ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

By Nagaraja

ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ವಸಾಹತುಶಾಹಿ ಆಳ್ವಿಕೆಯ ಮೂಲಕ ಭಾರತ ಸೇರಿದಂತೆ ಅನೇಕ ದೇಶಗಳನ್ನು ತನ್ನ ಕಪಿ ಮುಷ್ಠಿಯಲ್ಲಿರಿಸಿರುವ ಬ್ರಿಟನ್ ಮಗದೊಮ್ಮೆ ಮಿಲಿಟರಿ ಬಲವನ್ನು ತೋರ್ಪಡಿಸಲು ಸಜ್ಜಾಗಿ ನಿಂತಿದೆ.

ರಷ್ಯಾ ಅಧ್ಯಕ್ಷರ ಐಷಾರಾಮಿ ಗಾಡಿ ಹೇಗಿದೆ ನೋಡಿ

ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಮುಂದಾಗುತ್ತಿರುವ ಬ್ರಿಟನ್ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ ವಾಹಕ ಹಡಗನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಐಸಿಸ್ ಉಗ್ರರ ವಿರುದ್ಧದ ಕದನಕ್ಕೆ ಬಳಕೆ ಮಾಡಲಾಗುವುದು. ಅಷ್ಟೇ ಯಾಕೆ ವಿರುದ್ಧ ಪಾಳೇಯದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಲ್ಲೂ ನಡುಕ ಸೃಷ್ಟಿಸುವಂತಾಗಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಬ್ರಿಟನ್ ಪಾರ್ಲಿಮೆಂಟ್ ಗಿಂತಲೂ ದೊಡ್ಡದಾಗಿರುವ 65,000 ಟನ್ ಭಾರವುಳ್ಳ ಎಚ್ ಎಂಎಸ್ ಕ್ವೀನ್ ಎಲಿಜಬೆತ್ ಮತ್ತು ಎಚ್ ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಗಳೆಂಬ ಎರಡು ಯುದ್ಧ ವಿಮಾನ ವಾಹಕ ಹಡಗುಗಳನ್ನು ಅನಾವರಣಗೊಳಿಸಲಾಗಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಪ್ರಬಲ ಕದನ ಹಡಗು ಎಂದೇ ಇದನ್ನು ವಿಶ್ಲೇಷಿಸಲಾಗಿದೆ. ನೌಕಾದಳದ ಹಿರಿಯ ಕಮಾಂಡರ್ ಕೆಚ್ಚೆದೆಯ ಮಾತುಗಳ ಪ್ರಕಾರ, ಶತ್ರು ರಾಷ್ಟ್ರಗಳು ದಾಳಿ ನಡೆಸುವ ಮುನ್ನ ಎರಡೆರಡು ಬಾರಿ ಯೋಚಿಸಬೇಕಾಗಿತು ಎಂದು ಎಚ್ಚರಿಸಿದ್ದಾರೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಯುದ್ಧವನ್ನು ಆರಂಭಿಸುವ ಬದಲು ನಿಲ್ಲಿಸುವುದು ನಮ್ಮ ಗುರಿಯಾಗಿದೆ. ಹಾಗೊಂದು ವೇಳೆ ಯಾರೇ ಕದನಕ್ಕೆ ಮುಂದಾದ್ದಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದಿದ್ದಾರೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

