿಸಿ ಸುದ್ದಿಯಾಗಿತ್ತು. ಜೊತೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತನ್ನನ್ನು ನೋಂದಾಯಿಸಿಕೊಂಡಿದೆ.
ವಿವಾಹ ಪ್ರಿ-ಫೋಟೋ ಶೂಟ್‌ಗಾಗಿ ಗೋವಾಗೆ ಭೇಟಿ ನೀಡಿದ್ದ ದಂಪತಿಗಳು ಆಂಪಿಯರ್ ನೆಕ್ಸಸ್ ಸ್ಕೂಟರ್‌ನೊಂದಿಗೆ ಮಿಂಚಿದರು. ಪರಿಸರ ಸ್ನೇಹಿ ವಾಹನದ ಆಕರ್ಷಕ ವಿನ್ಯಾಸದೊಂದಿಗೆ ಜನರನ್ನು ಸೆಳೆಯುತ್ತದೆ. ಮುಂದುವರೆದು, ಇತ್ತೀಚೆಗೆ ಉಡುಪಿಯಲ್ಲಿ ವಧು ಆಂಪಿಯರ್ ನೆಕ್ಸಸ್ ಸ್ಕೂಟರ್‌ನಲ್ಲಿ ಗ್ರ್ಯಾಂಡ್ ಎಂಟ್ರಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಸ್ಥಳದಲ್ಲಿ ಈ ನವೀನ ಪರಿಕಲ್ಪನೆಯನ್ನು ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.

ಮದುವೆ ಮನೆಗೆ ವರ, ವಧು ಆಗಮಿಸಿದ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಆಂಪಿಯರ್ ನೆಕ್ಸಸ್ ಎಂಬ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಇದು ಸಂಪೂರ್ಣ ಮೇಡ್ ಇನ್ ಇಂಡಿಯಾ ವಾಹನವಾಗಿದೆ. ಈ ಹೊಸ ಆಂಪಿಯರ್ ನೆಕ್ಸಸ್ (Ampere Nexus) ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.10 ಲಕ್ಷವಾಗಿದೆ.
ಈ ಆಂಪಿಯರ್ ನೆಕ್ಸಸ್ ಸ್ಕೂಟರ್, ಟ್ವಿನ್ ಸಸ್ಪೆಂಷನ್ ಹೊಂದಿರುವ ಮೊದಲ ಹೈಬ್ರಿಡ್ ಸ್ವಿಂಗ್ ಆರ್ಮ್ ಜೊತೆಗೆ ಬರುತ್ತದೆ. ಏರ್-ಕೂಲ್ ಆರ್ಕಿಟೆಕ್ಚರ್, ಲೋಡ್-ಸ್ಟ್ರ್ಯಾಟಿಫೈಡ್ ವಿನ್ಯಾಸ, ಹೆಚ್ಚಿನ ಸಾಮರ್ಥ್ಯದ ಚಾಸಿಸ್(4ಪಟ್ಟು ಹೆಚ್ಚು), ನಟ್‌ಗಳು ಮತ್ತು ಬೋಲ್ಟ್‌ಗಳು ಗೋಚರಿಸಿದ ಮೊದಲ ಪ್ರೀಮಿಯಂ ವಿನ್ಯಾಸ, 7 ಇಂಚಿನ ಸ್ಮಾರ್ಟ್‌ಸೆನ್ಸ್ ತಂತ್ರಜ್ಞಾನದ TFT ಟಚ್‌ಸ್ಕ್ರೀನ್, 3 ಗಂಟೆ 22 ನಿಮಿಷಗಳ ಅತಿ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.

