ಬ್ರಿಟನ್ ಪ್ರಧಾನಿಗೆ ಟ್ರಾಫಿಕ್ ಪೊಲೀಸರ ದಂಡ: ಅವರ ವಿಡಿಯೋ ಅವರಿಗೆ ಕುತ್ತಾಯಿತು...

ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪೊಲೀಸರು ದಂಡ ವಿಧಿಸುವುದು, ಕೆಲವೊಮ್ಮೆ ಎಲ್ಲವೂ ಸರಿಯಿದ್ದರೂ ಲಂಚ ಪಡೆಯುವುದನ್ನು ನಾವು ಈಗಾಗಲೇ ಹಲವು ಬಾರಿ ನೋಡಿದ್ದೇವೆ. ಇನ್ನು ರಾಜಕಾರಣಿಗಳು ಏನಾದರೂ ತಪ್ಪು ಮಾಡಿದರೆ, ಪೊಲೀಸ್ ಇಲಾಖೆ ದಂಡ ವಿಧಿಸದ ಹಲವು ಉದಾಹರಣೆಗನ್ನು ನೋಡಿದ್ದೇವೆ. ಆದರೆ ಇಂಗ್ಲೆಂಡ್‌ ಪೊಲೀಸರು ಪ್ರಧಾನಿಗೆ ದಂಡ ಹಾಕಿ ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು ಎಂದಿದ್ದಾರೆ.

ಇತೀಚೆಗೆ ಭಾರತ ಮೂಲದ ವ್ಯಕ್ತಿ ರಿಷಿ ಸುನಕ್ ಇಂಗ್ಲೆಂಡಿನ ಪ್ರಧಾನ ಮಂತ್ರಿಯಾಗಿ ವಿಶ್ವದೆಲ್ಲಡೆ ಸುದ್ದಿಯಾಗಿದ್ದರು. ಭಾರತದಲ್ಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಎಷ್ಟೇ ಪ್ರಧಾನಿಯಾದ್ರೂ ಕಾನೂನು ಅಡಿಯಲ್ಲಿ ಎಲ್ಲರೂ ಸಮಾನರೇ, ನಿಯಮ ಪಾಲಿಸದಿದ್ದರೇ ಇಂಗ್ಲೆಂಡ್‌ನಲ್ಲಿ ದಂಡ ಖಚಿತ. ಇತ್ತೀಚೆಗೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಪ್ರವಾಸವೊಂದರ ಭಾಗವಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಪೊಲೀಸರಿಂದ ದಂಡ ವಿಧಿಸಲಾಗಿದೆ.

ಬ್ರಿಟನ್ ಪ್ರಧಾನಿಗೆ ಟ್ರಾಫಿಕ್ ಪೊಲೀಸರ ದಂಡ: ಅವರ ವಿಡಿಯೋ ಅವರಿಗೆ ಕುತ್ತಾಯಿತು...

ರಿಷಿ ಸುನಕ್ ಉತ್ತರ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಆ ಸಮಯದಲ್ಲಿ ರಿಷಿ ಸುನಕ್ ಅವರು ಸೀಟ್ ಬೆಲ್ಟ್ ಧರಿಸದೆ ಲಂಕಾಶೈರ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದು ಸಂಚಾರ ನಿಯಮಗಳ ಉಲ್ಲಂಘನೆಯಾಗಿರುವುದರಿಂದ ರಿಷಿ ಸುನಕ್ ಅವರಿಗೆ ದಂಡ ವಿಧಿಸಲಾಗಿದೆ. ಸಾಮಾನ್ಯವಾಗಿ ಪ್ರಧಾನಿ ಪ್ರಯಾಣಿಸುವ ಕಾರು ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಹೊಂದಿರುತ್ತದೆ. ಅಲ್ಲದೇ ಅವರು ಯಾವ ಕಾರಿನಲ್ಲಿದ್ದಾರೆ ಎಂಬುದನ್ನು ಕೂಡ ಪತ್ತೆಹಚ್ಚುವುದು ಕಷ್ಟ. ಜೊತೆಗೆ ಕಾರು ಸಂಪೂರ್ಣ ಟಿಂಟೆಡ್ ಗ್ಲಾಸ್‌ಗಳನ್ನು ಹೊಂದಿರುತ್ತದೆ.

ಹಾಗಾದ್ರೆ ಪ್ರಧಾನಿ ಸೀಟ್‌ಬೆಲ್ಟ್ ಧರಿಸದಿರುವುದು ಪೊಲೀಸರಿಗೆ ಹೇಗೆ ತಿಳಿಯಿತು ಎಂಬ ಅನುಮಾನ ನಿಮಗರಿಬಹುದು. ರಿಷಿ ಸುನಕ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲು ಕಾರಿನಲ್ಲಿ ಕುಳಿತು ವಿಡಿಯೋ ರೆಕಾರ್ಡ್ ಮಾಡಿದ್ದರು. ಇದು ಸರ್ಕಾರದ ಯೋಜನೆಯೊಂದನ್ನು ವಿವರಿಸುವ ವಿಡಿಯೋವಾಗಿತ್ತು. ಆ ವಿಡಿಯೋದಲ್ಲಿ ರಿಷಿ ಸುನಕ್ ಸೀಟ್ ಬೆಲ್ಟ್ ಧರಿಸದಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇದರ ಆಧಾರದ ಮೇಲೆ ಪೊಲೀಸ್ ಇಲಾಖೆಯು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಕಠಿಣ ದಂಡ ವಿಧಿಸಿದೆ.