932 ಅಡಿ ಉದ್ದದ ಎಚ್ ‌ಎಂಎಸ್ ಎಲಿಜಬೆತ್ ಎಷ್ಟು ಬೃಹತ್ತಾಗಿದೆಯೆಂದರೆ ರಾಯಲ್ ನೇವಿಯ ಹಳೆಯ ಕದನ ಹಡಗನ್ನೇ ಹೊತ್ತೊಯ್ಯುವಷ್ಟು ಸಾಮರ್ಥ್ಯ ಹೊಂದಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ನೂತನ ಎಲಿಜಬೆತ್ ಕದನ ಹಡಗು ಏಕಕಾಲಕ್ಕೆ 36ರಷ್ಟು ಎಫ್-35ಬಿ ಫೈಟರ್ ಜೆಟ್ ವಿಮಾನಗಳನ್ನು ಸಾಗಿಸುವಷ್ಟು ಸಮರ್ಥವಾಗಿದೆ. ಇದಲ್ಲದೆ ಮರ್ಲಿನ್ ಹೆಲಿಕಾಪ್ಟರ್, ಚಿನೂಕ್ಸ್, ಅಪಾಚಿ ಗನ್ ಶಿಪ್ ಮುಂತಾದವುಗಳನ್ನು ಸಾಗಿಸಲಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಹಾಗಿದ್ದರೂ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಪ್ರಾಯೋಗಿಕ ಸಂಚಾರ ಪರೀಕ್ಷೆ ನಡೆಯಲಿದೆ. ಬಳಿಕ 2020ರ ವೇಳೆಯಲ್ಲಷ್ಟೇ ಯುದ್ಧಕ್ಕೆ ಸಿದ್ಧಗೊಳ್ಳಲಿದೆ. ಇದಾದ 18 ತಿಂಗಳ ಬಳಿಕ ಸೋದರಿ ಎಚ್‌ಎಂಎಸ್ ಪ್ರಿನ್ಸ್ ಆಫ್ ವೇಲ್ಸ್ ಸಹ ಸೇರ್ಪಡೆಯಾಗಲಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಜಾಗತಿಕ ಶಾಂತಿಗೆ ಭೀತಿಯಾಗಿರುವ ಐಸಿಸ್ ಉಗ್ರರನ್ನು ಮಟ್ಟ ಹಾಕುವುದು ಪ್ರಮುಖ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳಿಗೂ ಸ್ಪಷ್ಟ ಸಂದೇಶವನ್ನು ಸಾರಲಾಗಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

10,000ದಷ್ಟು ಸೈನಿಕ ಬಲದ ನೆರವಿನಿಂದ ಬ್ರಿಟನ್‌ನ ಅತಿ ದೊಡ್ಡ ಯುದ್ಧ ಹಡಗನ್ನು ನಿರ್ಮಿಸಲಾಗಿದೆ. ಇದು ವಿಶ್ವ ವಿಖ್ಯಾತ ನಿಯಾಗ್ರ ಜಲಪಾತಗಿಂತಲೂ ದೊಡ್ಡದಾಗಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಪ್ರತಿ ಹಡಗಿನಲ್ಲೂ 3,000ದಷ್ಟು ಕಂಪಾರ್ಟ್ ಮೆಂಟ್ ಗಳಿದ್ದು 700ರಷ್ಟು ನಾವಿಕರಿರಲಿದ್ದಾರೆ. ಇದಲ್ಲದೆ 900ದಷ್ಟು ವಾಯು ಮತ್ತು ನೌಕಾದಳದ ಸೈನಿಕರನ್ನು ಹೊತ್ತೊಯ್ಯಬಹುದಾಗಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಮುಂದಿನ ದಿನಗಳಲ್ಲಿ ಬ್ರಿಟನ್‌ನ ಅತ್ಯಂತ ಪ್ರಬಲ ಆಯುಧವಾಗಿ ಕ್ವೀನ್ ಎಲಿಜಬೆತ್ ಕದನ ಹಡಗು ಮಾರ್ಪಾಡುಗೊಳ್ಳಲಿದೆ. ಇದು ನೌಕಾ ದಳದಲ್ಲಿ ಬ್ರಿಟನ್ ಗೆ ಮತ್ತಷ್ಟು ಬಲ ತುಂಬಲಿದೆ.

ಪುತಿನ್‌ಗೂ ನಡುಕ ಸೃಷ್ಟಿಸಿದ ಬ್ರಿಟನ್‌ನ ಅತ್ಯಂತ ದೊಡ್ಡ ಯುದ್ಧ ಹಡಗು

ಈ ಎಲ್ಲ ಬೆಳವಣಿಗೆಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೊದಲಿನಿಂದಲೂ ಯುದ್ಧ ಹಡಗು ನಿರ್ಮಿಸುವುದರಲ್ಲಿ ನಿಸ್ಸೀಮವೆನಿಸಿರುವ ರಷ್ಯಾ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಇವನ್ನೂ...

ಜಲಾಂತರ್ಗಾಮಿ ನೌಕೆಯಲ್ಲಿ ಕಪ್ಪು ಸಾಗರದೊಳಗೆ ಧುಮುಕಿದ ರಷ್ಯಾ ಅಧ್ಯಕ್ಷರು

ಇವನ್ನೂ...

ಇದೇನಿದು, ರಷ್ಯಾ ಅಧ್ಯಕ್ಷರಿಗೆ ಇಷ್ಟೊಂದು ಕಾರುಗಳೇ?

More from DriveSpark

Article Published On: Saturday, May 21, 2016, 10:01 [IST]
English summary
Britain’s two biggest and most potent-ever warships HMS Queen Elizabeth and HMS Prince of Wales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+