ಹಾಗೆಯೇ ಇದು ಉತ್ತಮ ಸೌಕರ್ಯ, ಶೈಲಿ, ಕಾರ್ಯಕ್ಷಮತೆ, ಸುರಕ್ಷತೆ, ಶೇ30 ಹೆಚ್ಚುವರಿ ಬ್ಯಾಟರಿ ಬಾಳಿಕೆ, ಸುರಕ್ಷಿತ LFP ಬ್ಯಾಟರಿ, ಪವರ್‌ಫುಲ್ ಮಿಡ್-ಮೌಂಟ್ ಡ್ರೈವ್‌ನೊಂದಿಗೆ ತನ್ನ 4 ಕಿಲೋವ್ಯಾಟ್ ಪೀಕ್ ಮೋಟಾರ್ ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಝನ್ಸ್ಕರ್ ಆಕ್ವಾ, ಇಂಡಿಯನ್ ರೆಡ್, ಲೂನಾರ್ ವೈಟ್ ಮತ್ತು ಸ್ಟೀಲ್ ಗ್ರೇ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಈ ವೈವಿಧ್ಯಮಯ ಬಣ್ಣದ ಪ್ಯಾಲಿಟ್, ಸವಾರರ ಆದ್ಯತೆಗಳಿಗೆ ಸರಿಹೊಂದುವಂತೆ ಆಕರ್ಷಕವಾದ ಆಯ್ಕೆಗಳನ್ನು ನೀಡುತ್ತದೆ.
ಈ ಆಂಪಿಯರ್ ನೆಕ್ಸಸ್' ಉನ್ನತ ಕಾರ್ಯಕ್ಷಮತೆಯೊಂದಿಗೆ ಕುಟುಂಬಕ್ಕೆ ಬೇಕಾಗುವ ವೈಶಿಷ್ಟ್ಯಗಳ ಅನುಭವವನ್ನು ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಡೈಮಂಡ್ ಕಟ್ ಹೆಡ್‌ಲ್ಯಾಂಪ್‌ಗಳು ಮತ್ತು ಹಗುರವಾದ ಅಲ್ಯೂಮಿನಿಯಂ ಗ್ರಾಬ್ ಹ್ಯಾಂಡಲ್, ಆರ್ಕ್ಟಿಕ್ ಟರ್ನ್-ಪ್ರೇರಿತ ಟೈಲ್ ಲ್ಯಾಂಪ್‌ಗಳು, ದೊಡ್ಡ ಸೀಟ್, ಐದು ರೈಡಿಂಗ್ ಮೋಡ್‌ಗಳೊಂದಿಗೆ ಗಂಟೆಗೆ 93 ಕಿ.ಮೀ ಟಾಪ್ ಸ್ಪೀಡ್ ಮತ್ತು ಸಿಂಗಲ್ ಚಾರ್ಜ್‌ಗೆ ಸ್ಟ್ರಾಂಡರ್ಡ್ 136 ಕಿ.ಮೀ ರೇಂಜ್, ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಮತ್ತು IP67 ರೇಟಿಂಗ್ ಅನ್ನು ಪಡೆದುಕೊಂಡಿದೆ.
ಆಂಪಿಯರ್ ನೆಕ್ಸಸ್ ಇವಿ ಸ್ಕೂಟರ್, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ 10,000 ಕಿ.ಮೀ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿಗಳು ಸೇರಿದಂತೆ ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನಗಳಲ್ಲಿ ಸಲೀಸಾಗಿ ಓಡಿಸಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದಾಖಲೆಯ ಪ್ರಯಾಣವನ್ನು ಸಾಧಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದೆ. ಒಂದೇ ರೈಡ್‌ನಲ್ಲಿ 115 ನಗರಗಳು ಮತ್ತು ಪಟ್ಟಣಗಳಿಗೆ ಭೇಟಿ ನೀಡಿರುವುದರ ಜೊತೆಗೆ 1,860 ಕೆ.ಜಿ ತೂಕದ ಪಿಕಪ್ ಟ್ರಕ್ ಎಳೆಯುವ ಸಾಮರ್ಥ್ಯವಿರುವ ಮೊದಲ ಇಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ.


Click it and Unblock the Notifications