ಈಗ ಯುಕೆ ಪ್ರಧಾನಿ ರಿಷಿ ಸುನಕ್ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ಕೂಡ ಅಲ್ಲಿನ ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ. ಅಲ್ಲದೆ ಪೊಲೀಸ್ ಇಲಾಖೆ ವಿಧಿಸಿರುವ ದಂಡವನ್ನು ಪಾವತಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಯುಕೆ ಕಾನೂನಿನ ಪ್ರಕಾರ, ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದ ವ್ಯಕ್ತಿಗೆ ಪೊಲೀಸರು ಸುಮಾರು 10 ಸಾವಿರ ಭಾರತೀಯ ರೂಪಾಯಿ ದಂಡ ವಿಧಿಸಬಹುದು. ವರದಿಗಳ ಪ್ರಕಾರ ಈ ಮೊತ್ತವನ್ನು ರಿಷಿ ಸುನಕ್‌ಗೆ ದಂಡ ವಿಧಿಸಲಾಗಿದೆ.

ಆದರೆ ಇದೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ ಭಾರತೀಯ ಕರೆನ್ಸಿಯಲ್ಲಿ ಈ ದಂಡದ ಮೊತ್ತ ಸುಮಾರು 50 ಸಾವಿರ ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಸಂಚಾರ ನಿಯಮ ಉಲ್ಲಂಘಿಸಿದ ಇಂಗ್ಲೆಂಡ್ ಪ್ರಧಾನಿಗೆ ದಂಡ ವಿಧಿಸಿರುವ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ, ಭಾರತವಾದರೆ ಸ್ಥಳೀಯ ಕೌನ್ಸಿಲರ್ ಕೂಡ ಪೊಲೀಸರಿಗೆ ದಂಡ ಕಟ್ಟುವುದಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದರಿಂದ ನಾವು ಕಲಿಯಬಹುದಾದ 2 ಪ್ರಮುಖ ವಿಷಯಗಳಿವೆ. ಮೊದಲನೆಯದು, ಯಾವ ಹುದ್ದೆಯಲ್ಲಿದ್ದರೂ ತಪ್ಪು ತಪ್ಪೇ. ಯುಕೆ ಪೊಲೀಸ್ ಅಧಿಕಾರಿಗಳಂತೆ ನಮ್ಮ ಭಾರತದಲ್ಲೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಇದರಿಂದ ಜನರಲ್ಲಿ ಇಲಾಖೆಯ ಮೇಲೆ ಗೌರವ ಹೆಚ್ಚಾಗುವುದಲ್ಲದೇ, ಸಾಮಾನ್ಯರು ಕೂಡ ಕಾನೂನು ಅಡಿಯಲ್ಲಿ ಸಕ್ರಮವಾಗಿ ನಡೆದುಕೊಳ್ಳುತ್ತಾರೆ. ಪೊಲೀಸ್ ಅಧಿಕಾರಿಗಳು, ಉನ್ನತಾಧಿಕಾರಿಗಳ ಈ ಕ್ರಮವು ದೇಶದ ಬೆಳವಣಿಗೆ ಹಾಗೂ ಶಿಸ್ತನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಎರಡನೆಯ ವಿಷಯವೆಂದರೆ ನೀವು ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸಬೇಕು. ಕಾರ್ ಪ್ರಯಾಣಿಕರಿಗೆ ಪ್ರಮುಖ ಸುರಕ್ಷತಾ ವೈಶಿಷ್ಟ್ಯವೆಂದರೆ ಸೀಟ್ ಬೆಲ್ಟ್. ಹಠಾತ್ ಕಾರು ಅಪಘಾತದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಸಾವು ಮತ್ತು ಗಂಭೀರವಾದ ಗಾಯಗಳನ್ನು ತಡೆಯುತ್ತದೆ. ಹಾಗಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸುವುದನ್ನು ರೂಢಿಸಿಕೊಳ್ಳಿ. ಪ್ರಯಾಣದ ವೇಳೆ ರಸ್ತೆ ಸರಿಯಿಲ್ಲದಿದ್ದರೂ ನಮ್ಮ ಜೀವ ಉಳಿಸಿಕೊಳ್ಳುವ ಪ್ರಮುಖ ಜವಾಬ್ದಾರಿ ಪ್ರಯಾಣಿಕರದ್ದಾಗಿರುತ್ತದೆ.

Most Read Articles

Kannada
English summary
British prime minister fined by traffic police
Story first published: Monday, January 23, 2023, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X